Advertisment

ಕಳೆದ 4 ವರ್ಷದಲ್ಲಿ 15ನೇ ಪರೋಲ್​; ಚುನಾವಣಾ ಸಮಯದಲ್ಲಿ ಮತ್ತೆ ಹೊರಗೆ ಬಂದ ಸ್ವಯಂ ಘೋಷಿತ ದೇವಮಾನವ

author-image
Gopal Kulkarni
Updated On
ಕಳೆದ 4 ವರ್ಷದಲ್ಲಿ 15ನೇ ಪರೋಲ್​; ಚುನಾವಣಾ ಸಮಯದಲ್ಲಿ ಮತ್ತೆ ಹೊರಗೆ ಬಂದ ಸ್ವಯಂ ಘೋಷಿತ ದೇವಮಾನವ
Advertisment
  • 4 ವರ್ಷದಲ್ಲಿ 15ನೇ ಬಾರಿ ಪರೋಲ್​ ಮೇಲೆ ರಾಮ್ ರಹೀಮ್ ಸಿಂಗ್ ಬಿಡುಗಡೆ
  • ಚುನಾವಣಾ ಸಮಯದಲ್ಲಿಯೇ ಪರೋಲ್ ಮೇಲೆ ಆಚೆ ಬರುತ್ತಿರುವುದಾದ್ರು ಏಕೆ
  • ಶಿಕ್ಷೆಯಾದ ಬಳಿಕ ಕಳೆದ 4 ವರ್ಷಗಳಲ್ಲಿ 259 ದಿನ ಜೈಲಿನಾಚೆ ಕಳೆದಿರುವ ಅಪರಾಧಿ

ಡೇರಾಸಚ್ಚಾ ಸೌಧಾದ ನಾಯಕ ಸ್ವಯಂಘೋಷಿತ ದೇವಮಾನವ, ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ಗುರ್ಮಿತ್ ರಾಮ್​ ರಹೀಮ್ ಸಿಂಗ್ ಈಗ ಮತ್ತೆ ಜೈಲಿನಿಂದ ಆಚೆ ಬರುತ್ತಿದ್ದಾನೆ. ಅವನ ಪರೋಲ್​ಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದ ಮೇಲೆ ಹರಿಯಾಣದಲ್ಲಿ ಚುನಾವಣೆ ಎದುರಲ್ಲೇ ಇರುವಾಗ ಮತ್ತೊಮ್ಮೆ ಪರೋಲ್​​ ಮೇಲೆ ಜೈಲಿನಿಂದ ಹೊರಗೆ ಬರುತ್ತಿದ್ದಾನೆ.
ಕಳೆದ ನಾಲ್ಕು ತಿಂಗಳಲ್ಲಿ ರಾಮ್​ ರಹೀಮ್ ಸಿಂಗ್​ ಒಂಬತ್ತನೇ ಬಾರಿ ತಾತ್ಕಾಲಿಕ ಬಿಡುಗಡೆ ಪಡೆಯುತ್ತಿದ್ದು. ಕಳೆದ 4 ವರ್ಷದಲ್ಲಿ 15ನೇ ಬಾರಿ ಪರೋಲ್ ಮೇಲೆ ಆಚೆ ಬರುತ್ತಿದ್ದಾನೆ ರಾಮ್ ರಹೀಮ್ ಸಿಂಗ್

Advertisment

ಇದನ್ನೂ ಓದಿ:ವರ್ಷಕ್ಕೆ ಎರಡೇ ರೂಪಾಯಿ ಆದಾಯ! ಆದರೂ ಈ ಕಡುಬಡವನಿಗೆ ಸಿಗಬೇಕಾದ ಸ್ಕಾಲರ್​​ಶಿಪ್ ಸಿಗಲಿಲ್ಲ ಏಕೆ? 

ಜೈಲಿನಿಂದ ಬಿಡುಗಡೆಯಾಗುತ್ತಿರುವ ರಾಮ್​ ರಹೀಮ್ ಸಿಂಗ್ ಪಂಜಾಬ್ ಹಾಗೂ ಹರಿಯಾಣದಲ್ಲಿ ಭಾರೀ ಪ್ರಮಾಣದ ಭಕ್ತರನ್ನು ಹೊಂದಿದ್ದು. ಹರಿಯಾಣದಲ್ಲಿ ಎಲೆಕ್ಷನ್​ ಸಮಯದಲ್ಲಿಯೇ ಈಗ ಮತ್ತೊಮ್ಮೆ ಜೈಲಿನಿಂದ ತಾತ್ಕಾಲಿಕವಾಗಿ ಆಚೆ ಬರುತ್ತಿದ್ದಾನೆ. ಈ ಹಿಂದೆಯೂ ಕಾರ್ಪೋರೇಷನ್ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಈತ ಪರೋಲ್ ಮೇಲೆ ಆಚೆ ಬಂದಿದ್ದ.

ಇದನ್ನೂ ಓದಿ: 56 ವರ್ಷಗಳ ಹಿಂದೆ ಪತನವಾಗಿದ್ದ ಭಾರತೀಯ ವಿಮಾನ; 102 ಸೈನಿಕರಲ್ಲಿ ನಾಲ್ವರ ಶವ ಈಗ ಪತ್ತೆ!

Advertisment

ಆದ್ರೆ ಪರೋಲ್ ಮೇಲೆ ಆಚೆ ಬರುತ್ತಿರುವ ಡೇರಾ ಸಚ್ಚಾಸೌಧಾದ ಸಂಸ್ಥಾಪಕನಿಗೆ ಹಲವು ಷರತ್ತುಗಳ ಮೇಲೆ ಪರೋಲ್ ನೀಡಲಾಗಿದೆ. ಹರಿಯಾಣಕ್ಕೆ ಯಾವುದೇ ಕಾರಣಕ್ಕೂ ಕಾಲಿಡುವಂತಿಲ್ಲ. ಚುನಾವಣೆ ಸಂಬಂಧಿಸಿದ ಯಾವದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಅದು ವ್ಯಕ್ತಿಯೊಂದಿಗೆ ಆಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಯೇ ಆಗಲಿ. ಚುನಾವಣೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಕಟ್ಟೆಚ್ಚರಿಕೆ ನೀಡಿ ಪರೋಲ್ ನೀಡಲಾಗುತ್ತಿದೆ.

ಇದನ್ನೂ ಓದಿ:VIral Video ಟೇಲರ್​ ಸ್ವಿಫ್ಟ್​ ಸಹಿ ಇರುವ ಗಿಟಾರ್ ಖರೀದಿಸಿ ವೃದ್ಧ, ವೇದಿಕೆಯ ಮೇಲೆಯೇ ಒಡೆದು ಹಾಕಿದ್ದು ಏಕೆ?

ಕಳೆದ ತಿಂಗಳು ಅಕ್ಟೋಬರ್ 13ರಂದು 21 ದಿನಗಳ ಕಾಲ ಪರೋಲ್ ಮೇಲೆ ರಾಮ್ ರಹೀಮ್ ಸಿಂಗ್​ರನ್ನ ಬಿಡುಗಡೆ ಮಾಡಲಾಗಿತ್ತು. ಸೆಪ್ಟಂಬರ್ 2ರಂದು ಮತ್ತೆ ವಾಪಸ್ ಸುನರಿಯಾ ಜೈಲಿಗೆ ಸೇರಿಕೊಂಡಿದ್ದ ರಾಮ್​ ರಹೀಮ್ ಸಿಂಗ್ 2020ರಿಂದ ಇಲ್ಲಿಯವರೆಗೂ ಒಟ್ಟು 14 ಬಾರಿ ಪರೋಲ್ ಮೇಲೆ ಆಚೆ ಬಂದಿರುವ ಡೇರಾ ಸಚ್ಚಾಸೌಧಾದ ಸಂಸ್ಥಾಪಕ, ಶಿಕ್ಷೆಯಾದ ಮೇಲೂ 259 ದಿನಗಳನ್ನು ಜೈಲಿನಾಚೆ ಕಳೆದಿದ್ದಾನೆ. ಈಗ ಮತ್ತೆ ಪರೋಲ್​ ಮೇಲೆ ಆಚೆ ಬರುವುದಕ್ಕೆ ಸಜ್ಜಾಗಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment