ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಬ್ಯಾಗ್ನಲ್ಲಿ ಪುಸ್ತಕ ಪತ್ತೆ
ದರ್ಶನ್ ಮನ ಬದಲಾಯಿಸಬಹುದಾ ಆ 20 ಪುಸ್ತಕಗಳು?
ದರ್ಶನ್ ಓದುವ ಹವ್ಯಾಸ ಇದೆಯಾ? ಯಾವ ಪುಸ್ತಕ ಇಷ್ಟ?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಮೆರೆದ ಕಾರಣ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಿನ್ನೆ ಸ್ಥಳಾಂತರಿಸಲಾಗಿದೆ. ಆದರೆ ಸ್ಥಳಾಂತರದ ವೇಳೆ ದರ್ಶನ್ ನೀಲಿ ಜೀನ್ಸ್, PUMA ಟೀ-ಶರ್ಟ್ ಮತ್ತು ಕೂಲಿಂಗ್ ಗ್ಲಾಸ್, ಕೈಯಲ್ಲೊಂದು ಶರ್ಟ್ ಹಿಡಿದುಕೊಂಡು ಜೈಲಿಗೆ ಬಂದಿದ್ದಾರೆ. ಜೈಲಿಗೆ ಬರುವ ವೇಳೆ A2 ಆರೋಪಿ ದಾಸ ಪುಸ್ತಕಗಳನ್ನು ಹಿಡಿದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಹೊರಬಿದಿದ್ದಿದೆ.
ದರ್ಶನ್ ಜೈಲಿನಲ್ಲಿ ಓದಲು ಸುಮಾರು 20 ಪುಸ್ತಕಗಳನ್ನು ಹಿಡಿದುಕೊಂಡು ಬಳ್ಳಾರಿ ಜೈಲಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳು ಸೇರಿವೆ ಎನ್ನಲಾಗುತ್ತಿದೆ. ಜೈಲಿನಲ್ಲಿ ಬಿಡುವಿನ ಸಮಯದಲ್ಲಿ ಓದಲು ಎಂದು ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಧ್ಯಾಹ್ನದವರೆಗೆ ಏನನ್ನೂ ತಿನ್ನಲಿಲ್ಲ; ಬಳ್ಳಾರಿ ಜೈಲಿನಲ್ಲಿ ನರಕ ದರ್ಶನ.. ಮೊದಲ ರಾತ್ರಿ ಕಳೆದ ಆರೋಪಿ..!
ಬಳ್ಳಾರಿಗೆ ಜೈಲಿಗೆ ಬಂದ ದರ್ಶನ್ಗೆ ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿಗಳು ನಟನಿಗೆ ಸೇರಿದ ವಸ್ತುಗಳನ್ನು ಬ್ಯಾಗ್ನಲ್ಲಿ ತುಂಬಿಸಿ ಕೊಟ್ಟಿದ್ದಾರೆ. ಈ ವೇಳೆ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮುದ್ದಾದ ಹೆಂಡತಿ ಮುಗಿಸಲು ಮನೆಯೊಳಗೆ ಅಡಗಿ ಕೂತಿದ್ದ.. ಕೊರಿಯೋಗ್ರಾಫರ್ ಸಾವಿಗೆ ಅಸಲಿ ಕಾರಣ ಬಯಲು
ಸುಮಾರು 20 ಪುಸ್ತಕಗಳನ್ನು ದರ್ಶನ್ ಓದಲು ಬಳ್ಳಾರಿ ಜೈಲಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಪುಸ್ತಕಗಳನ್ನು ಕುಟುಂಬಸ್ಥರು ಮತ್ತು ಸ್ನೇಹಿತರು ಭೇಟಿ ನೀಡುವ ಸಮಯದಲ್ಲಿ ನೀಡಿದ್ದರು ಎನ್ನಲಾಗುತ್ತಿದೆ.
ಇನ್ನು ದರ್ಶನ್ ಬಳಿ ಯಾವ್ಯಾವ ಪುಸ್ತಕ ಇದೆ ಎಂದು ತಿಳಿದುಬಂದಿಲ್ಲ. ಸದ್ಯ ಆ 20 ಪುಸ್ತಕಗಳು ದರ್ಶನ್ ಮನ ಬದಲಾಯಿಸಬಹುದಾ? ಎಂಬ ಪ್ರಶ್ನೆ ಮೂಡಿದೆ. ಈ ಹಿಂದೆಯೂ ಜೈಲು ಸೇರಿದ್ದಾಗ ದರ್ಶನ್ ಪುಸ್ತಕ ಓದಿದ್ದರು ಎಂಬ ಬಗ್ಗೆ ಹೇಳಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ