/newsfirstlive-kannada/media/post_attachments/wp-content/uploads/2024/04/Marriage.jpg)
ಮಧ್ಯಪ್ರದೇಶ: ವಿವಾಹಿತ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಸೊಸೆಯನ್ನು ಅಪಹರಿಸಿ ವಿವಾಹವಾಗಿ ಕೊನೆಗೆ ಆಕೆಗೆ ಲೈಂಗಿಕ ಶೋಷಣೆ ನೀಡಿರುವ ಘಟನೆ ಖಾರ್ಗೋನ್​ ನಲ್ಲಿ ಬೆಳಕಿಗೆ ಬಂದಿದೆ.
ಫೆಬ್ರವರಿ 27ರಂದು 24 ವರ್ಷದ ವಿವಾಹಿತ ಮಹಿಳೆ ಗಂಡನ ಸಂಬಂಧಿಯಾದ 16 ವರ್ಷದ ಬಾಲಕಿಯನ್ನು ಅಪಹರಿಸಿದ್ದಳು. ಕಳೆದ ವಾರ ಇಬ್ಬರನ್ನು ಬರೂದ್​ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಠಾಣಾಧಿಕಾರಿ ಅಧಿಕಾರಿ ರಿತೇಶ್​ ಯಾದವ್​ ಈ ಬಗ್ಗೆ ಮಾತನಾಡಿದ್ದು, ಆರೋಪಿ ತಾನು ಸಲಿಂಗಿ ಎಂದು ಹೇಳಿಕೊಂಡಿದ್ದು ಬಾಲಕಿ ಜೊತೆಗೆ ಸಂಬಂಧಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
ಮಹಿಳೆ ಸಂತ್ರಸ್ತೆಯನ್ನು ಇಂದೋರ್​ನಿಂದ ಧಮ್ನೋಡ್​ಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಗಂಡ-ಹೆಂಡತಿಯಂತೆ ವಾಸಿಸಲು ಪ್ರಯತ್ನಿಸಿದ್ದರು.
ಮಹಿಳೆ ಒಂದು ವರ್ಷದ ಹಿಂದೆ ಉಮರಖಾಲಿ ಗ್ರಾಮದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದಳು. ಬಳಿಕ ಗಂಡ ಸಂಬಂಧಿಕಳಾದ ಸಂತ್ರಸ್ತೆಯ ಜೊತೆಗೆ ಸಂಬಂಧ ಹೊಂದಿರುವುದಾಗಿ ಪೊಲೀಸರೊಂದಿಗೆ ಹೇಳಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಹಿಳೆಯ ಬಗ್ಗೆ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us