2023ನೇ ಸಾಲಿನಲ್ಲಿ ಇಡೀ ದೇಶದಲ್ಲಿ 65 ಲಕ್ಷ ವಿದ್ಯಾರ್ಥಿಗಳು ಫೇಲಾಗಿದ್ದು ಹೇಗೆ?
10, 12ನೇ ತರಗತಿಯ ವಿದ್ಯಾರ್ಥಿನಿಯರ ಬಗ್ಗೆ ಶಿಕ್ಷಣ ಸಚಿವಾಲಯ ಹೇಳಿದ್ದೇನು?
ಯಾವ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರು ಫೇಲಾಗಿದ್ದಾರೆ ಗೊತ್ತಾ?
ನವದೆಹಲಿ: ಪ್ರತಿ ಬಾರಿ 10ನೇ ತರಗತಿ ಹಾಗೂ 12 ತರಗತಿಯ ರಿಸಲ್ಟ್ಗಳು ಬಂದಾಗ ಬಹುತೇಕ ವಿದ್ಯಾರ್ಥಿನಿಯರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಸ್ ಆಗಿರುವುದು ಕಂಡಿದ್ದೇವೆ. ಆ ವಿಚಾರವಾಗಿ ವಿದ್ಯಾರ್ಥಿಗಳ ಕುರಿತು ಅನೇಕ ಟ್ರೋಲ್ ಮೇಮ್ಸ್ಗಳನ್ನು ಮಾಡಿದ್ದು ಇದೆ. ಆದ್ರೆ ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ಒಂದು ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಇದೆ.
ಇದನ್ನೂ ಓದಿ:ದಳಪತಿ ವಿಜಯ್ ಪಕ್ಷದ ಫ್ಲ್ಯಾಗ್ನಲ್ಲಿರೋ ಹೂವು ಯಾವುದು.. ಇದರ ಮಹತ್ವ, ಇತಿಹಾಸ ಏನ್ ಹೇಳುತ್ತೆ?
ಸುಮಾರು 65 ಲಕ್ಷದಷ್ಟು ವಿದ್ಯಾರ್ಥಿಗಳು ಕಳೆದ ವರ್ಷ 10 ಮತ್ತು 12ನೇ ತರಗತಿಯಲ್ಲಿ ಅನುತ್ತೀರ್ಣವಾಗಿದ್ದಾರೆ. 56 ಸ್ಟೇಟ್ ಬೋರ್ಡ್ ಹಾಗೂ 3 ನ್ಯಾಷನಲ್ ಬೋರ್ಡ್ ಸೇರಿದಂತೆ ಒಟ್ಟು 59 ಶಾಲೆಗಳಲ್ಲಿ 12ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಇದನ್ನೂ ಓದಿ:ವಿಶ್ವದ ಶ್ರೀಮಂತ ದೇವಾಲಯಕ್ಕೆ ಬಿಗ್ ಶಾಕ್.. ತಿರುಪತಿಗೆ ತೆರಳುವ ಭಕ್ತರಿಗೆ TTDಯಿಂದ ಮಹತ್ವದ ಸೂಚನೆ
ಶೇಕಡಾವಾರು ನೋಡಿದಾಗ ವಿದ್ಯಾರ್ಥಿನಿಯರೇ ಹೆಚ್ಚು ಸಂಖ್ಯೆಯಲ್ಲಿ ಪಾಸ್ ಆಗಿರುವುದು ಇದೆ. ಆದ್ರೆ ಮತ್ತೊಂದು ಅಚ್ಚರಿಯ ಅಂಶ ಅಂದ್ರೆ 10 ಮತ್ತು 12ನೇ ತರಗತಿಯ ಒಟ್ಟು 65 ಲಕ್ಷ ವಿದ್ಯಾರ್ಥಿಗಳು 2023ರ ಸಾಲಿನ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ ಎಂದು ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ
33.5 ಲಕ್ಷ 10ನೇ ತರಗತಿಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ಮುಂದಿನ ಗ್ರೇಡ್ಗೆ ಹೋಗಿಲ್ಲ. 5.5 ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆನೇ ಹಾಜರಾಗಿಲ್ಲ. 28 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೂ ಫೇಲ್ ಆಗಿದ್ದಾರೆ ಎಂಬ ಮಾಹಿತಿ ಈಗ ದೊರಕಿದೆ.
ಅದೇ ರೀತಿ 12ನೇ ತರಗತಿಯಲ್ಲಿಯೂ ಕೂಡ ಇದೇ ರೀತಿಯೇ ಇದೆ. 32.4 ಲಕ್ಷ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸವನ್ನ ಮುಂದುವರಿಸಿಲ್ಲ. 5.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ ಮತ್ತು 27.2 ಲಕ್ಷ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ರಾಷ್ಟ್ರೀಯ ಬೋರ್ಡ್ ಶಾಲೆಗಳಿಗೆ ಹೋಲಿಸಿ ನೋಡಿದಲ್ಲಿ ಒಟ್ಟು ಶೇಕಡಾ 6 ರಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಸ್ಟೇಟ್ ಬೋರ್ಡ್ಗಳಿಗೆ ಹೋಲಿಸಿ ನೋಡಿದಾಗ ಇದರ ಸಂಖ್ಯೆ ಶೇಕಡಾ 16ಕ್ಕಿಂತ ಅಧಿಕವಿದೆ.
10ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳು ಫೇಲಾಗಿದ್ದು ಮಧ್ಯಪ್ರದೇಶ ರಾಜ್ಯದಲ್ಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರಗಳಿವೆ. ಅದರಂತೆ 12ನೇ ಕ್ಲಾಸ್ನಲ್ಲಿ ಅತಿ ಹೆಚ್ಚು ಫೇಲಾದ ವಿದ್ಯಾರ್ಥಿಗಳು ಉತ್ತರಪ್ರದೇಶದಲ್ಲಿದ್ದಾರೆ.
ಒಟ್ಟಾರೆಯಾಗಿ ಹಿಂದಿನ ವರ್ಷಕ್ಕೆ ಹೋಲಿಸಿ ನೋಡಿದಲ್ಲಿ 2023ರ ಸಾಲಿನ 10ನೇ ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರ ಫೇಲಾದವರ ಸಂಖ್ಯೆ ಜಾಸ್ತಿಯಿದೆ. ಆದ್ರೆ 2023ರಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚು ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇದೆಲ್ಲವನ್ನೂ ನೋಡಿದಾಗ ಭಾರತದಲ್ಲಿ ಕಲಿಕೆಯ ವಿಚಾರವಾಗಿ ಗಂಡು ಹೆಣ್ಣು ಮಕ್ಕಳಗಳ ನಡುವೆ ಒಂದು ತಾರತಮ್ಯ ಪೋಷಕರಲ್ಲಿ ಇನ್ನೂ ಇದೆ ಎಂಬುದು ಸ್ಪಷ್ಟವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ