ಧ್ವಜದಲ್ಲಿನ ಹೂವು ಬಳ್ಳಿಯಲ್ಲಿ ಆಗುತ್ತೋ, ಮರದಲ್ಲಿ ಬಿಡುತ್ತೋ?
ಫ್ಲ್ಯಾಗ್ನಲ್ಲಿ ಇರೋ ಹೂವು ಇತಿಹಾಸದ ನೆನೆಪು ಮಾಡಿತಾ?
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಟ ವಿಜಯ್ ರೆಡಿ
2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ದಳಪತಿ ವಿಜಯ್ ಈಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚೆನ್ನೈನ ಕಚೇರಿಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ ಪಕ್ಷದ ಕಾರ್ಯಕ್ರಮದಲ್ಲಿ ಫ್ಲ್ಯಾಗ್ ಮತ್ತು ಗೀತೆಯನ್ನು ದಳಪತಿ ವಿಜಯ್ ಅವರು ಅನಾವರಣಗೊಳಿಸಿದ್ದಾರೆ. ಈ ವೇಳೆ ಅವರು ಅನಾವರಣ ಮಾಡಿರುವ ಧ್ವಜದಲ್ಲಿ ವಾಗೈ ಎನ್ನುವ ಹೂವು ಇದ್ದು ಸದ್ಯ ಇದರ ಬಗೆಗಿನ ಮಾಹಿತಿ ಏನೆಂಬುದು ಇಲ್ಲಿ ಪೂರ್ಣವಾಗಿ ವಿವರಿಸಲಾಗಿದೆ.
ಇದನ್ನೂ ಓದಿ: ರಾಜಕಾರಣದಲ್ಲಿ ಹೊಸ ಇತಿಹಾಸಕ್ಕೆ ಸಜ್ಜಾದ ದಳಪತಿ ವಿಜಯ್.. ಪಕ್ಷದ ಫ್ಲ್ಯಾಗ್, ಗೀತೆ ಅನಾವರಣ; ಪ್ರತಿಜ್ಞೆ ಏನು?
ವಾಗೈ ಹೂವು ಇದು ಅಲ್ಬಿಜಿಯಾ ಲೆಬ್ಬೆಕ್ (Albizia lebbeck) ಫ್ಯಾಬೇಸಿಯ ಕುಟುಂಬದ ಒಂದು ಜಾತಿ ಸಸ್ಯ. ಈ ಹೂವುಗಳು ದೊಡ್ಡದಾದ 18 ರಿಂದ 30 ಮೀಟರ್ ಎತ್ತರದ ಮರದಲ್ಲಿ ಆಗುತ್ತವೆ. ಈ ಮರಗಳು ಮಯನ್ಮಾರ್ ರಾಷ್ಟ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಾಗೇ ಭಾರತ, ಆಸ್ಟ್ರೇಲಿಯಾದಲ್ಲೂ ಇವುಗಳು ಅಲ್ಲಾಲ್ಲಿ ಇವೆ. ಇಂಗ್ಲಿಷ್‌ನಲ್ಲಿ ಈ ಹೂವುಗಳನ್ನು ಸಿರಿಸ್, ಇಂಡಿಯನ್ ಸಿರಿಸ್, ಈಸ್ಟ್ ಇಂಡಿಯನ್ ವಾಲ್‌ನಟ್, ಬ್ರೂಮ್ ರೈನ್‌ಟ್ರೀ, ಲೆಬ್ಬೆಕ್ ಎಂತೆಲ್ಲ ಕರೆಯುತ್ತಾರೆ. ವೆಸ್ಟ್ ಇಂಡೀಸ್, ದಕ್ಷಿಣ ಅಮೆರಿಕಾದಲ್ಲಿ ಈ ಮರವನ್ನು ಶೇಕ್ ಶೇಕ್ ಟ್ರೀ ಎನ್ನುತ್ತಾರೆ.
ಇದನ್ನೂ ಓದಿ: ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?
ವಾಗೈ ಹೂವಿನ ಮರವನ್ನು ಆರೋಗ್ಯದ ವಿಚಾರಕ್ಕೂ ಬಳಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಇದನ್ನು ಹುಣ್ಣು, ಕೆಮ್ಮು, ಕಣ್ಣು, ಜ್ವರ, ಜಿಂಗೈವಿಟಿಸ್, ಶ್ವಾಸಕೋಶದ ತೊಂದರೆಗಳು, ಪೆಕ್ಟೋರಲ್ ಸಮಸ್ಯೆಗಳಿಗೆ ಬಳಸಲಾಗುತ್ತಿತ್ತಂತೆ. ಕಿಬ್ಬೊಟ್ಟೆಯ ಗೆಡ್ಡೆಗಳಿಗೆ ಟಾನಿಕ್ ಆಗಿ ಇದನ್ನು ನೀಡಲಾಗುತ್ತಿತ್ತು ಎಂದು ತಿಳಿದಿದೆ. ಈ ಮರ ದೊಡ್ಡದಾಗಿ ಇರುವುದರಿಂದ ಭಾರತ ಮತ್ತು ಪಾಕಿಸ್ತಾನದಲ್ಲಿ ಮರದ ಉತ್ಪಾದನೆಗೆ ( ದೊಡ್ಡ ದೊಡ್ಡ ಮರದ ದಿಮ್ಮಿ) ಬಳಸಲಾಗುತ್ತದೆ.
ತಮಿಳುನಾಡಿನಲ್ಲಿ ಈ ಹೂವುಗಳನ್ನು ವಾಗೈ ಎಂದು ಕರೆಯಲಾಗುತ್ತದೆ. ತಮಿಳುನಲ್ಲಿ ವಾಗೈ ಎಂದರೆ ವಿಜಯ, ಗೆಲುವು ಎಂಬ ಅರ್ಥಗಳು ಬರುತ್ತವೆ. ಹೀಗಾಗಿಯೇ ಇತಿಹಾಸದಲ್ಲಿ ಸಂಗಂ ಸಾಮ್ರಾಜ್ಯದಲ್ಲಿ ಯುದ್ಧದಿಂದ ಗೆದ್ದು ಬಂದ ನಂತರ ಸಂಗಂ ರಾಜರು ಹಾರವಾಗಿ ಈ ವಾಗೈ ಹೂವುಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಈ ಹೂವು ಸಂಗಂ ರಾಜರ ವಿಜಯದ ಸಂಕೇತವಾಗಿದೆ. ಇದನ್ನೇ ಎಲೆಕ್ಷನ್ನಲ್ಲಿ ಗೆಲ್ಲುವ ಉದ್ದೇಶದಿಂದ, ವಿಜಯದ ಸಂಕೇತವಾಗಿ ಫ್ಲ್ಯಾಗ್ನಲ್ಲಿ ನಟ ದಳಪತಿ ವಿಜಯ್ ಅವರು ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?
ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರುವರಿಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯ ಪಕ್ಷ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಚೆನ್ನೈನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಫ್ಲ್ಯಾಗ್ ಹಾಗೂ ಗೀತೆ ಅನಾವರಣ ಮಾಡಿದ್ದಾರೆ. ಪಕ್ಷ ಧ್ವಜರೋಹಣ ಮಾಡುವಾಗ ನಟ ವಿಜಯ್ ಸೇರಿದಂತೆ ಪಕ್ಷಕ್ಕೆ ಸಂಬಂಧಿಸಿದ 300 ಜನರು ಭಾಗಿಯಾಗಿದ್ದರು. ವಿಜಯ್ ಅವರ ತಂದೆ ಚಂದ್ರಶೇಖರ್ ಹಾಗೂ ತಾಯಿ ಶೋಭಾ ಕೂಡ ಇದೇ ವೇಳೆ ಇದ್ದರು. 2026ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಹೊಸ ಕನಸೊಂದಿಗೆ, ರಾಜಕಾರಣದಲ್ಲಿ ಹೊಸ ಹೆಜ್ಜೆಯೊಂದಿಗೆ ಹೊಸ ಇತಿಹಾಸ ಸೃಷ್ಟಿಸೋ ಭರವಸೆಯಲ್ಲಿ ಇರುವುದು ಕನ್ಫರ್ಮ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ