newsfirstkannada.com

ಬಜೆಟ್​ ಮಂಡನೆಯಲ್ಲಿದ್ದ 92 ವರ್ಷಗಳ ಹಳೇ ಸಂಪ್ರದಾಯ ಬದಲಾಯಿಸಿದೆ ಮೋದಿ ಸರ್ಕಾರ.. ಈ ಬಗ್ಗೆ ನಿಮಗೆಷ್ಟು ಗೊತ್ತು..?

Share :

Published February 1, 2024 at 10:11am

Update February 1, 2024 at 10:13am

    ಸಂಸತ್​​ನಲ್ಲಿ ಇಂದು ಕೇಂದ್ರದ ಬಜೆಟ್ ಮಂಡನೆ

    ಬಜೆಟ್ ವಿಚಾರದಲ್ಲಿ ಕೇಂದ್ರದಿಂದ ಹಲವು ಬದಲಾವಣೆ

    ರೈಲ್ವೆ ಬಜೆಟ್, ಸಾಮಾನ್ಯ ಬಜೆಟ್ ವಿಲೀನದ ಬಗ್ಗೆ ಗೊತ್ತಾ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಧಿಕಾರಾವಧಿಯಲ್ಲಿ ಸತತ 6ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಸಂಸತ್​​ನಲ್ಲಿ ಇವತ್ತು ಮೋದಿ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಮಧ್ಯಂತರ ಆಯವ್ಯಯಗಳ ಪಟ್ಟಿ ಇದಾಗಿದ್ದು, ಸಾರ್ವತ್ರಿಕ ಚುನಾವಣೆ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ. ಚುನಾವಣಾ ವರ್ಷ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹೊಂದಲಾಗಿದೆ.

ಇನ್ನು ದೇಶದ ಬಜೆಟ್‌ ಇತಿಹಾಸವನ್ನು ನೋಡಿದರೆ ಮೋದಿ ಸರ್ಕಾರದ ಎರಡು ಅಧಿಕಾರಾವಧಿಯಲ್ಲಿ ಅನೇಕ ದೊಡ್ಡ, ದೊಡ್ಡ ಬದಲಾವಣೆಗಳು ಆಗಿವೆ. ಅದರಲ್ಲಿ ಬಹುಮುಖ್ಯವಾಗಿ ಬಜೆಟ್‌ಗೆ ಸಂಬಂಧಿಸಿ 92 ವರ್ಷಗಳ ಹಳೆಯ ಸಂಪ್ರದಾಯ ಒಂದನ್ನು ಬದಲಾಯಿಸಲಾಗಿದೆ. ಅದು ರೈಲ್ವೆ ಬಜೆಟ್​ಗೆ ಸೇರಿದ್ದಾಗಿದೆ.

ಇದನ್ನೂ ಓದಿ:ಈ ಸಲ ಏನೂ ಇಲ್ಲ ಅಂತ ಹೇಳಂಗೇ ಇಲ್ಲ.. 2019 ಮಧ್ಯಂತರ ಬಜೆಟ್​ನಲ್ಲಿ ಆಗಿದ್ದವು 5 ದೊಡ್ಡ ಘೋಷಣೆಗಳು..!

ರೈಲ್ವೆ ಮತ್ತು ಸಾಮಾನ್ಯ ಬಜೆಟ್ ವಿಲೀನ..!
ಮೋದಿ ಅಧಿಕಾರದ ಅವಧಿಯಲ್ಲಿ ಬದಲಾದ 92 ವರ್ಷಗಳ ಸಂಪ್ರದಾಯ ರೈಲ್ವೆ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ಅನ್ನು ವಿಲೀನ ಮಾಡಿ ಒಟ್ಟಿಗೆ ಮಂಡಿಸಲು ಪ್ರಾರಂಭಿಸಿತು. 2017ರಲ್ಲಿ ಮೋದಿ ಸರ್ಕಾರ ಈ ದೊಡ್ಡ ಬದಲಾವಣೆಯನ್ನು ಮಾಡಿದೆ. ನೀತಿ ಆಯೋಗದಿಂದ ಪ್ರಸ್ತಾವನೆ ಬಂದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡೂ ಬಜೆಟ್​ ಅನ್ನು ವಿಲೀನಗೊಳಿಸಲಾಗಿದೆ.

ಈ ಹಿಂದೆ ಪ್ರತ್ಯೇಕ ಬಜೆಟ್ ಮಂಡನೆ ಆಗ್ತಿತ್ತು
2017ಕ್ಕೂ ಮೊದಲು ದೇಶದಲ್ಲಿ ಎರಡು ಬಜೆಟ್‌ ಮಂಡನೆ ಆಗುತ್ತಿತ್ತು. ಮೊದಲನೆಯದು ರೈಲು ಬಜೆಟ್ ಮತ್ತು ಎರಡನೆಯದು ಸಾಮಾನ್ಯ ಬಜೆಟ್. ಸಾಮಾನ್ಯ ಬಜೆಟ್​ನಲ್ಲಿ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಘೋಷಣೆಗಳ ಬಗ್ಗೆ ಸರ್ಕಾರ ಮಾಹಿತಿ ನೀಡುತ್ತಿತ್ತು. ಭಾರತೀಯ ರೈಲ್ವೆಗೆ ಸಂಬಂಧಿಸಿದ ಘೋಷಣೆಗಳಿಗಾಗಿ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸಲಾಗುತ್ತಿತ್ತು.

1924 ರಿಂದ ಇತ್ತು ಈ ಸಂಪ್ರದಾಯ..!
1924ರಲ್ಲಿ, ಬ್ರಿಟಿಷ್ ಆಳ್ವಿಕೆಯಲ್ಲಿ ರೈಲ್ವೆ ಬಜೆಟ್ ಮೊದಲ ಬಾರಿಗೆ ಮಂಡನೆಗೊಂಡಿತ್ತು. ಅಂದಿನಿಂದ ಪ್ರತಿ ವರ್ಷ ಸಾಮಾನ್ಯ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ರೈಲ್ವೆ ಬಜೆಟ್ ಮಂಡಿಸುವ ಸಂಪ್ರದಾಯ ನಡೆದುಕೊಂಡು ಬರುತ್ತಿತ್ತು. 2017ರಲ್ಲಿ ಈ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲಾಗಿದೆ. ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ವಿಲೀನಗೊಳಿಸಿ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿಬಜೆಟ್​​ಗೂ ಮುನ್ನವೇ ಕೇಂದ್ರ ಸರ್ಕಾರಕ್ಕೆ ಗುಡ್​ನ್ಯೂಸ್​; ಖಜಾನೆಗೆ ಹರಿದು ಬಂತು ಲಕ್ಷಾಂತರ ಕೋಟಿ ರೂಪಾಯಿ..!

ಮೊದಲ ಸಾಮಾನ್ಯ ಬಜೆಟ್ ಮಂಡಿಸಿದವರು ಯಾರು?
92 ವರ್ಷಗಳ ಹಿಂದಿನ ಸಂಪ್ರದಾಯ ಬದಲಾಯಿಸಿದ ನಂತರ ದಿವಂಗತ ಅರುಣ್ ಜೆಟ್ಲಿ ಸಂಸತ್ತಿನಲ್ಲಿ ಮೊದಲ ಸಾಮಾನ್ಯ ಬಜೆಟ್ ಮಂಡಿಸಿದರು. 2017, ಫೆಬ್ರವರಿ 1 ರಂದು ಸಾಮಾನ್ಯ ಬಜೆಟ್​ನಲ್ಲಿಯೇ ರೈಲ್ವೇ ಬಜೆಟ್​ ಓದಿದ್ದರು. ಈ ಮೂಲಕ ಬ್ರಿಟಿಷರ ಆಳ್ವಿಕೆಗೆ ಒಳಪಡುತ್ತಿರುವ ಈ ಸಂಪ್ರದಾಯವನ್ನು ಕೊನೆಗಾಣಿಸಲಾಗಿತ್ತು.

2024ರ ವರ್ಷ ಚುನಾವಣಾ ವರ್ಷ ಆಗಿದೆ. ಹೀಗಾಗಿ ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಆದರೆ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಆಗಿರುವುದರಿಂದ ಜನ ಅನೇಕ ದೊಡ್ಡ ದೊಡ್ಡ ಘೋಷಣೆಗಳ ನಿರೀಕ್ಷೆಯಲ್ಲಿದ್ದಾರೆ. ಕೋಟ್ಯಾಂತರ ಜನರ ಕೋಟಿ ಕೋಟಿ ನಿರೀಕ್ಷೆಗಳಿಗೆ ಇನ್ನೇನು ಕೆಲವೇ ಹೊತ್ತಿನಲ್ಲಿ ತೆರೆ ಬೀಳಲಿದೆ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಜೆಟ್​ ಮಂಡನೆಯಲ್ಲಿದ್ದ 92 ವರ್ಷಗಳ ಹಳೇ ಸಂಪ್ರದಾಯ ಬದಲಾಯಿಸಿದೆ ಮೋದಿ ಸರ್ಕಾರ.. ಈ ಬಗ್ಗೆ ನಿಮಗೆಷ್ಟು ಗೊತ್ತು..?

https://newsfirstlive.com/wp-content/uploads/2024/02/MODI-45.jpg

Load More