newsfirstkannada.com

×

ದೇವೇಗೌಡರನ್ನ ರಹಸ್ಯವಾಗಿ ಭೇಟಿಯಾದ ಅಮಿತ್ ಶಾ; ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾನಾ? ಏನೇನ್‌ ಮಾತುಕತೆ ಆಯ್ತು?

Share :

Published September 7, 2023 at 2:59pm

Update September 7, 2023 at 8:03pm

    ದೇವೇಗೌಡರನ್ನ ಹುಡುಕಿಕೊಂಡು ಹೋಗಿ ಭೇಟಿಯಾದ ಅಮಿತ್ ಶಾ

    ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿಯಾದ್ರೆ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್‌?

    ದೇವೇಗೌಡರ ಜೊತೆ ಚುನಾವಣಾ ಚಾಣಕ್ಯ ಅಮಿತ್ ಶಾ ರಣತಂತ್ರ

ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೂ 8 ತಿಂಗಳು ಬಾಕಿಯಿದ್ರೂ ತೆರೆಮರೆಯಲ್ಲಿ ರಾಜಕೀಯ ನಾಯಕರ ಲೆಕ್ಕಾಚಾರ ಆರಂಭವಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಆಪರೇಷನ್ ಹಸ್ತ ಸಾಕಷ್ಟು ಸದ್ದು ಮಾಡ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಾಲು, ಸಾಲು ಬಿಜೆಪಿ ನಾಯಕರನ್ನು ಸೆಳೆಯೋ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಆಪರೇಷನ್ ಹಸ್ತದ ರಾಜಕೀಯ ಜೋರಾಗುತ್ತಿದ್ದಂತೆ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯಲು ಖುದ್ದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರೇ ರಂಗ ಪ್ರವೇಶಿದ್ದಾರೆ.

ಲೋಕಸಭಾ ಚುನಾವಣೆಗೆ ಮಾಸ್ಟರ್‌ ಪ್ಲಾನ್ ಮಾಡಿರೋ ಕೇಂದ್ರ ಗೃಹ ಸಚಿವ ಅಮಿತ್ ಅವರು ನೇರವಾಗಿ ಜೆಡಿಎಸ್‌ ವರಿಷ್ಠ ಹೆಚ್‌.ಡಿ ದೇವೇಗೌಡರನ್ನೇ ಭೇಟಿಯಾಗಿದ್ದಾರೆ. ದೆಹಲಿಯಲ್ಲಿ ದೇವೇಗೌಡ-ಅಮಿತ್ ಶಾ ಅವರ ಮಧ್ಯೆ ರಹಸ್ಯ ಭೇಟಿಯಾಗಿದೆ. ಈ ಸ್ಫೋಟಕ ಸುದ್ದಿ, ರಹಸ್ಯ ಭೇಟಿಯಲ್ಲಾದ ಮಾಹಿತಿ ನ್ಯೂಸ್‌ ಫಸ್ಟ್‌ಗೆ ಲಭ್ಯವಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆ ಈ ರಹಸ್ಯ ಭೇಟಿ ಬಹಳಷ್ಟು ಕುತೂಹಲ ಕೆರಳಿಸಿದೆ.

ಗೌಡರನ್ನ ಹುಡುಕಿಕೊಂಡು ಹೋದ ಅಮಿತ್ ಶಾ!

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮಾಸ್ಟರ್‌ಸ್ಟ್ರೋಕ್ ಕೊಡಲು ದೆಹಲಿಯಲ್ಲಿ ಭರ್ಜರಿ ರಣತಂತ್ರ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇವೇಗೌಡರನ್ನ ಹುಡುಕಿಕೊಂಡು ಹೋಗಿ ಭೇಟಿಯಾಗಿದ್ದಾರೆ. ಈ ರಹಸ್ಯ ಭೇಟಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಮಾತುಕತೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾತುಕತೆ ನಡೆದಿದ್ದು. ಆದ್ರೆ ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ.

ದೇವೇಗೌಡ, ಅಮಿತ್ ಶಾ ಭೇಟಿ ವೇಳೆ ಪ್ರಮುಖವಾಗಿ ಮೈತ್ರಿ ಬಗ್ಗೆಯೇ ಚರ್ಚೆ ನಡೆದಿದೆ. ಈ ವೇಳೆ ಲೋಕಸಭಾ ಎಲೆಕ್ಷನ್ ಹೊಸ್ತಿಲಲ್ಲಿ ಮೈತ್ರಿ ‌ಮಾಡಿಕೊಳ್ಳುವುದು ಬೇಡ. ಅಧಿಕೃತ ಮೈತ್ರಿಯ ಘೋಷಣೆ ಇಲ್ಲ, ಸೀಟು ಹಂಚಿಕೆ ಘೋಷಣೆ ಇಲ್ಲ. ಯಾವುದೇ ಘೋಷಣೆ ಇಲ್ಲದೇ, ಮೈತ್ರಿಯನ್ನು ಮಾಡಿಕೊಳ್ಳೋ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಒಂದೇ ದಿನ ಮೂರು ಆಪರೇಷನ್​​​, ನಾಲ್ಕು ಕ್ಷೇತ್ರಕ್ಕೆ ದಾಳ; ಆಪರೇಷನ್​​ ಹಸ್ತಕ್ಕೆ ‘ಕೋ’ ಕೊಟ್ಟ ಡಿ.ಕೆ ಶಿವಕುಮಾರ್​

ಮೈತ್ರಿ ಎಂದು ಘೋಷಿಸಿದ್ರೆ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಕ್ಕೂ ಹಿನ್ನಡೆ ಆಗಬಹುದು. ಹೀಗಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಅಘೋಷಿತ ಮೈತ್ರಿ ‌ಬಗ್ಗೆ ಚರ್ಚೆ ನಡೆದಿದೆ. ಜೆಡಿಎಸ್‌‌ ಅಭ್ಯರ್ಥಿ ಕಣಕ್ಕಿಳಿಸುವ ಬಿಜೆಪಿ ಸ್ಪರ್ಧಿಸದಿರುವುದು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌‌ ಸ್ಪರ್ಧಿಸುವಲ್ಲಿ ಬಿಜೆಪಿ ಚರ್ಚೆಯಿಲ್ಲ. ಬಿಜೆಪಿ ಸ್ಫರ್ಧೆ ಮಾಡುವಲ್ಲಿ ಜೆಡಿಎಸ್‌‌ ಅಭ್ಯರ್ಥಿಗಳು ಕಣಕ್ಕಿಳಿಯೋದಿಲ್ಲ ಅನ್ನೋದರ ಬಗ್ಗೆ ಚರ್ಚೆಯಾಗಿದೆ. ಇದೇ ಸೂತ್ರ ಯಶಸ್ಸು ಕಂಡರೆ, ಮುಂದಿನ ವಿಧಾನಸಭಾ ಎಲೆಕ್ಷನ್​ಗೂ ಇದೇ ತಂತ್ರ ಅನುಸರಿಸಲಾಗುವುದು ಎನ್ನಲಾಗಿದೆ. ರಾಜ್ಯದಲ್ಲಿ ಜೆಡಿಎಸ್‌‌ ಜೊತೆ ಅಘೋಷಿತ ಮೈತ್ರಿ‌ಗೆ ಬಿಜೆಪಿ ತಯಾರಿ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವೇಗೌಡರನ್ನ ರಹಸ್ಯವಾಗಿ ಭೇಟಿಯಾದ ಅಮಿತ್ ಶಾ; ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾನಾ? ಏನೇನ್‌ ಮಾತುಕತೆ ಆಯ್ತು?

https://newsfirstlive.com/wp-content/uploads/2023/09/Amiths-Sha-HDD-Meeting.jpg

Load More