newsfirstkannada.com

×

BREAKING: ಮುಯ್ಯಿಗೆ ಮುಯ್ಯಿ.. ಮೋಸ್ಟ್‌ ವಾಂಟೆಡ್‌ ಉಗ್ರ ಉಜೈರ್ ಖಾನ್‌ ಹೊಡೆದುರುಳಿಸಿದ ಭಾರತೀಯ ಸೇನೆ

Share :

Published September 19, 2023 at 4:47pm

Update September 19, 2023 at 5:02pm

    ಸತತ 7 ದಿನಗಳಿಂದ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್ ಅಂತ್ಯ

    ಮೋಸ್ಟ್ ವಾಂಟೆಡ್ ಲಷ್ಕರ್ ಕಮಾಂಡರ್ ಉಜೈರ್ ಖಾನ್ ಬಲಿ

    ಮೂವರು ಯೋಧರ ಬಿಲಿದಾನಕ್ಕೆ ಮೂವರು ಉಗ್ರರ ಬಲಿ ಪಡೆದ ಸೇನೆ

ಶ್ರೀನಗರ: ಸತತ 7 ದಿನಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಯೋಧರ ಕಾರ್ಯಾಚರಣೆಗೆ ಬಹಳ ದೊಡ್ಡ ಯಶಸ್ಸು ಸಿಕ್ಕಿದೆ. ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ಗೆ ಮೋಸ್ಟ್ ವಾಂಟೆಡ್ ಲಷ್ಕರ್ ಕಮಾಂಡರ್ ಉಜೈರ್ ಖಾನ್ ಬಲಿಯಾಗಿದ್ದಾನೆ. ಕಳೆದ ವಾರ ಅನಂತ್‌ನಾಗ್‌ ಜಿಲ್ಲೆಯ ಕೊಕೇರ್‌ನಾಗ್‌ನಲ್ಲಿ ಉಗ್ರರು ಭಯಾನಕ ದಾಳಿ ಮಾಡಿದ್ದರು. ಗುಂಡಿನ ಚಕಮಕಿಯಲ್ಲಿ ಮೂವರು ಭಾರತೀಯ ವೀರಯೋಧರು ಹುತಾತ್ಮರಾಗಿದ್ದರು.

ಇದನ್ನೂ ಓದಿ: WATCH: ಗೃಹ ಪ್ರವೇಶಕ್ಕೆ ಬಂದು ಬರ್ತ್ ​ಡೇ ಪಾರ್ಟಿ ಕೊಡಿಸುವುದಾಗಿ ಹೇಳಿದ್ದ ಯೋಧ ಹುತಾತ್ಮ; ಹುಟ್ಟೂರಲ್ಲಿ ಶೋಕ ಸಾಗರ

ಭಾರತೀಯ ಯೋಧರ ಬಲಿದಾನದ ಬಳಿಕ ಭದ್ರತಾ ಪಡೆ ಉಗ್ರರ ಸಂಹಾರಕ್ಕೆ ಪಣ ತೊಟ್ಟಿತ್ತು. ಒಂದು ವಾರದಿಂದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆದಿದ್ದು, ಮೂವರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಮೂವರಲ್ಲಿ ಪ್ರಮುಖವಾಗಿ ಲಷ್ಕರ್ ಇ ತೋಯ್ಬಾ ಕಮಾಂಡ್ ಉಜೈರ್ ಖಾನ್‌ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎನ್ನಲಾಗಿದೆ. ಭಾರತೀಯ ಸೈನಿಕರ ಪ್ರಾಣತ್ಯಾಗಕ್ಕೆ ಕಾರಣವಾದ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಲಾಗಿದೆ.

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಂದು ಭಯಾನಕ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರ ಪೈಕಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಜೈರ್ ಖಾನ್ ಪ್ರಮುಖ ಬೇಟೆಯಾಗಿದ್ದಾನೆ. ಕೊಕೇರ್‌ನಾಗ್‌ನಲ್ಲಿ ಭದ್ರತಾ ಪಡೆಗಳು ಉಗ್ರ ಉಜೈರ್ ಖಾನ್ ಅನ್ನೇ ಟಾರ್ಗೆಟ್ ಮಾಡಿ ಹೊಡೆದುರುಳಿಸಿದೆ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶಕ್ಕೆ ಉಗ್ರರು ನುಗ್ಗಿದ್ದರು. ಈ ವೇಳೆ ಭದ್ರತಾ ಪಡೆಗಳು ಭಯೋತ್ಪಾದಕರ ಮೇಲೆ ಎನ್‌ಕೌಂಟರ್ ಆರಂಭಿಸಿತ್ತು.

ಕೋಕರ್‌ನಾಗ್‌ನಲ್ಲಿ ಉಗ್ರರನ್ನ ಶೋಧಿಸಲು ಇನ್ನೂ ಒಂದು ದೊಡ್ಡ ಪ್ರದೇಶ ಬಾಕಿ ಉಳಿದಿದೆ. ಇನ್ನೂ ಇಬ್ಬರಿಂದ ಮೂವರು ಭಯೋತ್ಪಾದಕರು ಅಲ್ಲಿ ಅಡಗಿದ್ದಾರೆ ಎಂದು ಭದ್ರತಾ ಪಡೆಗಳು ಹೇಳಿವೆ. ಇಬ್ಬರು ಉಗ್ರಹ ಮೃತದೇಹ ಪತ್ತೆಯಾಗಿದ್ದು, ಮೂರನೇ ಮೃತದೇಹ ಇಲ್ಲೇ ಎಲ್ಲೋ ಇರುವ ಸಾಧ್ಯತೆ ಇದೆ. ಉಜೈರ್‌ ಖಾನ್‌ ಮೃತದೇಹದಿಂದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಭಯೋತ್ಪಾದಕನ ಸಾವಿನೊಂದಿಗೆ ಅನಂತನಾಗ್ ಜಿಲ್ಲೆಯಲ್ಲಿ ಏಳು ದಿನಗಳ ಕಾಲ ನಡೆದ ಎನ್‌ಕೌಂಟರ್ ಅನ್ನು ಅಂತ್ಯಗೊಳಿಸಲಾಗಿದೆ. ಎನ್‌ಕೌಂಟರ್‌ ಅಂತ್ಯವಾದ್ರೂ ಉಗ್ರರ ಶೋಧ ಕಾರ್ಯ ಮುಂದುವರಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮುಯ್ಯಿಗೆ ಮುಯ್ಯಿ.. ಮೋಸ್ಟ್‌ ವಾಂಟೆಡ್‌ ಉಗ್ರ ಉಜೈರ್ ಖಾನ್‌ ಹೊಡೆದುರುಳಿಸಿದ ಭಾರತೀಯ ಸೇನೆ

https://newsfirstlive.com/wp-content/uploads/2023/09/LET-Terror-Uzair-Khan.jpg

Load More