ಚಂದಮಾಮನನ್ನೇ ಭೂಮಿಗಿಳಿಸಿದ ಕಿಶನ್ ನಮ್ರತಾ ರೊಮ್ಯಾಂಟಿಕ್ ಡ್ಯಾನ್ಸ್
ಒಂದಲ್ಲ ಎರಡಲ್ಲ ಬರೋಬ್ಬರಿ 4.4 ಮಿಲಿಯನ್ ವೀವ್ಸ್ ಪಡೆದುಕೊಂಡ ನೃತ್ಯ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಕಿಶನ್, ನಮ್ರತಾ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಮ್ರತಾ ಗೌಡ ಸಖತ್ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಇನ್ನಷ್ಟು ಖುಷಿ ಪಡಿಸುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯ ತಕಧಿಮಿತ ರಿಯಾಲಿಟಿ ಶೋ ಮೂಲಕ ಜೋಡಿಯಾಗಿ ಎಲ್ಲರ ಮನಸೂರೆಗೊಳಿಸಿದ್ದು ಕಿಶನ್ ಹಾಗೂ ನಮ್ರತಾ ಜೋಡಿ.
ಇದನ್ನು ಓದಿ: ಟಾಲಿವುಡ್ ನಿರ್ದೇಶಕ ಕ್ರಿಶ್ ವಿರುದ್ಧ ಡ್ರಗ್ಸ್ ಕೇಸ್; ತೆಲುಗು ಖ್ಯಾತ ನಟ-ನಟಿಯರಿಗೆ ಬಂಧನದ ಭೀತಿ!
ಇನ್ನೂ, ಇವರಿಬ್ಬರ ಡ್ಯಾನ್ಸ್ ಪರ್ಫಾಮೆನ್ಸ್ಗೆ ತಕಧಿಮಿತ ಶೋನಲ್ಲಿ ಎಲ್ಲರೂ ಕ್ಲೀನ್ ಬೋಲ್ಡ್ ಆಗುತ್ತಿದ್ದರು. ಅಲ್ಲಿಂದ ಪರಿಚಯವಾದ ಈ ಗೆಳೆತನ ಇಂದಿಗೂ ಗಟ್ಟಿಯಾಗಿದೆ. ಕಿಶನ್ ಆ್ಯಂಡ್ ನಮ್ರತಾ ಇಬ್ಬರು ಈಗಲೂ ಕೂಡ ಡ್ಯಾನ್ಸ್ ರೀಲ್ಸ್ ಅಭಿಮಾನಿಗಳನ್ನ ರಂಜಿಸ್ತಾ ಇದ್ದಾರೆ. ಈಗಲೂ ಕೂಡ ಇಬ್ಬರ ಗೆಳತನ ತುಂಬಾನೆ ಚೆನ್ನಾಗಿದೆ. ಕಿಶನ್ ಒಬ್ಬರು ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಅದರಲ್ಲೂ ನಮ್ರತಾ ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ. ಇಬ್ಬರು ಕೂಡ ಕನ್ನಡ ಬಿಗ್ಬಾಸ್ನ ಬೇರೆ ಬೇರೆ ಸೀಸನ್ಗಳ ಸ್ಪರ್ಧಿಗಳು ಆಗಿದ್ದಾರೆ. ಬಿಗ್ಬಾಸ್ ಸೀಸನ್ 7ರಲ್ಲಿ ಕಿಶನ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇನ್ನೂ ನಮ್ರತಾ ಕೂಡ ಸೀಸನ್ 10ರ ಸ್ಪರ್ಧಿಯಾಗಿದ್ದರು. ತಮ್ಮ ನೃತ್ಯ ಕಲೆಯನ್ನ ಬಿಗ್ಬಾಸ್ ಮನೆಯೊಳಗೂ ಪ್ರಸ್ತುತ ಪಡಿಸಿದ್ದರು.
View this post on Instagram
ಸದ್ಯ ನಮ್ರತಾ ಹಾಗೂ ಕಿಶನ್ ಸಮಯ ಸಿಕ್ಕಾಗ ತಮ್ಮ ಅಭಿಮಾನಿಗಳಿಗೋಸ್ಕರ ಒಳ್ಳೆ, ಒಳ್ಳೆ ಡ್ಯಾನ್ಸ್ ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಒಂದು ರೋಮ್ಯಾಟಿಕ್ ಸಾಂಗ್ಗೆ ಬ್ಯೂಟಿಫುಲ್ ಆಗಿ ಶ್ಯಾಡೋ ಕಾನ್ಸೆಪ್ಟ್ ಇಟ್ಟುಕೊಂಡು ಪರ್ಫಾಮ್ ಮಾಡಿದ್ದಾರೆ. ಈ ಇಬ್ಬರ ನೃತ್ಯಕ್ಕೆ ಎಲ್ಲರು ಫಿದಾ ಆಗಿದ್ದಾರೆ. ನಮ್ರತಾ ಮತ್ತು ಕಿಶನ್ ಆನ್ಸ್ಕ್ರೀನ್ ಅಪಿರಿಯನ್ಸ್, ಪರ್ಫಾಮೆನ್ಸ್, ಕೋ-ಆಡಿನೇಷನ್, ತೆರೆಯ ಮೇಲೆ ಸೊಗಸಾಗಿ ಮೂಡಿ ಬಂದಿದೆ. ಹಿಂದಿ ರಿಯಾಲಿಟಿ ಶೋನಲ್ಲಿ ಅದ್ಭುತವಾಗಿ ಮಿಂಚಿದ ಕಿಶನ್ ಮತ್ತು ನಮ್ಮ ಕನ್ನಡ ರಿಯಾಲಿಟಿ ಶೋನಲ್ಲಿ ಶೈನ್ ಆಗಿದ್ದ ನಮ್ರತಾ ಗೌಡರ ಈ ವಿಡಿಯೋ ಅಭಿಮಾನಿಗಳ ಮನಸ್ಸು ಗೆದ್ದಿದೆ. ಒಂದಕ್ಕಿಂತ ಒಂದು ಅದ್ಭುತ ನೃತ್ಯವನ್ನ ಮಾಡ್ತಾ ತಮ್ಮ ಅಭಿಮಾನಿಗಳನ್ನ ರಂಜಿಸ್ತಾ ಇದೆ ಈ ಬ್ಯೂಟಿಫುಲ್ ಪೇರ್. ಹೀಗೇ ಮುಂದೆಯೂ ಇವರಿಂದ ಮತ್ತಷ್ಟು ವಿಡಿಯೋಸ್ ಎಕ್ಸ್ಪೆಕ್ಟ್ ಮಾಡೋದ್ರಲ್ಲಿ ತಪ್ಪೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ