ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಅಭಿಮಾನಿಗಳನ್ನು ಗಳಿಸಿದ ನಟಿ
ಕೇವಲ 2 ದಿನಗಳಲ್ಲಿ ಜನ ಮೆಚ್ಚಿದ ಸೀರಿಯಲ್ ಹಿಟ್ಲರ್ ಕಲ್ಯಾಣ ಅಂತ್ಯ
ಶೂಟಿಂಗ್ ವೇಳೆ ರಸ್ತೆ ಅಪಘಾತಕ್ಕೆ ಸಿಲುಕಿದ್ದರಂತೆ ನಟಿ ಮಲೈಕಾ ವಸುಪಾಲ್
ಹಿಟ್ಲರ್ ಕಲ್ಯಾಣ ಸೀರಿಯಲ್ ಅಂತಿಮ ಸಂಚಿಕೆಗಳು ನಡೆಯುತ್ತಿವೆ. ಕೇವಲ 2 ದಿನಗಳಲ್ಲಿ ಮಾತ್ರ ಹಿಟ್ಲರ್ ಕಲ್ಯಾಣ ಸೀರಿಯಲ್ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲಿದೆ. ಮಹಿಳೆಯರಿಂದ ಹಿಡಿದು ಕಾಲೇಜು ಹುಡುಗಿಯರಿಗೂ ಹಿಟ್ಲರ್ ಕಲ್ಯಾಣದ ಮೇಲೆ ಕ್ರಶ್ ಇತ್ತು. ಲೀಲಾ-ಸೊಸೆಯಂದಿರ ಕಾಂಬಿನೇಷನ್ ಮೇಲೆ ವಿಶೇಷ ಪ್ರೀತಿ ತೋರಿಸಿದ್ದರು ವೀಕ್ಷಕರು.
ಇನ್ನೂ, ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಸಂದರ್ಭದಲ್ಲಿ ಕೇಕ್ ಕಟ್ ಮಾಡಿ ಜರ್ನಿಯನ್ನು ನೆನಪಿಸಿಕೊಂಡಿದೆ. ಈ ಸಂದರ್ಭದಲ್ಲಿ ಮತ್ತೊಂದು ಪ್ರಾಜೆಕ್ಟ್ ಬರುತ್ತೆ ಅನ್ನೋ ಸುಳಿವು ಕೂಡ ನೀಡಿದೆ. ಹಿಟ್ಲರ್ ಕಲ್ಯಾಣ ಮೂಲಕ ಚಿಕ್ಕವಯಸ್ಸಲ್ಲೇ ಯಶಸ್ಸು ಕಂಡ ಚಲುವೆ ಮಲೈಕಾ ಟಿ ವಸುಪಾಲ್ ಸೀರಿಯಲ್ನಿಂದ ಸಿನಿಮಾ ಕಡೆ ಮೂಖ ಮಾಡಿದ್ದಾರೆ. ಈಗಾಗಲೇ ಬೆಳ್ಳಿತೆರೆಯಲ್ಲಿ ಯಶಸ್ಸಿನ ಮೊದಲ ಹೆಜ್ಜೆ ಇಟ್ಟು ಗೆದ್ದಿದ್ದಾರೆ. ಸಿನಿ ಜರ್ನಿ ಹಾಗೂ ಹಿಟ್ಲರ್ ಕಲ್ಯಾಣ ಸೀರಿಯಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೊಂಡಿರೋ ನಟಿ, ಹಿಟ್ಲರ್ ಶೂಟಿಂಗ್ ಸಂದರ್ಭದಲ್ಲಿ ನಡೆದ ಕೆಟ್ಟ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಹೌದು, ಹಿಟ್ಲರ್ ಕಲ್ಯಾಣ ಧಾರಾವಾಹಿಯನ್ನು ಅರ್ಧಕ್ಕೆ ಬೀಡುವ ಪರಿಸ್ಥಿತಿ ಎದುರಾಗಿತ್ತಂತೆ. ಶೂಟಿಂಗ್ ವೇಳೆ ರಸ್ತೆ ಅಪಘಾತಕ್ಕೆ ಇಡಾಗಿದ್ದರಂತೆ. ಈ ಸಂದರ್ಭದಲ್ಲಿ ಸಂಪೂರ್ಣ ಬೆಡ್ ರೆಸ್ಟ್ ಮಾಡಬೇಕು ಅಂತಾ ಡಾಕ್ಟರ್ ಸಲಹೆ ನೀಡಿದ್ರಂತೆ. ಸೀರಿಯಲ್ನ ಮುಂದುವರೆಸೋದು ಅನ್ನೋ ಯೋಚನೆ ಬಂದ್ರು ಕೂಡ ಮುಂದಿಟ್ಟ ಹೆಜ್ಜೆಯನ್ನ ಹಿಂದೆ ಇಡೋ ಮಾತಿಯಿಲ್ಲ ಅಂತಾ ಆ ಪರಿಸ್ಥಿತಿಯನ್ನ ಧೈರ್ಯವಾಗಿ ಎದುರಿಸಿ ಆ್ಯಕ್ಟಿಂಗ್ನ ಮುಂದುವರೆಸಿದ್ರಂತೆ. ಅಭಿನಯ ಅಂದ್ರೇ ನನಗೆ ಹುಚ್ಚು ಆಸಕ್ತಿ ಅನ್ನೋ ಮಲೈಕಾಗೆ ಸಿನಿಮಾ ಕ್ಷೇತ್ರದಿಂದ ಸಿಕ್ಕಾಪಟ್ಟೆ ಆಫರ್ಸ್ ಬರ್ತಿವೆ. ಇದರಲ್ಲಿ ಬೇರೆ ಭಾಷೆಯ ಆಫರ್ಗಳು ಹೆಚ್ಚಿವೆ ಅಂತಾರೆ ನಟಿ.
ಇದನ್ನು ಓದಿ: ಅಪ್ಪನ ಆರೋಗ್ಯದ ಬಗ್ಗೆ ನಿಖಿಲ್ ಭಾವುಕ; ಮಗನ ಮಾತು ಕೇಳಿ ವೇದಿಕೆಯಲ್ಲೇ ಗಳಗಳನೇ ಕಣ್ಣೀರಿಟ್ಟ ಕುಮಾರಸ್ವಾಮಿ
ಧಾರಾವಾಹಿ, ಸಿನಿಮಾ ಯಶಸ್ಸಿನ ನಂತರ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದ್ದು, ಬೆಳ್ಳಿತೆರೆಯಲ್ಲಿ ಮತ್ತಷ್ಟು ಸಾಧನೆ ಮಾಡೋ ಕನಸು ಮಲೈಕಾ ವಸುಪಾಲ್ ಅವರದ್ದು. ಸದಾ ಹಾರ್ಡ್ ವರ್ಕ್ ಮಂತ್ರ ಜಪಿಸೋ ನಟಿ, ರೆಸ್ಟ್ ಮಾಡೋದು ಇದ್ದಿದ್ದೇ ಈಗ ಕೆಲಸ ಮಾಡೋ ಸಮಯ ಹೆಚ್ಚೆಚ್ಚು ವರ್ಕ್ ಮಾಡೋ ಆಸಕ್ತಿ ಇದೆ ಅಂತಾರೆ. ಮಲೈಕಾ ಸೇರಿದಂತೆ ಸಾಕಷ್ಟು ಕಲಾವಿದರಿಗೆ ಹಿಟ್ಲರ್ ಕಲ್ಯಾಣ ವರವಾಗಿದೆ. ಒಟ್ಟಿನಲ್ಲಿ 6.30ರ ಸ್ಲಾಟ್ನಲ್ಲಿ 3.9 ಟಿಆರ್ಪಿ ಪಡೆದುಕೊಂಡಿರೋದು ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ