ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ ಘಟನೆ
ಕೆಲಸ ಮುಗಿಸಿಕೊಂಡು ಕುಣಿಗಲ್ ಪಟ್ಟಣಕ್ಕೆ ಹೋಗುತ್ತಿದ್ದಾಗ ಸಾವು
ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು
ತುಮಕೂರು: ದಾರಿಯಲ್ಲಿ ಹಾದುಹೋಗಿದ್ದ ವೇಳೆ ಕೇಬಲ್ ವೈರ್ ವಿದ್ಯುತ್ ತಂತಿ ಬಿದ್ದಿದ್ದಕ್ಕೆ ನರ್ಸ್ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮೀ ಬಾಯಿ ಜಾದವ್ (36) ಮೃತ ದುರ್ದೈವಿ.
ಮೃತ ನರ್ಸ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟೆ ಮೂಲದ ನಿವಾಸಿ. ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ರು. ಹೀಗಾಗಿ ಲಕ್ಷ್ಮೀಬಾಯಿ ಕುಣಿಗಲ್ ಪಟ್ಟಣದಲ್ಲಿ ವಾಸವಿದ್ದರು. ಇಂದು ಕೆಲಸ ಮುಗಿಸಿ ಇಪ್ಪಾಡಿಯಿಂದ ಕುಣಿಗಲ್ ಪಟ್ಟಣಕ್ಕೆ ಬೈಕ್ನಲ್ಲಿ ಹಾದುಹೋಗುತ್ತಿದ್ದಾಗ ಕೇಬಲ್ ವೈರ್ಗೆ ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ ಬಿದ್ದಿದೆ.
ಇದನ್ನು ಓದಿ: ದಿನೇಶ್ ಕಾರ್ತಿಕ್, ಅಜೂನ್ ರಾವತ್ ಭರ್ಜರಿ ಬ್ಯಾಟಿಂಗ್.. ಚೆನ್ನೈಗೆ ಆರ್ಸಿಬಿ 174 ರನ್ ಟಾರ್ಗೆಟ್
ಕೇಬಲ್ ವೈರ್ ಮೇಲೆ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಬೈಕ್ ಸವಾರ ಲಕ್ಷ್ಮಣ್ ಎಂಬುವವರಿಗೂ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಮೃತ ಲಕ್ಷ್ಮೀಬಾಯಿಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿತ್ತಂತೆ. ಆದರೆ ಯಮನ ರೂಪದಲ್ಲಿ ಬಂದ ಕೇಬಲ್ ವೈರ್ನಿಂದ ಲಕ್ಷ್ಮೀಬಾಯಿ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ