ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್
ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ಗೆ ಭಾರೀ ಮುಖಭಂಗ..!
ಬರೋಬ್ಬರಿ 194 ರನ್ ಟಾರ್ಗೆಟ್ ಕೊಟ್ಟಿದ್ದ ಸ್ಯಾಮ್ಸನ್ ಟೀಮ್
ಇಂದು ಜೈಪುರ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡ ಗೆದ್ದು ಬೀಗಿದೆ. ಈ ಮೂಲಕ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ಗೆ ಭಾರೀ ಮುಖಭಂಗವಾಗಿದೆ.
ರಾಜಸ್ತಾನ್ ನೀಡಿದ 194 ರನ್ಗಳ ಗುರಿ ಬೆನ್ನತ್ತಿದ ಲಕ್ನೋ ಪರ ಕೆ.ಎಲ್ ರಾಹುಲ್ 2 ಸಿಕ್ಸರ್, 4 ಫೋರ್ ಸಮೇತ 58 ರನ್ ಚಚ್ಚಿದ್ರು. ನಿಕೋಲಸ್ ಪೂರನ್ 4 ಸಿಕ್ಸರ್, 4 ಫೋರ್ ಸಮೇತ 64 ರನ್ ಬಾರಿಸಿದ್ರು. ದೀಪಕ್ ಹೂಡಾ 26 ರನ್ ಪೇರಿಸಿದ್ರೂ ಲಕ್ನೋ ಸೋತಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡದ ಪರ ಓಪನರ್ ಆಗಿ ಬಂದ ಜೋಸ್ ಬಟ್ಲರ್ ಕೇವಲ 11, ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿ ಔಟಾದ್ರು. ಬಳಿಕ ಕ್ರೀಸ್ಗೆ ಬಂದ ಸಂಜು ಸ್ಯಾಮ್ಸನ್ ಕೊನೆವರೆಗೂ ಕ್ರೀಸ್ನಲ್ಲೇ ಇದ್ದು ಲಕ್ನೋ ಬೌಲರ್ಗಳ ಬೆಂಡೆತ್ತಿದ್ರು.
ಇದನ್ನೂ ಓದಿ: 6 ಸಿಕ್ಸ್.. 3 ಫೋರ್.. 82 ರನ್ ಚಚ್ಚಿದ ಸ್ಯಾಮ್ಸನ್; ಲಕ್ನೋಗೆ ರಾಜಸ್ಥಾನ್ ಬಿಗ್ ಟಾರ್ಗೆಟ್!
ತಾನು ಆಡಿದ ಕೇವಲ 52 ಬಾಲ್ನಲ್ಲಿ ಬರೋಬ್ಬರಿ 6 ಸಿಕ್ಸರ್, 3 ಫೋರ್ ಸಮೇತ ಸ್ಯಾಮ್ಸನ್ 82 ರನ್ ಚಚ್ಚಿದ್ರು. ರಿಯಾನ್ ಪರಾಗ್ ಕೂಡ ಕೇವಲ 29 ಬಾಲ್ನಲ್ಲಿ 3 ಸಿಕ್ಸರ್, 1 ಫೋರ್ನೊಂದಿಗೆ 43 ರನ್ ಸಿಡಿಸಿದ್ರು. ಧೃವ್ ಜುರೆಲ್ 20 ರನ್ ಪೇರಿಸಿದ್ರು.
ರಾಜಸ್ತಾನ್ 4 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ಗಳಲ್ಲಿ 193 ರನ್ ಗಳಿಸಿದೆ. ಈ ಮೂಲಕ ಲಕ್ನೋ ತಂಡಕ್ಕೆ 194 ರನ್ ಬಿಗ್ ಟಾರ್ಗೆಟ್ ನೀಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ