ಬಹುಕಾಲದ ಗೆಳೆಯನನ್ನು ವರಿಸಿದ ಬಾಲಿವುಡ್ ಕ್ಯೂಟ್ ನಟಿ ತಾಪ್ಸಿ
ವಿದೇಶಿ ಬ್ಯಾಡ್ಮಿಂಟನ್ ಆಟಗಾರನ ಜೊತೆ ಹಸೆಮಣೆ ಏರಿದ ತಪ್ಪಡ್ ನಟಿ
2013ರಲ್ಲಿ ಮೊದಲ ಭೇಟಿ, 2024ರಲ್ಲಿ ಮದುವೆಯಾದ ಹೀರೋಯಿನ್
ಬಾಲಿವುಡ್ ನಟಿ ಕೃತಿ ಕರಬಂಧ ಬಹುಕಾಲದ ಗೆಳೆಯ ಪುಲ್ಕಿತ್ರನ್ನು ಇತ್ತೀಚೆಗೆ ವಿವಾಹವಾದರು. ಇವರ ವಿವಾಹ ಬಳಿಕ ಇದೀಗ ತಾಪ್ಸಿ ಪನ್ನು ವಿವಾಹದ ಸುದ್ದಿ ವೈರಲ್ ಆಗಿದೆ. ಬಹುಕಾಲದ ಗೆಳೆಯ, ಬ್ಯಾಡ್ಮಿಂಟನ್ ಆಟಗಾರನನ್ನು ‘ತಪ್ಪಡ್’ ಹೀರೋಯಿನ್ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.
ನಟಿ ತಾಪ್ಸಿ ಪನ್ನು ಮಥಿಯಾಸ್ ಬೋ ಅವನ್ನು ವಿವಾಹವಾಗಿದ್ದಾರೆ. ಬಾಲಿವುಡ್ ಬೆಡಗಿ ಮಾರ್ಚ್ 23ರಂದು ಸದ್ದಿಲ್ಲದೆ ವಿವಾಹವಾಗಿದ್ದಾರೆ. ಸದ್ಯ ಇವರ ವಿವಾಹ ಸುದ್ದಿ 2 ದಿನಗಳ ಬಳಿಕ ಬೆಳಕಿಗೆ ಬಂದಿದೆ.
ತಾಪ್ಸಿ ತನ್ನ ಮದುವೆಗೆ ಕೆಲವೇ ಕೆಲವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ, ಅನುರಾಗ್ ಕಶ್ಯಪ್, ಕನಿಕಾ ಧಿಲ್ಲೋನ್ ಇವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ನಟ ಪಾವೈಲ್ ಗುಲಾಟಿ ತಾಪ್ಪಿ ಮತ್ತು ಮಥಿಯಾಸ್ ಬೋ ವಿವಾಹದ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: VIDEO: ತೊಡೆ ಮೇಲೆ ಲ್ಯಾಪ್ಟಾಪ್ ಇರಿಸಿ ಸ್ಕೂಟರ್ ಸವಾರಿ ಮಾಡ್ತಿರೋ ಉದ್ಯೋಗಿ! ಇಂದು ಬೆಂಗಳೂರಿನ ಘಟನೆಯೇ?
‘ತಪ್ಪಡ್’ ಸಹನಟ ಪಾವೈಲ್ ಗುಲಾಟಿ ತಾಪ್ಸಿ ಮದುವೆಯ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ‘ಟ್ಬಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ನಾವು ಎಲ್ಲಿದ್ದೇವೆ ಎಂದು ನಮಗೆ ತಿಳಿದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ತಾಪ್ಸಿ ಮತ್ತು ಮಥಿಯಾಸ್ ಅನೇಕ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಇವರು 2013ರಲ್ಲಿ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಮೊದಲು ಭೇಟಿಯಾದರು. ಸದ್ಯ ಈ ಜೋಡಿ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಅಂದಹಾಗೆಯೇ ನವ ಜೋಡಿ ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಪ್ರಕಾರ ಮದುವೆಯಾಗಿದ್ದಾರೆ ಎಂದು ವರದೀಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ