ಪಂಜಾಬ್ ವಿರುದ್ಧ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಬ್ಯಾಟಿಂಗ್ನಲ್ಲಿ ಆರ್ಭಟ
ತವರಿನಲ್ಲೇ ಪಂಜಾಬ್ ತಂಡವನ್ನು ಮಣಿಸಿದ ಫಾಫ್ ಡುಪ್ಲೆಸಿಸ್ ಪಡೆ..!
ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ.
ಪಂಜಾಬ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಓಪನರ್ ಆಗಿ ಬಂದ ವಿರಾಟ್ ಕೊಹ್ಲಿ ಬರೋಬ್ಬರಿ 1 ಗಂಟೆಗೂ ಹೆಚ್ಚು ಕಾಲ ಕ್ರೀಸ್ನಲ್ಲೇ 16 ಓವರ್ಗಳವರೆಗೂ ಇದ್ದರು. ತಾನು ಆಡಿದ 49 ಬಾಲ್ಗಳಲ್ಲಿ 2 ಸಿಕ್ಸರ್, 11 ಫೋರ್ ಸಮೇತ ಕೊಹ್ಲಿ 77 ರನ್ ಚಚ್ಚಿದ್ರು. ಈ ಮೂಲಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿಗೆ ಆಸರೆಯಾದರು.
ಇನ್ನು, ಹರ್ಷಲ್ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ ಕೊಹ್ಲಿ ಸಿಕ್ಸ್ ಹೊಡೆಯಲು ಮುಂದಾದ್ರು. ಈ ಸಂದರ್ಭದಲ್ಲಿ ಕೊಹ್ಲಿಗೆ ಬಾಲ್ ಸರಿಯಾಗಿ ಕನೆಕ್ಟ್ ಆಗದೆ ಕ್ಯಾಚ್ ಹೋಗಿದೆ. ಪಂದ್ಯ ಗೆಲ್ಲಿಸುತ್ತಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಔಟ್ ಆಗಿ ಕೊಹ್ಲಿ ನಿರಾಸೆ ಮೂಡಿಸಿದ್ರು.
ರಜತ್ ಪಾಟಿದಾರ್ 18, ಅನೂಜ್ ರಾವತ್ 11, ಫಾಫ್, ಕ್ಯಾಮೆರಾನ್ ಗ್ರೀನ್ ಮತ್ತು ಮ್ಯಾಕ್ಸಿ ತಲಾ 3 ರನ್ ಗಳಿಸಿದ್ರು.
ಕೊನೆಗೆ ಬಂದ ಮಹಿಪಾಲ್ 1 ಸಿಕ್ಸರ್, 2 ಫೋರ್ ಸಮೇತ 18 ರನ್, ದಿನೇಶ್ ಕಾರ್ತಿಕ್ ಕೇವಲ 10 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 28 ರನ್ ಗಳಿಸಿ ಆರ್ಸಿಬಿಯನ್ನು ಗೆಲ್ಲಿಸಿದ್ರು.
ಪಂಜಾಬ್ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಶಿಖರ್ ಧವನ್ 37 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 45 ರನ್ ಚಚ್ಚಿದ್ರು. ಬಳಿಕ ಬಂದ ಪ್ರಭುಸಿಮ್ರಾನ್ 2 ಸಿಕ್ಸರ್, 2 ಫೋರ್ ಸಮೇತ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ಇದನ್ನೂ ಓದಿ: ಬರೋಬ್ಬರಿ 2 ಸಿಕ್ಸರ್.. 11 ಫೋರ್.. 77 ರನ್ ಚಚ್ಚಿ ಅಬ್ಬರಿಸಿದ ವಿರಾಟ್ ಕೊಹ್ಲಿ!
ಇನ್ನು, ಲಿಯಮ್ ಲಿವಿಂಗ್ಸ್ಟೋನ್ 1 ಸಿಕ್ಸ್, 1 ಫೋರ್ ಜತೆ 17 ರನ್, ಸ್ಯಾಮ್ ಕರನ್ 3 ಫೋರ್ನೊಂದಿಗೆ 23 ರನ್ ಸಿಡಿಸಿದ್ರು. ಜಿತೇಶ್ ಶರ್ಮಾ 2 ಸಿಕ್ಸರ್, 1 ಫೋರ್ನೊಂದಿಗೆ 27 ರನ್ ಪೇರಿಸಿದ್ರು. ಶಶಾಂಕ್ 21 ರನ್ ಸಹಾಯದಿಂದ ಪಂಜಾಬ್ 6 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ