ಸಿಎನ್ಜಿ ಮೂಲಕ ಚಲಿಸುತ್ತೆ ಬಜಾಜ್ನ ನೂತನ ಬೈಕ್
ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ನೂತನ ಸಿಎನ್ಜಿ ಬೈಕ್
ನೂತನ ಬೈಕ್ ಹೆಸರೇನು? ಬೆಲೆ ಎಷ್ಟು? ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
ಪ್ರೆಟ್ರೋಲ್ ಆಯ್ತು, ಎಲೆಕ್ಟ್ರಿಕ್ ಆಯ್ತು, ಇದೀಗ ಜನಪ್ರಿಯ ಬಜಾಜ್ ಕಂಪನಿ ಸಿಎನ್ಜಿ ಚಾಲಿತ ಬೈಕ್ ಅನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಮುಂಬರುವ ಜೂನ್ ತಿಂಗಳಲ್ಲಿ ನೂತನ ಸಿಎನ್ಜಿ ಬೈಕ್ ಮಾರುಕಟ್ಟೆಗೆ ಧಾವಿಸಲಿದೆ ಎಂದು ಹೇಳಲಾಗುತ್ತಿದೆ.
ಬಜಾಜ್ ಇದೇ ಮೊದಲ ಬಾರಿಗೆ ಮೊದಲ ಸಿಎನ್ಜಿ ಬೈಕ್ ಅನ್ನು ಸಿದ್ಧಪಡಿಸಿದೆ. ನೂತನ ಬೈಕ್ಗೆ ‘ಬ್ರೂಜರ್’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದ್ವಿಚಕ್ರ ಸವಾರರು ನೂತನ ಬೈಕ್ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಸಿಎನ್ಜಿ ಟ್ಯಾಂಕ್
ಬ್ರೂಜರ್ ಬೈಕ್ ವಿನ್ಯಾಸಕ್ಕೆ ತಕ್ಕಂತೆ ಟ್ಯಾಂಕ್ ಕೂರಿಸಲಾಗಿದೆ. ಉದ್ದವಾದ, ಸಮತಟ್ಟಾದ ಸೀಟಿನ ಕೆಳಭಾಗದಲ್ಲಿ ಟ್ಯಾಂಕ್ ಸಂಯೋಜಿಲಾಗಿದೆ. ಇದನ್ನು ಇಂಧನ ಬಳಸಿಕೊಂಡು ಸವಾರಿ ಮಾಡುಚ ಆಯ್ಕೆಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ
ವಿಶೇಷತೆ
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಬಜಾಜ್ಗ್ 100-160ಸಿಸಿಯಲ್ಲಿ ಬ್ರೂಜತ್ ಅನ್ನು ಪರಿಚಯಿಸಲಿದೆ. ಇದರಲ್ಲಿ ಎಲ್ಇಡಿ ದೀಪ, ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್, ಟೆಲೆಸ್ಕೋಪಿಕ್ ಪೋರ್ಕ್, ಮೊನೊಶಾಕ್ ಸಸ್ಪೆನ್ಷನ್ ಮತ್ತು 17 ಇಂಚಿನ ಟೈರ್ ಅನ್ನು ಹೊಂದಿದೆ ಎನ್ನಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಬೈಕ್ ಡಿಸ್ಕ್ ಬ್ರೇಕ್, ಹಿಂಭಾಗ ಡ್ರಮ್ ಬ್ರೇಕ್ ಹೊಂದಿದೆ.
ಇದನ್ನೂ ಓದಿ: ನಟಿ ಊರ್ಮಿಳಾಗೆ ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದ ಕಂಗನಾ.. ಹಳೇಯ ವಿಡಿಯೋ ಹಂಚಿಕೊಂಡ ಯುವ ಕಾಂಗ್ರೆಸ್ ಅಧ್ಯಕ್ಷ
ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದ್ವಿಚಕ್ರ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೇನು ಕೊರತೆಯಿಲ್ಲ. ನಾನಾ ಕಂಪನಿಗಳು ಹಲವು ವಿಶೇಷತೆಗಳನ್ನು ಒಳಗೊಂಡ ದ್ವೀಚಕ್ರ ವಾಹನವನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಬಜಾಜ್ ಹೊಸ ಸಿಎನ್ಜಿ ಬೈಕ್ ಉತ್ಪಾದನೆಯ ಮುಖ ಮಾಡಿದೆ.
ಇನ್ನು ಬಜಾಜ್ ಸಿದ್ಧಪಡಿಸಿರುವ ನೂತನ ಸಿಎನ್ಜಿ ಬೈಕ್ ಬೆಲೆ 80 ಸಾವಿರ ಎಂದು ಅಂದಾಜಿಸಲಾಗಿದೆ. ಆದರೆ ಬಜಾಜ್ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ