ಹ್ಯುಂಡೈ ಕಾರು ಬಳಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಲೇಬೇಕು
7,698 ಕಾರುಗಳಲ್ಲಿ ಕಾಣಿಸಿಕೊಂಡ ಸಮಸ್ಯೆ ಬಗೆ ಹರಿಸಲು ಮುಂದಾದ ಕಂಪನಿ
ಕಾರು ಮಾಲೀಕರನ್ನು ಸಂಪರ್ಕಿಸಲು ಮುಂದಾದ ಹ್ಯುಂಡೈ, ಉಚಿತವಾಗಿ ಸರಿಪಡಿಸಿಕೊಡಲಿದೆ
ದಕ್ಷಿಣ ಕೊರಿಯಾದ ವಾಹನ ತಯಾರಕ ಕಂಪನಿ ಹ್ಯುಂಡೈ ಭಾರತದಲ್ಲಿ ಕ್ರೆಟಾ ಎಸ್ಯುವಿ ಮತ್ತು ವೆರ್ನಾ ಸೆಡಾನ್ ಕಾರನ್ನು ಹಿಂಪಡೆದಿಯುತ್ತಿದೆ. ಸುಮಾರು 7,698 ಕಾರುಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಬಗೆಹರಿಸಲು ಕಾರು ಮಾಲೀಕರ ಬಳಿ ಹಿಂತಿರುಗಿಸಲು ಕೇಳಿಕೊಂಡಿದೆ.
ಫೆಬ್ರವರಿ 13, 2023ರಿಂದ ಜೂನ್ 6, 2023ರವರೆಗೆ ತಯಾರಿಸಲಾದ ಕಾರುಗಳನ್ನು ಮಾತ್ರ ಹ್ಯುಂಡೈ ಹಿಂಪಡೆಯುವಂತೆ ಹೇಳಿದೆ. ಕಾರು ಮಾಲೀಕರು ಹತ್ತಿರದ ಹ್ಯುಂಡೈ ಡೀಲರ್ಶಿಪ್ಗಳನ್ನು ಭೇಟಿಯಾಗುವ ಮೂಲಕ ಯಾವುದೇ ವೆಚ್ಚವಿಲ್ಲದೆ ಸಮಸ್ಯೆ ಸರಿಪಡಿಸಿ ಕೊಡುವುದಾಗಿ ಹ್ಯುಂಡೈ ಹೇಳಿದೆ.
ಇದನ್ನೂ ಓದಿ: ಬಜಾಜ್ ಮೊದಲ ಬಾರಿಗೆ ಸಿದ್ಧಪಡಿಸಿದೆ ಸಿಎನ್ಜಿ ಬೈಕ್! ಇದರ ಬೆಲೆ, ವಿಶೇಷತೆ ಏನು ಗೊತ್ತಾ?
ಸಮಸ್ಯೆ ಏನು?
ಸಿವಿಟಿ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾದ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ನಲ್ಲಿ ಸಮಸ್ಯೆಯನ್ನು ಕಂಡುಹಿಡಿಯಲಾಗಿದೆ. ಈ ಪವರ್ಟ್ರೇನ್ ಕಾನ್ಫಿಗರೇಶನನ್ನು ಕ್ರೆಟಾ ಮತ್ತು ವೆರ್ನಾ ಎರಡರಲ್ಲೂ ನೀಡಲಾಗಿದೆ.
ಇದೀಗ ಕಂಪನಿ ವಿಐಎನ್ ನಂಬರ್ ಬಳಸಿಕೊಂಡು ಕಂಪನಿ ವೆಬ್ಸೈಟ್ನಲ್ಲಿ ದಾಖಲಾದ ಕಾರುಗಳನ್ನು ಹಿಂಪಡೆಯಲು ಮಾಲೀಕರನ್ನು ಸಂಪರ್ಕಿಸುತ್ತಿದೆ. ಜೊತೆಗೆ ಹತ್ತಿರ ಹ್ಯುಂಡೈ ಸರ್ವೀಸ್ ಸ್ಟೇಷನ್ನಲ್ಲಿ ಉಚಿತವಾಗಿ ಸರಿಪಡಿಸಿಕೊಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ