ಮಾರ್ಚ್ 25 ರಂದು ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗಿ ಅಭಿಮಾನಿ ಹೈಡ್ರಾಮಾ
ಪಂಜಾಬ್ ವಿರುದ್ಧ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದ ವಿರಾಟ್ ಕೊಹ್ಲಿ
49 ಬಾಲ್ನಲ್ಲಿ 77 ರನ್ಗಳನ್ನು ಬಾರಿಸಿ ಮಿಂಚಿದ್ದ ವಿರಾಟ್ ಕೊಹ್ಲಿ
ಮಾರ್ಚ್ 25 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿತು. ಆರ್ಸಿಬಿ ಗೆಲುವಿಗೆ ಕಿಂಗ್ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶ. ಇನ್ನು ಕೊಹ್ಲಿ ಬ್ಯಾಟಿಂಗ್ ಮಾಡ್ತಿದ್ದ ವೇಳೆ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ, ಕೊಹ್ಲಿಯನ್ನು ತಬ್ಬಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.
ಕೊಹ್ಲಿಯನ್ನು ತಬ್ಬಿಕೊಂಡು, ಕಾಲಿಗೆ ನಮಸ್ಕರಿಸಿ ಮೈದಾನದಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ. ಅಭಿಮಾನಿಯ ಹುಚ್ಚಾಟವನ್ನು ನೋಡಿದ ಕೊಹ್ಲಿ ದಿಗ್ಗು ತೋಚದೇ ನಿಂತು ಬಿಟ್ಟಿದ್ದರು. ನಂತರ ಭದ್ರತಾ ಸಿಬ್ಬಂದಿ ಮೈದಾನಕ್ಕೆ ಎಂಟ್ರಿಯಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಈ ಘಟನೆ ರಾತ್ರಿ 9.15 ರಿಂದ 9.20 ಅವಧಿಯಲ್ಲಿ ನಡೆದಿತ್ತು.
ಇದನ್ನೂ ಓದಿ: Video: ಕಿಂಗ್ ಕೊಹ್ಲಿಗೆ ಹಾಡಿನ ಗೌರವ.. ಹೈದ್ರಾಬಾದ್ನಲ್ಲಿ ರೋಹಿತ್ ಶರ್ಮಾ ಕ್ರೇಜ್..!
View this post on Instagram
ಇನ್ನು ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರ್ಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಿಂಗ್ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ. ಇನ್ನು ಅವತ್ತಿನ ಪಂದ್ಯದಲ್ಲಿ ಕೊಹ್ಲಿ ಕೇವಲ 49 ಬಾಲ್ಗೆ 77 ರನ್ಗಳಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್