ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ಹೈವೋಲ್ಟೇಜ್ ಪಂದ್ಯ
ಮುಂಬೈ ಇಂಡಿಯನ್ಸ್ಗೆ ಸನ್ರೈಸರ್ಸ್ ಹೈದರಾಬಾದ್ 278 ರನ್ ಬಿಗ್ ಟಾರ್ಗೆಟ್
ಚೇಸ್ ಮಾಡಲಾಗದೆ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ಗೆ ಸೋಲು!
ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಹೈವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಗೆದ್ದು ಬೀಗಿದೆ.
ಹೈದರಾಬಾದ್ ನೀಡಿದ ಬೃಹತ್ ರನ್ಗಳ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 246 ರನ್ ಗಳಿಸಿದೆ. ಹೀಗಾಗಿ ಬರೋಬ್ಬರಿ 31 ರನ್ಗಳಿಂದ ಹಾರ್ದಿಕ್ ಪಡೆ ಸೋತಿದೆ.
ಮುಂಬೈ ಪರ ರೋಹಿತ್ 26, ಇಶಾನ್ ಕಿಶನ್ 34, ನಮನ್ 30, ತಿಕಲ್ ವರ್ಮಾ 64, ಹಾರ್ದಿಕ್ 24, ಟೀಮ್ ಡೇವಿಡ್ 42 ರನ್ ಗಳಿಸಿದ್ರು. ಒಂದು ರೀತಿ ಮುಂಬೈ ಸೋಲಿಗೆ ಹಾರ್ದಿಕ್ ಪಾಂಡ್ಯ ಅವರೇ ಕಾರಣ ಎನ್ನಬಹುದು.
ಟಾಸ್ ಗೆದ್ದುಕೊಂಡ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಅಕ್ಷರಶಃ ತಲೆಕೆಳಗಾಯಿತು. ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 278 ರನ್ಗಳ ಬೃಹತ್ ಟಾರ್ಗೆಟ್ ಅನ್ನು ಮುಂಬೈಗೆ ನೀಡಿದೆ. ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿದ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ಗಳು ಬೆಂಕಿ ಬ್ಯಾಟಿಂಗ್ ಮಾಡಿದರು.
ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆಂಡೆತ್ತಿದ ಟ್ರಾವೀಸ್ ಹೆಡ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 24 ಬಾಲ್ನಲ್ಲಿ 3 ಸಿಕ್ಸರ್, 9 ಫೋರ್ ಸಮೇತ 64 ರನ್ ಸಿಡಿಸಿ ದಾಖಲೆ ಬರೆದರು. ಓಪನರ್ ಟ್ರಾವಿಸ್ ಹೆಡ್ಗೆ ಸಾಥ್ ನೀಡಿದ ಅಭಿಶೇಕ್ ಶರ್ಮಾ ಮೊದಲು ಕೇವಲ 16 ಬಾಲ್ನಲ್ಲಿ ಅರ್ಧಶತಕ ಸಿಡಿಸಿದ್ರು. ಬಳಿಕ ತಾನು ಆಡಿದ 23 ಬಾಲ್ನಲ್ಲಿ 7 ಸಿಕ್ಸರ್, 3 ಫೋರ್ ಸಮೇತ 63 ರನ್ ಚಚ್ಚಿ ಕ್ಯಾಚ್ ನೀಡಿದ್ರು. ಇನ್ನು, ಏಡನ್ ಮರ್ಕ್ರಮ್ ಮತ್ತು ಹೆನ್ರಿಕ್ ಕ್ಲಾಸೆನ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಹೆನ್ರಿಕ್ ಕ್ಲಾಸೆನ್ ಅಂತೂ ರೌದ್ರವಾತಾರ ತಾಳಿದರು. ಕೇವಲ 34 ಎಸೆತ ಎದುರಿಸಿದ ಕ್ಲಾಸೆನ್ 4 ಫೋರ್, 7 ಅಮೋಘವಾದ ಸಿಕ್ಸರ್ ನೆರವಿನಿಂದ 80 ರನ್ಗಳನ್ನ ಬಾರಿಸಿದರು. ಮಾರ್ಕರಮ್ ಕೂಡ 28 ಎಸೆತದಲ್ಲಿ 1 ಸಿಕ್ಸ್, 2 ಫೋರ್ನಿಂದ 42 ರನ್ಗಳನ್ನು ಕೆಲಹಾಕಿದರು. ಇದರಿಂದ ಹೈದರಾಬಾದ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 278 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ: RCB ದಾಖಲೆ ಮುರಿದ ಹೈದರಾಬಾದ್.. ಮುಂಬೈಗೆ ಬರೋಬ್ಬರಿ 278 ರನ್ ಟಾರ್ಗೆಟ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ