ಡೆಲ್ಲಿ ಕ್ಯಾಪಿಟಲ್ಸ್ಗೆ ರಾಜಸ್ತಾನ್ ರಾಯಲ್ಸ್ ಬಿಗ್ ಟಾರ್ಗೆಟ್
ಸ್ಟಾರ್ ಆಲ್ರೌಂಡರ್ ರಿಯಾನ್ ಪರಾಗ್ ಭರ್ಜರಿ ಬ್ಯಾಟಿಂಗ್
ಈ ಮೆಗಾ ಐಪಿಎಲ್ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು..?
ಸದ್ಯ ಜೈಪುರ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಜಸ್ತಾನ್ ರಾಯಲ್ಸ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತರೂ ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ಪರ ಓಪನರ್ ಆಗಿ ಬಂದ ಯಶಸ್ವಿ ಜೈಸ್ವಾಲ್ 5, ಜೋಸ್ ಬಟ್ಲರ್ 11 ರನ್ ಮಾತ್ರ ಗಳಿಸಿ ಕೈಕೊಟ್ಟರು. ಸ್ಯಾಮ್ಸನ್ ಕೂಡ ಕೇವಲ 15 ರನ್ಗೆ ಔಟಾದ್ರು. ಬಳಿಕ ಬಂದ ರಿಯಾನ್ ಪರಾಗ್ ಡೆಲ್ಲಿ ಬೌಲರ್ಗಳ ಬೆಂಡೆತ್ತಿದ್ರು.
ಅಂದು ಬ್ಯಾಟಿಂಗ್ ಮಾಡದ ಕಾರಣಕ್ಕೆ ಟ್ರೋಲ್ ಆಗಿದ್ದ ರಿಯಾಗ್ ಇಂದು ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 45 ಬಾಲ್ನಲ್ಲಿ 6 ಭರ್ಜರಿ ಸಿಕ್ಸರ್, 7 ಫೋರ್ ಸಮೇತ 84 ರನ್ ಚಚ್ಚಿದ್ರು. ಕೊನೇ ಓವರ್ನಲ್ಲಿ ರಿಯಾನ್ ಪರಾಗ್ ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಎನ್ರಿಚ್ ನೋಕಿಯಾಗೆ ಬರೋಬ್ಬರಿ 25 ರನ್ ಸಿಡಿಸಿದ್ರು.
ಅಶ್ವಿನ್ 29, ಧೃವ್ ಜುರೆಲ್ 20, ಹೆಟ್ಮೇರ್ 14 ರನ್ ಗಳಿಸಿದ್ರು. ಆರಂಭಿಕ ಬ್ಯಾಟರ್ಗಳ ವೈಫಲ್ಯದಿಂದ ಅಲ್ಪಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಪರಾಗ್ 84 ರನ್ ಆಸರೆಯಾಯ್ತು. ಹೀಗಾಗಿ ರಾಜಸ್ತಾನ್ 185 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಇದನ್ನೂ ಓದಿ: ರೌಡಿಶೀಟರ್ ಕೊಲೆಗೆ ಮತ್ತೊಂದು ಟ್ವಿಸ್ಟ್; ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಯಲಿಗೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ