ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ 2024ರ ಟಿ20 ವಿಶ್ವಕಪ್
2024ರ ಟಿ20 ವಿಶ್ವಕಪ್ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ..!
ಈ ಮುನ್ನವೇ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ನಡೆಯಲಿರೋ 2024ರ ಟಿ20 ವಿಶ್ವಕಪ್ಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಾಗಲೇ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರೋ ಈ ಐಸಿಸಿ ಮೆಗಾ ಟೂರ್ನಿಗೆ ಟೈಮ್ ಟೇಬಲ್ ಪ್ರಕಟವಾಗಿದೆ. ಏಪ್ರಿಲ್ ಕೊನೆ ವಾರದಲ್ಲಿ ಟೂರ್ನಿಗಾಗಿ ಬಲಿಷ್ಠ ಟಿ20 ಪ್ರಕಟವಾಗಲಿದೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಬಿಗ್ ಶಾಕ್ ಕೊಟ್ಟಿದೆ.
ಹೌದು, ಭಾರತ ತಂಡದಲ್ಲಿ ಟಿ20 ವಿಶ್ವಕಪ್ಗಾಗಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಅದರಲ್ಲೂ ಟೂರ್ನಿಯಿಂದ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಬಹುದು. ಇವರ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಶಿವಂ ದುಬೆ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.
ಸದ್ಯ ನಡೆಯುತ್ತಿರೋ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಹಿಸಿಕೊಂಡಿರೋ ಹಾರ್ದಿಕ್ ಪಾಂಡ್ಯ ಪ್ರದರ್ಶನ ನಿರಾಶಾದಾಯಕವಾಗಿದೆ. ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದಾರೆ. ಫಾರ್ಮ್ನಲ್ಲಿ ಇಲ್ಲದ ಕಾರಣ ಪಾಂಡ್ಯಗೆ ಟಿ20 ವಿಶ್ವಕಪ್ನಲ್ಲಿ ಅವಕಾಶ ಸಿಗೋದು ಡೌಟ್ ಎನ್ನಲಾಗುತ್ತಿದೆ.
ಇನ್ನು, ಟಿ20 ವಿಶ್ವಕಪ್ಗೆ ಪಾಂಡ್ಯ ಬದಲಿಗೆ ಶಿವಂ ದುಬೆಗೆ ಸ್ಥಾನ ನೀಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಾರಣ ದುಬೆ ಇತ್ತೀಚೆಗೆ ಉತ್ತಮ ಫಾರ್ಮ್ನಲ್ಲಿರುವುದು. ಅದರಲ್ಲೂ ಶಿವಂ ದುಬೆ ಗುಜರಾತ್ ಟೈಟನ್ಸ್ ವಿರುದ್ಧ 220ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು. ಶಿವಂ ದುಬೆ ಕೇವಲ 23 ಎಸೆತಗಳಲ್ಲಿ 51 ರನ್ ಗಳಿಸಿದ್ದು.
ಇದನ್ನೂ ಓದಿ: IPL 2024: ಕನ್ನಡಿಗ ಮಯಾಂಕ್ ವಿರುದ್ಧ ಆಕ್ರೋಶ ಹೊರಹಾಕಿದ ಹೈದರಾಬಾದ್ ಫ್ಯಾನ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ