ಎಡಗೈ ಬ್ಯಾಟ್ಸ್ಮನ್ಗಳೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ‘ಲಕ್’
ಡಿಸ್ಟ್ರಕ್ಟಿವ್ ಕ್ವಿಂಟನ್ ಡಿ ಕಾಕ್ ಅಂಡ್ ಪವರ್ಫುಲ್ ಆಗಿದ್ದಾರೆ ಪಡಿಕ್ಕಲ್
ಗೇಮ್ ಚೇಂಜರ್ ನಿಕೋಲಸ್ ಪೂರನ್ ಬಲ, ಕೆ.ಎಲ್.ರಾಹುಲ್ ಕ್ಯಾಪ್ಟನ್ಸಿ
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಸೋತಿರುವ ಆರ್ಸಿಬಿ, ಇದೀಗ ಗೆಲುವಿನ ಹುಡುಕಾಟ ನಡೆಸೋ ಯತ್ನದಲ್ಲಿದೆ. ಆದರೆ ಇದು ಸಾಧ್ಯವಾಗಬೇಕಾದ್ರೆ, ಲಕ್ನೋ ತಂಡದಲ್ಲಿನ ಆ ಶಕ್ತಿಯನ್ನ ಮೊದಲು ಮಟ್ಟ ಹಾಕಬೇಕು. ಬ್ಯಾಟರ್ ಹಾಗೂ ಬೌಲರ್ಗಳ ನಡುವೆ ದಂಗಲ್ ನಡೆದ್ರೆ ಮಾತ್ರ ಆ ಶಕ್ತಿಯನ್ನ ಮಟ್ಟ ಹಾಕೋಕೆ ಸಾಧ್ಯ. ಇಲ್ಲದಿದ್ರೆ ಸೋಲು ಕಟ್ಟಿಟ್ಟ ಬುತ್ತಿ.
ಹೊಸ ಚಾಲೆಂಜ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಸೋತ ಅಂಗಳದಲ್ಲೇ ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದು, ಲಕ್ನೋ ಸೂಪರ್ ಜೈಂಟ್ಸ್ ಎದುರು ಸೂಪರ್ ಪರ್ಫಾಮೆನ್ಸ್ ನೀಡೋ ಲೆಕ್ಕಾಚಾರದಲ್ಲಿದೆ. ಆದ್ರೂ, ಲಕ್ನೋ ತಂಡದ ಬಲ, ಆರ್ಸಿಬಿ ಪಾಳಯದಲ್ಲಿ ಟೆನ್ಶನ್ ಹೆಚ್ಚಿಸಿದೆ.
ಎಡಗೈ ಬ್ಯಾಟ್ಸ್ಮನ್ಗಳೇ ಲಕ್ನೋ ತಂಡದ ‘ಲಕ್’..!
ಲಕ್ನೋ ಸೂಪರ್ ಜೈಂಟ್ಸ್ ತಂಡ ಸ್ಟ್ರಾಂಗ್ ಬ್ಯಾಟಿಂಗ್ ಲೈನ್ ಆಪ್ ಹೊಂದಿದೆ. ಓಪನರ್ಗಳಿಂದ ಹಿಡಿದು ಲೋವರ್ ಆರ್ಡರ್ ತನಕ ಅದ್ಬುತ ಬ್ಯಾಟರ್ಸ್ ಇದ್ದಾರೆ. ಅದ್ರಲ್ಲೂ ಲೆಫ್ಟಿ ಬ್ಯಾಟರ್ಸ್, ತಂಡದ ಲಕ್ಕಿ ಹ್ಯಾಂಡ್ಸ್ ಆಗಿದ್ದಾರೆ. ನಿಜ ಹೇಳಬೇಕಂದ್ರೆ ಇವರೇ ಲಕ್ನೋ ತಂಡದ ಗೇಮ್ ಚೇಂಜರ್ಸ್ ಆ್ಯಂಡ್ ಮ್ಯಾಚ್ ವಿನ್ನರ್ಸ್. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ತಂಡದ ಲೆಫ್ಟಿ ಬ್ಯಾಟರ್ಗಳ ಸವಾಲನ್ನು ಆರ್ಸಿಬಿ ಬೌಲರ್ಸ್ ಮೆಟ್ಟಿ ನಿಲ್ಲಬೇಕಿದೆ.
ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡೆಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್
ಡಿಸ್ಟ್ರಕ್ಟಿವ್ ಕ್ವಿಂಟನ್ ಡಿ ಕಾಕ್ ಅಂಡ್ ಪಡಿಕ್ಕಲ್..!
ಆರ್ಸಿಬಿ ಬೌಲರ್ಗಳ ಮೊದಲ ಸವಾಲೇ ಸೌತ್ ಆಫ್ರಿಕನ್ ಸೂಪರ್ ಸ್ಟಾರ್ ಕ್ವಿಂಟನ್ ಡಿಕಾಕ್, ವಿಕೆಟ್ ಬೇಟೆಯಾಡುವುದಾಗಿದೆ. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಕೈಹಾಕುವ ಡಿಕಾಕ್, ಕ್ರೀಸ್ನಲ್ಲಿ ಇರುವಷ್ಟು ಹೊತ್ತು ಅಪಾಯ ತಪ್ಪಿದಿಲ್ಲ. ಡಿ ಕಾಕ್ ಜೊತೆ ಕರ್ನಾಟಕದ ಸ್ಟಾರ್ ದೇವದತ್ ಪಡಿಕ್ಕಲ್ ಕೂಡ ಮ್ಯಾಚ್ ವಿನ್ನರ್ ಪ್ಲೇಯರ್. ನಿಧಾನಗತಿಯಲ್ಲಿ ಇನ್ನಿಂಗ್ಸ್ ಕಟ್ಟೋ ಪಡಿಕ್ಕಲ್, ಯಾವುದೇ ಕ್ಷಣದಲ್ಲಾದರು ಸಿಡಿದೇಳಬಲ್ಲರು.
ಗೇಮ್ ಚೇಂಜರ್ ನಿಕೋಲಸ್ ಪೂರನ್..!
ನಿಕೋಲಸ್ ಪೂರನ್.. ಲಕ್ನೋ ತಂಡದ ಮೋಸ್ಟ್ ಡೇಂಜರಸ್ ಆ್ಯಂಡ್ ಡೆಡ್ಲಿ ಬ್ಯಾಟ್ಸ್ಮನ್. ಕ್ಷಣಾರ್ಧದಲ್ಲಿ ಪಂದ್ಯದ ಗತಿ ಬದಲಿಸುವ ತಾಕತ್ತಿದೆ. ಬೌಲರ್ಗಳ ಎದುರು ಎದೆಯೊಡ್ಡಿ ನಿಂತರೆ ಮಾರಣಹೋಮ ಗ್ಯಾರಂಟಿ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕಳೆದ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲೇ ನಡೆದ ಪಂದ್ಯ. ಆ ಪಂದ್ಯದಲ್ಲಿ ಜಸ್ಟ್ 19 ಎಸೆತಗಳಲ್ಲೇ 62 ರನ್ ಸಿಡಿಸಿದ್ದ ಈತ, ಪಂದ್ಯದ ಚಿತ್ರಣವನ್ನೇ ಬದಲಿಸಿದ್ದ. ಹೀಗಾಗಿ ಲಕ್ನೋ ತಂಡದ ಈ ಮಷಿನ್ ಗನ್ಗೆ ಬ್ರೇಕ್ ಹಾಕಬೇಕಿದೆ.
ಡೆತ್ ಓವರ್ನಲ್ಲಿ ಕೃನಾಲ್ ಪವರ್ ಹಿಟ್ಟಿಂಗ್..!
ಕೃನಾಲ್ ಪಾಂಡ್ಯ.. ಅಂತಿಮ ಕ್ಷಣದಲ್ಲಿ ಪಂದ್ಯಕ್ಕೆ ಟ್ವಿಸ್ಟ್ ನೀಡಬಲ್ಲ ಬ್ಯಾಟರ್. ಸ್ಲಾಗ್ ಓವರ್ಗಳಲ್ಲಿ ಸಿಡಿಗುಂಡಿನ ಬ್ಯಾಟಿಂಗ್ ನಡೆಸಬಲ್ಲ ಚಾಣಾಕ್ಷ. ಸದ್ಯ ಸಾಲಿಡ್ ಫಾರ್ಮ್ನಲ್ಲಿರುವ ಕೃನಾಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳ ಪಾಲಿನ ದುಸ್ವಪ್ನವಾಗಿ ಕಾಡಬಲ್ಲರು.
ಎಷ್ಟು ಬೇಗ ಸಾಧ್ಯವಾಗುತ್ತೋ ಅಷ್ಟು ಬೇಗ ಲಕ್ನೋ ಪಡೆಯ ಈ ಲೆಫ್ಟಿ ಬ್ಯಾಟರ್ಗಳ ವಿಕೆಟ್ ಬೇಟೆಯಾಡಿದ್ರೆ, ಆರ್ಸಿಬಿ ಗೆಲುವು ಪಕ್ಕಾ ಆಗಲಿದೆ. ಆದ್ರೆ, ವಿಕೆಟ್ ಬೇಟೆಯಾಡೋದ್ಯಾರು ಅನ್ನೋದೆ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಇಂದಿನ ಪಂದ್ಯ ಲಕ್ನೋ ಲೆಫ್ಟಿ ಬ್ಯಾಟರ್ಸ್ ವರ್ಸಸ್ ಆರ್ಸಿಬಿ ಬೌಲರ್ಸ್ ನಡುವಿನ ಫೈಟ್ ಎಂಬಂತೆ ಬಿಂಬಿತವಾಗಿದ್ದು, ಈ ಮಹಾ ದಂಗಲ್ನಲ್ಲಿ ಯಾರ್ ಗೆಲ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್