newsfirstkannada.com

×

ಇರಾನ್-ಇಸ್ರೇಲ್ ಮಧ್ಯೆ ಉದ್ವಿಗ್ನತೆ, ವಿಶ್ವದಲ್ಲಿ ಮತ್ತೊಂದು ಘೋರ ಯುದ್ಧದ ಆತಂಕ..!

Share :

Published April 13, 2024 at 7:31am

Update April 13, 2024 at 8:08am

    ಇಸ್ರೇಲ್​ನ ಭೂಪ್ರದೇಶದ ಮೇಲೆ ಇರಾನ್‌ನಿಂದ ದಾಳಿ ಸಾಧ್ಯತೆ

    ಇಸ್ರೇಲ್, ಪ್ಯಾಲೆಸ್ತೈನ್​ ಪ್ರದೇಶಗಳಿಗೆ ಪ್ರಯಾಣಿಸದಂತೆ ಎಚ್ಚರಿಕೆ

    ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮತ್ತಷ್ಟು ಭೀಕರ ಸ್ವರೂಪ

ಬಾಂಬ್.. ಗ್ರನೇಡ್.. ರಾಕೆಟ್​ ಲಾಂಚರ್.. ಇಸ್ರೇಲ್.. ಪ್ಯಾಲೆಸ್ತೈನ್​.. ಗಾಜಾಪಟ್ಟಿ.. ಹಮಾಸ್.. ಈ ಹೆಸರುಗಳನ್ನ ಕೇಳ್ತಿದ್ರೆ.. ಸುಮಾರು ಆರು ತಿಂಗಳ ಮುಂಚೆ ನಡೆದ ಲಕ್ಷಾಂತರ ಜನ ಮಾರಣ ಹೋಮ ನೆನಪಾಗುತ್ತೆ.. ಬೂದಿ ಮುಚ್ಚಿದ ಕೆಂಡದಂತಿದ್ದ ಇಸ್ರೇಲ್-ಪ್ಯಾಲೆಸ್ತೈನ್ ನಡುವಿನ ಯುದ್ಧಕ್ಕೆ ಇದೀಗ ಪೆಟ್ರೋಲ್ ಸುರಿದು ಮತ್ತೆ ರಕ್ತದೋಕುಳಿ ಹರಿಸಲು ಇರಾನ್‌ ದೇಶ ಎಂಟ್ರಿ ಕೊಟ್ಟಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆಯುತ್ತಿದೆ. ಅದ್ರಲ್ಲೂ ಇಸ್ರೇಲ್ ವಾಯು ಸೇನೆಯ ದಾಳಿಗೆ ಗಾಜಾ ಪಟ್ಟಿ ನಗರ ನರಕವಾಗಿ ಬದಲಾಗಿದೆ. ಇದರ ನಡುವೆ ಕಳೆದ ಏಪ್ರಿಲ್ 1 ರಂದು ಸಿರಿಯಾದಲ್ಲಿನ ಇರಾನಿನ ಧೂತವಾಸದ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಇಸ್ರೇಲ್ ವಿರುದ್ಧ ಇರಾನ್ ಸೇನೆ ಕೆಂಡಕಾರಲು ಶುರುಮಾಡಿದೆ.

ಇರಾನ್‌ನಿಂದ ಪ್ರತೀಕಾರ ಎಚ್ಚರಿಕೆ!
ಕಳೆದ ಏಪ್ರಿಲ್​ 1 ರಂದು ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಇರಾನ್ ಧೂತವಾಸದ ಮೇಲೆ ಇಸ್ರೇಲ್ ಭೀಕರ ಬಾಂಬ್ ದಾಳಿ​ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಬಾಂಬ್​ ದಾಳಿಯಲ್ಲಿ ಇಬ್ಬರು ಸೇನಾ ಮುಖ್ಯಸ್ಥರು ಸೇರಿದಂತೆ ಏಳು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸದಸ್ಯರು ಬಲಿಯಾಗಿದ್ದಾರೆ. ಇದು ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರದ ಉಲ್ಬಣಗೊಳ್ಳುವ ಭಯಕ್ಕೆ ಕಾರಣಗಿದ್ದು, ಬೆನ್ನಲ್ಲೇ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ಇಸ್ರೇಲ್ ನೀಡಿದೆ. ಬದ್ಧ ವೈರಿಗಳಾದ ಇರಾನ್ ಹಾಗೂ ಇಸ್ರೇಲ್ ನಡುವಿನ ಉದ್ವಿಗ್ನತೆಯು ದೊಡ್ಡ ಪ್ರಮಾಣದಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಸ್ರೇನ್​ ಹಾಗೂ ಇರಾನ್​ ನಿವಾಸಿಗಳು ಕ್ಷಣ ಕ್ಷಣ ಭಯದಲ್ಲಿ ಬದುಕುವಂತಾಗಿದೆ. ಮುಂದಿನ ಕೆಲ ಗಂಟೆಗಳಲ್ಲಿ ಅಂದ್ರೆ ಇಂದು ಅಥವಾ ನಾಳೆಯೊಳಗೆ ಇಸ್ರೇಲ್​ ಮೇಲೆ ಇರಾನ್​ ಯುದ್ಧದ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಡಿಕೆ ಶಿವಕುಮಾರ್; HDK ಆಪ್ತರ ಮೆಗಾ ಆಪರೇಷನ್..!

ಇರಾನ್ ಮತ್ತು ಇಸ್ರೇಲ್ ನಡುವಿನ ಬಿಕ್ಕಟ್ಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಸೂಚನೆಯವರೆಗೆ ಇರಾನ್, ಲೆಬನಾನ್, ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳಿಗೆ ಪ್ರಯಾಣಿಸದಂತೆ ಭಾರತವೂ ತನ್ನ ಪ್ರಜೆಗಳಿಗೆ ಸೂಚಿಸಿದೆ. ಫ್ರಾನ್ಸ್, ಭಾರತ, ರಷ್ಯಾ, ಪೋಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವು ದೇಶಗಳು ಇದೇ ಸೂಚನೆಯನ್ನ ಕೊಟ್ಟಿದೆ. ಸಲಹಾ ಸೂಚಿಯನ್ನ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಈ ಎರಡು ದೇಶಗಳಲ್ಲಿ ಸದ್ಯ ವಾಸಿಸುತ್ತಿರುವವರು ಭಾರತೀಯ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿ, ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದೂ ಸಲಹೆ ನೀಡಿದೆ.

ಇದನ್ನೂ ಓದಿ: ಹೆಸರು ಚೇಂಜ್ ಮಾಡಿ ಓಡಾಟ, ಕೆಫೆ ಸ್ಫೋಟದ ಮಾಸ್ಟರ್​ಮೈಂಡ್​ ಬಗ್ಗೆ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ..?

ಇಸ್ರೇಲ್​ ಹಮಾಸ್​ ಯುದ್ಧದ ಅಂತಿಮ ಘಟ್ಟ ತಲುಪಿದೆ ಅನ್ನೋ ಅಷ್ಟ್ರಲ್ಲಿ ಇಸ್ರೇಲ್ ಪಡೆಗಳು ದಾಳಿಯನ್ನು ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಿರುವುದು ಭಯ ಹುಟ್ಟಿಸಿದೆ. ಈ ನಡುವೆ ಅಖಾಡಕ್ಕೆ ಇರಾನ್ ಎಂಟ್ರಿ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇರಾನ್-ಇಸ್ರೇಲ್ ಮಧ್ಯೆ ಉದ್ವಿಗ್ನತೆ, ವಿಶ್ವದಲ್ಲಿ ಮತ್ತೊಂದು ಘೋರ ಯುದ್ಧದ ಆತಂಕ..!

https://newsfirstlive.com/wp-content/uploads/2024/04/IRAN-ISREAL.jpg

Load More