newsfirstkannada.com

×

ಮೂವರು ಮಕ್ಕಳ ಸ್ಕೂಲ್​ ಫೀಸ್ ಕಟ್ಟದೇ ಧೋನಿ ನೋಡಲು 64,000 ಖರ್ಚು ಮಾಡಿದ ಅಭಿಮಾನಿ..!

Share :

Published April 13, 2024 at 11:08am

Update April 13, 2024 at 11:18am

    ಧೋನಿ ನೋಡಲು ಮೂವರು ಮಕ್ಕಳ ಜೊತೆ ತಂದೆ ಹರಸಾಹಸ

    ಏಪ್ರಿಲ್ 8 ರಂದು ನಡೆದ ಪಂದ್ಯ ವೀಕ್ಷಣೆಗೆ ಬಂದಿದ್ದ ಅಪ್ಪಟ ಅಭಿಮಾನಿ

    ಧೋನಿ ಮೇಲಿನ ಕ್ರೇಜ್​​ ಬಗ್ಗೆ ಅಭಿಮಾನಿ ಹೇಳಿದ್ದೇನು ಗೊತ್ತಾ..? Video

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ ಜಗತ್ತಿನಲ್ಲಿ ಗ್ರೇಟ್ ಎನಿಸಿಕೊಂಡವರು. ಅವರು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅಭಿಮಾನಿಗಳ ಅಭಿಮಾನದಿಂದ ಮಾತ್ರವಲ್ಲ, ಲೆಜೆಂಡರಿ ಕ್ಯಾಪ್ಟನ್ಸಿ ಮತ್ತು ಅವರ ಕೆಲಸ ಕಾರ್ಯಗಳಿಂದಲೂ ಗ್ರೇಟ್​​ ಎಂದು ಹೆಸರಾದವರು.

ಇದನ್ನೂ ಓದಿ:ಬೇರೊಬ್ಬನ ಜೊತೆ ಮದುವೆ; ನೊಂದು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಜೀವಬಿಟ್ಟ ಪ್ರೇಮಿಗಳು

ಇದೀಗ ಧೋನಿ ಅವರ ಅಭಿಮಾನಿಯೊಬ್ಬ ಭಾರೀ ಸುದ್ದಿಯಲ್ಲಿದ್ದಾರೆ. ಏಪ್ರಿಲ್ 8 ರಂದು ಸಿಎಸ್​ಕೆ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಈ ವೇಳೆ ಧೋನಿ ಅವರ ಕ್ರೇಜಿ ಅಭಿಮಾನಿಯೊಬ್ಬ ತನ್ನ ಮೂವರು ಹೆಣ್ಮಕ್ಕಳೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದ. ಆದರೆ, ಅವರು ಟಿಕೆಟ್​ಗಾಗಿ ಬರೋಬ್ಬರಿ 64 ಸಾವಿರ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ.

ಇದನ್ನೂ ಓದಿRCBಗೆ ಪ್ಲೇ-ಆಫ್ ದಾರಿ ಕಷ್ಟವೇನೂ ಅಲ್ಲ​.. ಕಮರುತ್ತಿರುವ ಕನಸುಗಳಿಗೆ ಜೀವ ತುಂಬಲು ಇನ್ನೂ ಇವೆ ದಾರಿಗಳು..!

ಅಭಿಮಾನಿ ಹೇಳುವ ಪ್ರಕಾರ, ನನಗೆ ಟಿಕೆಟ್ ಸಿಗಲಿಲ್ಲ. ಅದಕ್ಕಾಗಿ ನಾನು ಬ್ಲಾಕ್​​ನಲ್ಲಿ ಟಿಕೆಟ್ ಪಡೆದುಕೊಂಡಿದೆ. ಒಟ್ಟು 64 ಸಾವಿರ ರೂಪಾಯಿ ಆಯಿತು. ನಾನಿನ್ನೂ ಮಕ್ಕಳ ಸ್ಕೂಲ್ ಫೀಸ್​ ತುಂಬಿಲ್ಲ. ನಾವು ಒಮ್ಮೆ ಧೋನಿಯನ್ನು ನೋಡಬೇಕಿತ್ತು. ಮೂವರು ಮಕ್ಕಳು ಹಾಗೂ ನಾನು ಸಂತೋಷಗೊಂಡಿದ್ದೇನೆ ಎಂದಿದ್ದಾರೆ. ನನ್ನ ಅಪ್ಪ ಟಿಕೆಟ್ ಪಡೆಯಲು ತುಂಬಾ ಕಷ್ಟ ಪಟ್ಟರು. ಧೋನಿ ಆಡಲು ಬಂದಿರೋದನ್ನು ನೋಡಿ ತುಂಬಾ ಖುಷಿ ಪಟ್ಟಿದ್ದೇವೆ ಎಂದು ಅವರ ಮಗಳೊಬ್ಬಳು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೂವರು ಮಕ್ಕಳ ಸ್ಕೂಲ್​ ಫೀಸ್ ಕಟ್ಟದೇ ಧೋನಿ ನೋಡಲು 64,000 ಖರ್ಚು ಮಾಡಿದ ಅಭಿಮಾನಿ..!

https://newsfirstlive.com/wp-content/uploads/2024/04/DHONI-FAN-1.jpg

Load More