newsfirstkannada.com

×

ಇರಾನ್ ಹಿಡಿತದಲ್ಲಿ 17 ಭಾರತೀಯರು; ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾದ್ರೆ ಭಾರತಕ್ಕೆ ದೊಡ್ಡ ಸಮಸ್ಯೆ, ಯಾಕೆ ಗೊತ್ತಾ?

Share :

Published April 14, 2024 at 1:21pm

    ಇಸ್ರೇಲಿ ಹಡಗಿನಲ್ಲಿದ್ದ 17 ಭಾರತೀಯರನ್ನು ವಶಕ್ಕೆ ಪಡೆದ ಇರಾನ್

    2 ದೇಶಗಳ ನಡುವಿನ ಸಂಘರ್ಷ ಹೆಚ್ಚಾದರೆ ಭಾರತಕ್ಕೆ ದೊಡ್ಡ ಸವಾಲ್

    ಇರಾನ್ ಮತ್ತು ಇಸ್ರೇಲ್​ನಲ್ಲಿ ಭಾರತೀಯರು ಎಷ್ಟು ಮಂದಿ ಇದ್ದಾರೆ?

ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಏಪ್ರಿಲ್ 13 ರ ಮಧ್ಯರಾತ್ರಿ ಇರಾನ್, ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ಡ್ರೋಣ್ ಮೂಲಕ ದಾಳಿ ನಡೆಸಿದೆ. ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಈ ದಾಳಿಗೂ ಒಂದು ದಿನ ಮೊದಲು ಇರಾನ್ ಇಸ್ರೇಲ್ ಹಡಗನ್ನು ವಶಪಡಿಸಿಕೊಂಡಿದೆ. ಈ ಹಡಗಿನಲ್ಲಿ ಒಟ್ಟು 25 ಜನರಿದ್ದು, ಅವರಲ್ಲಿ 17 ಮಂದಿ ಭಾರತೀಯರು ಎಂಬವುದು ಆಘಾತಕಾರಿ ವಿಚಾರ. ಎರಡು ದೇಶಗಳ ಯುದ್ಧದ ಬಿಕ್ಕಟ್ಟಿನ ನಡುವೆ ಇರಾನ್​ಗೆ ಸಿಕ್ಕಿರುವ ಭಾರತೀಯರ ಭದ್ರತೆ ವಿಚಾರ ಭಾರತಕ್ಕೆ ದೊಡ್ಡ ತಲೆನೋವಾಗಿದೆ.

ಏನಿದು ಬೆಳವಣಿಗೆ..?
ಇರಾನ್​​ನ ರೆವಲ್ಯೂಷನರಿ ಗಾರ್ಡ್​ಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತಿದ್ದ ಇಸ್ರೇಲಿ ಹಡಗು ಎಂಎಸ್​ಸಿ ಏರೀಸ್​ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಹಡಗು ಯುನೈಟೆಡ್​ ಅರಬ್ ಎಮಿರೈಟ್ಸ್​​ (ಯುಎಇ) ಬಂದರಿನಿಂದ ಹೊರಟಿತ್ತು.

ಇದನ್ನೂ ಓದಿ: RCB ಐಪಿಎಲ್​​​​​​ನ ಮೋಸ್ಟ್ ಅನ್​​ಲಕ್ಕಿ ಟೀಮ್; ಬಿಟ್ಟು ಹೋದವರಿಗೆಲ್ಲ ಖುಲಾಯಿಸಿದೆ ಅದೃಷ್ಟ..!

ಇರಾನ್-ಇಸ್ರೇಲ್​ ಮಧ್ಯೆ ಸಿಲುಕಿಕೊಂಡ ಭಾರತ
ಸದ್ಯದ ಪರಿಸ್ಥಿತಿಯಲ್ಲಿ ನಮ್ಮವರ ರಕ್ಷಣೆ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎರಡು ದೇಶಗಳ ಉದ್ವಿಗ್ನತೆ ಬೆನ್ನಲ್ಲೇ, ವಿದೇಶಾಂಗ ಇಲಾಖೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಎರಡು ದೇಶಗಳ ನಡುವಿನ ಬಿಕ್ಕಟ್ಟಿನ ಬಗ್ಗೆ ಭಾರತ ಕಳವಳ ಹೊಂದಿದೆ. ಎಂಎಸ್​ಸಿ ಹಡಗನ್ನು ಇರಾನ್ ವಶಪಡಿಸಿಕೊಂಡಿದೆ ಎಂದು ಭಾರತಕ್ಕೆ ತಿಳಿದಿದೆ. ಅದರಲ್ಲಿ ಭಾರತದ 17 ಪ್ರಜೆಗಳಿದ್ದಾರೆ ಎಂದು ಗೊತ್ತಾಗಿದೆ. ಭಾರತೀಯ ನಾಗರಿಕರ ಬಿಡುಗಡೆ ಮತ್ತು ಅವರ ಸುರಕ್ಷತೆಗೆ ಸಂಬಂಧಿಸಿ ಭಾರತ ಸರ್ಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್ ಸರ್ಕಾರದ ಸಂಪರ್ಕದಲ್ಲಿ ಕೇಂದ್ರ ಇದೆ.

ಇದನ್ನೂ ಓದಿ7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಯುಟ್ಯೂಬ್ ಸ್ಟಾರ್​ ಜೋಡಿ

ಒಂದು ವೇಳೆ ಎರಡೂ ದೇಶಗಳ ನಡುವಿನ ಸಂಘರ್ಷ ಹೆಚ್ಚಾದರೂ, ಭಾರತಕ್ಕೆ ದೊಡ್ಡ ಸವಾಲ್ ಆಗಲಿದೆ. ಯಾಕೆಂದರೆ ಭಾರತ ಇರಾನ್ ಮತ್ತು ಇಸ್ರೇಲ್ ನಡುವೆ ಉತ್ತಮ ಸಂಬಂಧ ಹೊಂದಿದೆ. ಹೀಗಿರುವಾಗ ಭಾರತ ಯಾವುದೇ ನಿಲುವು ತೆಗೆದುಕೊಳ್ಳಬೇಕು ಎಂದರೂ ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ಇದನ್ನೂ ಓದಿ:ಇಸ್ರೇಲ್ ಮೇಲೆ ಯುದ್ಧ ಸಾರಿದ ಇರಾನ್; ಸ್ಟ್ರಾಂಗ್ ಮೆಸೇಜ್ ಕೊಟ್ಟ ಭಾರತ..

ಇಸ್ರೇಲಿ ಹಡಗಿನಲ್ಲಿರುವ 17 ಭಾರತೀಯರನ್ನು ಬಿಡುಗಡೆಗೊಳಿಸುವುದು ಭಾರತದ ಮೊದಲ ಗುರಿಯಾಗಿದೆ. ಇದಕ್ಕೂ ಮೊದಲು ಉಕ್ರೇನ್​ನಿಂದ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮೋದಿ ಸರ್ಕಾರ ಕರೆದುಕೊಂಡು ಬಂದಿತ್ತು. ಇನ್ನು ಇರಾನ್ ಮತ್ತು ಇಸ್ರೇಲ್​​ ಎರಡೂ ದೇಶಗಳಲ್ಲಿ ಭಾರತೀಯರು ವಾಸವಿದ್ದಾರೆ. ಇಸ್ರೇಲ್​ನಲ್ಲಿ ಸುಮಾರು 18 ಸಾವಿರ ಭಾರತೀಯರು ಮತ್ತು ಇರಾನ್​ನಲ್ಲಿ 5000 ಭಾರತೀಯರು ವಾಸಿಸುತ್ತಿದ್ದಾರೆ. ತಿಂಗಳ ಆರಂಭದಲ್ಲಿ ಸುಮಾರು 60 ಭಾರತೀಯ ಕಾರ್ಮಿಕರು ಇಸ್ರೇಲ್​ಗೆ ತೆರಳಿದ್ದರು.

ಇದನ್ನೂ ಓದಿ:3ನೇ ಮಹಾಯುದ್ಧದ ಆತಂಕ.. ಇಸ್ರೇಲ್​ ಮೇಲೆ 200 ಡ್ರೋನ್​, ಭಾರೀ ಮಿಸೈಲ್ಸ್​ ಉಡಾಯಿಸಿದ ಇರಾನ್

ಇನ್ನು ಇಸ್ರೇಲ್ ಭಾರತದ ಹಳೆಯ ಮಿತ್ರ. ಉಭಯ ದೇಶಗಳ ನಡುವಿನ ಸಂಬಂಧಗಳು ಬಹಳ ನಿಕಟವಾಗಿವೆ. ರಕ್ಷಣೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೇಲ್ ಭಾರತಕ್ಕೆ ತುಂಬಾನೇ ಸಹಾಯಕಾರಿಯಾಗಿದೆ. ಅದೇ ರೀತಿ ಪ್ರಾದೇಶಿಕ ಭದ್ರತೆ ದೃಷ್ಟಿಯಿಂದ ಇರಾನ್ ಕೂಡ ಭಾರತಕ್ಕೆ ಲಾಭದಾಯಕ ರಾಷ್ಟ್ರವಾಗಿದೆ.

ಇರಾನ್ ಇಸ್ರೇಲ್ ಮೇಲೆ ಯಾಕೆ ದಾಳಿ..?
ಏಪ್ರಿಲ್ 1 ರಂದು ಸಿರಿಯಾದಲ್ಲಿ ಇರಾನ್​ ಕಾನ್ಸುಲೇಟ್​ (ರಾಯಭಾರಿ ಕಚೇರಿ) ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಇರಾನ್​​ನ ಉನ್ನತ ಕಮಾಂಡರ್ ಸೇರಿದಂತೆ ಅನೇಕ ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಇರಾನ್ ಇಸ್ರೇಲ್ ಮೇಲೆ ಹೊರಿಸಿದೆ. ಈ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇರಾನ್ ಹಿಡಿತದಲ್ಲಿ 17 ಭಾರತೀಯರು; ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾದ್ರೆ ಭಾರತಕ್ಕೆ ದೊಡ್ಡ ಸಮಸ್ಯೆ, ಯಾಕೆ ಗೊತ್ತಾ?

https://newsfirstlive.com/wp-content/uploads/2024/04/ISREAL.jpg

Load More