ಕೊಹ್ಲಿ ಸಲಹೆ-ಸೂಚನೆ ಪಡೆದ್ರೆ ತಂಡದ ಹಿತದೃಷ್ಟಿಗೆ ಒಳ್ಳೆಯದು
ಸ್ಪಿನ್ ಮಾಂತ್ರಿಕ ಸಾಯಿ ಕಿಶೋರ್ ದಾಳಿ ಮೆಟ್ಟಿ ನಿಲ್ಲಬೇಕಿದೆ
ಮೊದಲ ಪಂದ್ಯದಿಂದಲೂ ಎಡವುತ್ತಿರೋ ಕ್ಯಾಪ್ಟನ್ ಡುಪ್ಲೆಸಿ
ಮತ್ತೊಂದು ಮೆಗಾ ಫೈಟ್ಗೆ ಐಪಿಎಲ್ ಅಖಾಡದಲ್ಲಿ ವೇದಿಕೆ ಸಜ್ಜಾಗಿದೆ. ಗೆಲುವಿನ ಓಟ ಮುಂದುವರೆಸೋ ತವಕದಲ್ಲಿರೋ ಆರ್ಸಿಬಿಗೆ, ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರೋ ಗುಜರಾತ್ ಟೈಟನ್ಸ್ನ ಸವಾಲು ಎದುರಾಗಲಿದೆ. ಹೈದ್ರಾಬಾದ್ ಮಣಿಸಿದ ವಿಶ್ವಾಸದಲ್ಲಿರೋ ಆರ್ಸಿಬಿಗೆ, ಗುಜರಾತ್ ವಿರುದ್ಧ ಗೆಲ್ಲೋದು ಸುಲಭದ ವಿಚಾರವಲ್ಲ. ಆರ್ಸಿಬಿ ಮುಂದಿರೋ ಸವಾಲೇನು?.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಹೈದ್ರಾಬಾದ್ ವಿರುದ್ಧ ಅವರದೇ ಅಂಗಳದಲ್ಲಿ ದಿಗ್ವಿಜಯ ಸಾಧಿಸಿರೋ ಡುಪ್ಲೆಸಿ ಪಡೆ ಇಂದು ಅಹ್ಮದಾಬಾದ್ನಲ್ಲಿ ಗುಜರಾತ್ ಸವಾಲನ್ನ ಎದುರಿಸಲಿದೆ. ಗೆಲುವಿನ ಉತ್ಸಾಹದಲ್ಲಿರೋ ಆರ್ಸಿಬಿ ಮುಂದೆ ಇಂದು ಬಿಗ್ ಚಾಲೆಂಜ್ ಇದೆ. ಸ್ವಲ್ಪ ಯಾಮಾರಿದ್ರೆ, ಮತ್ತೆ ಸೋಲಿನ ಪ್ರಪಾತಕ್ಕೆ ಬೀಳ ಬೇಕಾಗುತ್ತೆ.
ಇದನ್ನೂ ಓದಿ: ಪಕ್ಕದ ಮನೆಯ ಕಾರಿನ ಗ್ಲಾಸ್ಗಳನ್ನ ಒಡೆದು ಹಾಕಿದ ಸ್ಕೂಲ್ ಟೀಚರ್.. ಕಾರಣವೇನು?
ಇದನ್ನೂ ಓದಿ: IPLನಲ್ಲಿ ಮೊಟ್ಟ ಮೊದಲ ಹಾಫ್ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್ ಪ್ಲೇಯರ್!
ಕಳೆದ 3 ಪಂದ್ಯಗಳಲ್ಲಿ ಆರ್ಸಿಬಿ ಬ್ಯಾಟರ್ಸ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ದಾರೆ. ಕನ್ಸಿಸ್ಟೆಂಟ್ ಆಗಿ 200+ ರನ್ ಗಡಿ ದಾಟಿದ್ದಾರೆ. ಆದ್ರೆ, ಇಂದು ಅದೇ ಅಬ್ಬರದ ಬ್ಯಾಟಿಂಗ್ ನಡೆಸೋದು ಸವಾಲಿನ ವಿಚಾರ. ಯಾಕಂದ್ರೆ, ಗುಜರಾತ್ ತಂಡದಲ್ಲಿ ವರ್ಲ್ಡ್ ಕ್ಲಾಸ್ ಸ್ಪಿನ್ನರ್ಗಳಿದ್ದಾರೆ. ಹೇಳಿ-ಕೇಳಿ ಆರ್ಸಿಬಿ ಬ್ಯಾಟರ್ಸ್ ಸ್ಪಿನ್ನರ್ಗಳ ಎದುರು ತಡಬಡಾಯಿಸ್ತಿದ್ದಾರೆ. ಈ ವೀಕ್ನೆಸ್ ಇಟ್ಟುಕೊಂಡು ರಶೀದ್ ಖಾನ್, ನೂರ್ ಅಹ್ಮದ್, ಸಾಯಿ ಕಿಶೋರ್ರಂತಾ ಸ್ಪಿನ್ ಮಾಂತ್ರಿಕರ ದಾಳಿ ಮೆಟ್ಟಿ ನಿಲ್ಲೋದು ಸುಲಭದ ವಿಚಾರವಲ್ಲ.
ಕ್ಯಾಪ್ಟನ್ ಡುಪ್ಲೆಸಿಗೆ ಬೇಕಿದೆ ವಿರಾಟ್ ಕೊಹ್ಲಿ ಸಹಾಯ.!
ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ, ಬೌಲರ್ಸ್ ರೊಟೇಶನ್, ಫೀಲ್ಡ್ ಪ್ಲೇಸ್ಮೆಂಟ್.. ಈ ಮೂರೂ ವಿಚಾರದಲ್ಲಿ ಕ್ಯಾಪ್ಟನ್ ಫಾಫ್ ಡುಪ್ಲೆಸಿ ಮೊದಲ ಪಂದ್ಯದಿಂದಲೂ ಎಡವಿದ್ದಾರೆ. ಕಳೆದ ಪಂದ್ಯದ ಗೆಲುವಿನ ಟ್ರ್ಯಾಕ್ ಮುಂದುವರೆಸಬೇಕಂದ್ರೆ ಡುಪ್ಲೆಸಿ ಇಂದು ಅಳೆದು ತೂಗಿ ಲೆಕ್ಕಾಚಾರ ಹಾಕಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಸಲಹೆ-ಸೂಚನೆ ಪಡೆದ್ರೆ ತಂಡದ ಹಿತದೃಷ್ಟಿಯಿಂದ ಒಳ್ಳೆಯದೇ.!
ರಾಯಲ್ ಚಾಲೆಂಜರ್ಸ್ಗೆ ಬೌಲಿಂಗ್ನದ್ದೇ ಟೆನ್ಶನ್..!
ಕಳೆದ 3 ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಸ್ ಅಬ್ಬರಿಸಿದ್ದಾರೆ ನಿಜ. ಇದೇ ವೇಳೆ ಬೌಲರ್ಸ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ. ಎದುರಾಳಿ ಬ್ಯಾಟ್ಸ್ಮನ್ಗಳ ಪಾಲಿಗೆ ಸುಲಭದ ತುತ್ತಾಗಿದ್ದಾರೆ. ಬೌಲರ್ಗಳ ಈ ಕಳಪೆ ಪರ್ಫಾಮೆನ್ಸ್ ತಂಡಕ್ಕೆ ದೊಡ್ಡ ಟೆನ್ಶನ್ ತಂದಿಟ್ಟಿದೆ. ಅಹ್ಮದಾಬಾದ್ ಕೂಡ ಹೈ ಸ್ಕೋರಿಂಗ್ ಪಿಚ್ ಆಗಿದ್ದು, ಇಲ್ಲಿ ಆರ್ಸಿಬಿ ಬೌಲರ್ಸ್ ಲೈನ್ & ಲೆಂಥ್ ಕಂಡುಕೊಳ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ.
ಬಲಿಷ್ಠ ಪ್ಲೇಯಿಂಗ್-XI ಆಯ್ಕೆಯೇ ಕಗ್ಗಂಟು.!
ಈವರೆಗೆ ಆರ್ಸಿಬಿ 9 ಪಂದ್ಯ ಆಡಿದೆ. ಆದ್ರೂ, ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡೋದೆ ಸವಾಲಾಗಿದೆ. ಈವರೆಗೆ ಬರೋಬ್ಬರಿ 16 ಬದಲಾವಣೆಗಳನ್ನ ಕ್ಯಾಪ್ಟನ್ ಫಾಫ್ ಡುಪ್ಲೆಸಿ ಮಾಡಿದ್ದಾರೆ. ಇಂದಿನ ಪಂದ್ಯದಲ್ಲೂ ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಯಾಗೋ ಸಾಧ್ಯತೆ ದಟ್ಟವಾಗಿದೆ. ಯಾರು ಔಟ್, ಯಾರು ಇನ್ ಎಂಬ ಲೆಕ್ಕಾಚಾರ ಜೋರಾಗಿದೆ.
ಇದನ್ನೂ ಓದಿ: Lok Sabha; ‘ಲೋಕ’ ಅಖಾಡದಲ್ಲಿ PM, CM ಅಬ್ಬರ.. ಮಗಳಿಗಾಗಿ ತಂದೆ, ಮಗನಿಗಾಗಿ ತಾಯಿ ಭರ್ಜರಿ ಕ್ಯಾಂಪೇನ್
ಕರಣ್ ಶರ್ಮಾಗೆ ಬೇಕಿದೆ ಪರ್ಫೆಕ್ಟ್ ಪಾರ್ಟನರ್.!
ಸ್ಪಿನ್ ವಿಭಾಗದಲ್ಲಿ ಗುಜರಾತ್ ಬಲಿಷ್ಟವಾಗಿದ್ರೆ, ಆರ್ಸಿಬಿಯ ಕತೆ ಅದಕ್ಕೆ ತದ್ವಿರುದ್ಧವಾಗಿದೆ. ಕರಣ್ ಶರ್ಮಾ ಉತ್ತಮ ಪರ್ಫಾಮೆನ್ಸ್ ನೀಡ್ತಿದ್ದಾರೆ. ಇವ್ರಿಗೆ ಸಾಥ್ ಕೊಡೋದ್ಯಾರು ಎಂಬ ಪ್ರಶ್ನೆಯಿದೆ. ಕಳೆದ ಪಂದ್ಯದಲ್ಲಿ ಸ್ವಪ್ನಿಲ್ ಸಿಂಗ್, ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂದಿನ ಪಂದ್ಯದಲ್ಲೂ ಸ್ವಪ್ನಿಲ್ ಚಾನ್ಸ್ ನೀಡೋದು ಉತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಹನಿ ನೀರಿಗೂ ಹಾಹಾಕಾರ.. ರೊಚ್ಚಿಗೆದ್ದ ಮಹಿಳೆಯರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ
ಗುಜರಾತ್ ಟೈಟನ್ಸ್ನ ಕಥೆ ಆರ್ಸಿಬಿಗಿಂತ ಭಿನ್ನವಾಗಿಲ್ಲ. ಆರ್ಸಿಬಿ 9ರಲ್ಲಿ 2 ಪಂದ್ಯ ಗೆದ್ದಿದ್ರೆ, ಗುಜರಾತ್ 9ರಲ್ಲಿ 4 ಪಂದ್ಯ ಗೆದ್ದಿದೆ. ಆದ್ರೆ, ಬ್ಯಾಟಿಂಗ್, ಬೌಲಿಂಗ್ನಲ್ಲಿ ಇನ್ಕನ್ಸಿಸ್ಟೆನ್ಸಿ ಸಮಸ್ಯೆಯನ್ನ ಗಿಲ್ ಪಡೆ ಎದುರಿಸ್ತಾ ಇದೆ. ಫ್ಲೇ ಆಫ್ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ ಗುಜರಾತ್ಗೆ ಗೆಲುವು ಅನಿವಾರ್ಯವಾಗಿದೆ. ಡು ಆರ್ ಡೈ ಫೈಟ್ನಲ್ಲಿ ಗುಜರಾತ್ ಗೆಲ್ಲುತ್ತಾ.? ಆರ್ಸಿಬಿ ಗೆಲುವಿನ ಓಟ ಮುಂದುವರೆಸುತ್ತಾ.? ಕಾದು ನೋಡೋಣ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ