ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿರೋ ಧೋನಿ ವಿಡಿಯೋಸ್
MS ಧೋನಿ ಶ್ರೇಷ್ಠ ಕ್ಯಾಪ್ಟನ್ ಮಾತ್ರವಲ್ಲ.. ಟ್ರೆಂಡ್ ಸೆಟ್ಟರ್ ಕೂಡ ಹೌದು
ಲಾಂಗ್ ಹೇರ್ಸ್ಟೈಲ್ನೊಂದಿಗೆ ಕ್ರಿಕೆಟ್ಗೆ ಫುಲ್ಸ್ಟಾಫ್ ಹಾಕ್ತಾರಾ ಮಾಹಿ?
ಮಿಸ್ಟರ್ ಕೂಲ್ ಧೋನಿ ಹೆಸರು ಕೇಳಿದ್ರೆ, ಸಾಕು ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚನವಾಗುತ್ತೆ. ಈ ಮಾಂತ್ರಿಕನ ಪವರ್ ಅಂತಾದ್ದು. ಇದೀಗ ಮಾಂತ್ರಿಕ ಮಹೇಂದ್ರ ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ್ದಾರೆ. ಧೋನಿಯ ಆ ಒಂದು ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ನೀವೇನಾದ್ರು ಆ ಹೊಸ ಅವತಾರ ನೋಡಿದ್ರೆ ಕಳೆದು ಹೋಗೋದು ಗ್ಯಾರಂಟಿ.
ಐಪಿಎಲ್ ಕ್ರಿಕೆಟ್ ಜಾತ್ರೆಯಲ್ಲಿ ಮಹೇಂದ್ರ ಸಿಂಗ್ ಧೋನಿಯ ಆರಾಧನೆ ಜೋರಾಗಿದೆ. ಮೆಜಿಶಿಯನ್ ಮಹೇಂದ್ರ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದ್ದಾರೆ. 42ರ ವಯಸ್ಸಿನಲ್ಲಿ ಮಾಹಿಯ ಮ್ಯಾಜಿಕ್ ಕಂಡು ದಿಗ್ಗಜರೇ ಸಲಾಂ ಅಂತಿದ್ದಾರೆ. ಅಭಿಮಾನಿಗಳಂತೂ ಬಿಡಿ, ಧೋನಿಯ ಧಮ್ದಾರ್ ಆಟಕ್ಕೆ ಕ್ಲೀನ್ಬೋಲ್ಡ್ ಆಗಿದ್ದಾರೆ.
ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್ ಅಬ್ಬರ, ಎಲ್ಲಿ?
ಇದನ್ನೂ ಓದಿ: 6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್ ಆ 6 ನಿಮಿಷದ ವಿಲ್ ಜಾಕ್ಸ್ ಬ್ಯಾಟಿಂಗ್ ರಣಾರ್ಭಟ ಹೇಗಿತ್ತು?
ಹೋಮ್ಗ್ರೌಂಡ್ ಚೆನ್ನೈನ ಚೆಪಾಕ್ ಬಿಟ್ ಬಿಡಿ. ದೇಶದ ಯಾವುದೇ ಮೂಲೆಗೆ ತೆರಳಲಿ.. ಮೈದಾನವೆಲ್ಲ ಯೆಲ್ಲೋಮಯವಾಗ್ತಿದೆ. ನಂಬರ್ 7 ಜೆರ್ಸಿಗಳು ರಾರಾಜಿಸ್ತಿವೆ. ಧೋನಿಯನ್ನ ಕಣ್ತುಂಬಿಕೊಳ್ಳಬೇಕು ಎಂಬ ಒಂದೇ ಒಂದು ಹಂಬಲದಿಂದ ಸ್ಟೇಡಿಯಂ ಫ್ಯಾನ್ಸ್ ದೌಡಾಯಿಸ್ತಿದ್ದಾರೆ. ಅದೃಷ್ಟವಶಾತ್ ಪ್ಯಾಡ್ ಕಟ್ಟಿ ಧೋನಿ ಬ್ಯಾಟಿಂಗ್ಗಿಳಿದ್ರೆ ಸಾಕು ಕ್ರೇಜ್ ನೆಕ್ಸ್ಟ್ ಲೆವೆಲ್ಗೆ ಹೋಗ್ತಿದೆ.
ಇಂಟರ್ನೆಟ್ನಲ್ಲಿ ಧೂಳೆಬ್ಬಿಸಿದ ಮಹೇಂದ್ರ.!
ಅಂತಿಮ ಹಂತದಲ್ಲಿ ಬ್ಯಾಟ್ ಹಿಡಿದು ಕಣಕ್ಕಿಳೀತಾ ಇರೋ ಧೋನಿ ಫ್ಯಾನ್ಸ್ಗೆ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ಕೊಡ್ತಿದ್ದಾರೆ. ಅಬ್ಬರದ ಬ್ಯಾಟಿಂಗ್ ನಡೆಸಿ ಅಭಿಮಾನಿಗಳನ್ನ ಖುಷಿ ಪಡಿಸ್ತಿದ್ದಾರೆ. ಧೋನಿಯ ವಿಡಿಯೋಗಳಂತೂ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿವೆ. ಆದ್ರೀಗ ಧೋನಿಯ ಸ್ಟೈಲಿಷ್ ವಿಡಿಯೋ ಸೆನ್ಸೇಷನ್ ಸೃಷ್ಟಿಸಿದೆ.
ಪೋನಿಟೇಲ್ ಹೇರ್ಸ್ಟೈಲ್ನಲ್ಲಿ ಮಾಹಿ ಮಿಂಚಿಂಗ್..
ಸದ್ಯ ಇಂಟರ್ನೆಟ್ನಲ್ಲಿ ಧೋನಿಯ ಸುನಾಮಿ ಎದ್ದಿರೋದು ಹೇರ್ಸ್ಟೈಲ್ನ ಕಾರಣಕ್ಕೆ. ಈ ಬಾರಿಯ ಐಪಿಎಲ್ ಅಖಾಡಕ್ಕೆ ಧೋನಿ ಧುಮುಕಿದ್ದೇ ವಿಂಟೇಜ್ ಲುಕ್ನಲ್ಲಿ. ಲಾಂಗ್ ಹೇರ್ಸ್ಟೈಲ್ನ ಧೋನಿಯನ್ನ ಕಂಡು ಫ್ಯಾನ್ಸ್ ಪುಳಕಿತರಾಗಿದ್ರು. ಇದೀಗ ಧೋನಿ ಪೋನಿಟೇಲ್ ಲುಕ್ನಲ್ಲಿ ಕಂಡಿದ್ದು ಮಾಹಿಯ ನಯಾ ಲುಕ್ಗೆ ಫ್ಯಾನ್ಸ್ ಮನಸೋತಿದ್ದಾರೆ.
ಇಂಟರ್ನೆಟ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ನ್ಯೂ ಲುಕ್.!
ಹೈದ್ರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ನಯಾ ಲುಕ್ನಲ್ಲಿ ತಲಾ ದರ್ಶನವಾಗಿದೆ. ಧೋನಿಯ ನ್ಯೂ ಲುಕ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಇಂಟರ್ನೆಟ್ನಲ್ಲಿ ಸೆನ್ಸೇಷನ್ ಸೃಷ್ಟಿಯಾಗಿದೆ. ದೃಷ್ಟಿಯಾಗುತ್ತೆ ನೋಡ್ಬೇಡಿ ಸಖತ್ ಆಗೈತೆ ಹೇರ್ಸ್ಟೈಲ್ ಅಂತಿದ್ದಾರೆ ಫ್ಯಾನ್ಸ್.
ಇದನ್ನೂ ಓದಿ: ಕಾಲ ಕೆಟ್ಟೊಯ್ತು.. ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ.. ಮಾವನ ಒಪ್ಪಿಗೆ?
ಇದನ್ನೂ ಓದಿ: 3ಕ್ಕೂ ಆ ಒಂದೇ ಒಂದು ಸಿಕ್ಸರ್ನಿಂದ ಫಿನಿಶಿಂಗ್ ಕೊಟ್ಟ RCBಯ ವಿಲ್ ಜಾಕ್ಸ್.. ವಿರಾಟ್ ಹ್ಯಾಪಿ
ಧೋನಿ ವಿಶ್ವ ಕ್ರಿಕೆಟ್ನ ಶ್ರೇಷ್ಠ ಕ್ಯಾಪ್ಟನ್ ಮಾತ್ರವಲ್ಲ.. ಟ್ರೆಂಡ್ ಸೆಟ್ಟರ್ ಕೂಡ ಹೌದು. ಜಂಟಲ್ ಮೆನ್ ಗೇಮ್ನಲ್ಲಿ ಹೊಸ ಕೇಶ ವಿನ್ಯಾಸಕ್ಕೆ ಓಂಕಾರ ಹಾಕಿದ್ದೇ ಮಾಹಿ. ವಿಭಿನ್ನ ಹೇರ್ಸ್ಟೈಲ್ ವಿಚಾರಕ್ಕೆ ಬಂದ್ರೆ ಈ ಸೂಪರ್ಸ್ಟಾರ್ನ ಮೀರಿಸೋರೆ ಇಲ್ಲ. ಧೋನಿ ಹೇರ್ಸ್ಟೈಲ್ ಹಂಗಾಮ ಲಾಂಗ್ ಹೇರ್ನಿಂದ ಶುರುವಾಗಿ ಇವತ್ತಿನ ಪೋನಿಟೇಲ್ ಹೇರ್ಸ್ಟೈಲ್ ವರೆಗೆ ಬಂದು ನಿಂತಿದೆ. ಧೋನಿಯ ಸಮ್ಮರ್ ಕಟ್,ಬಾಲ್ಡ್ ಕಟ್, ವಿಕಿಂಗ್ ಕಟ್, ಸ್ಪೈಕ್ಡ್ ಕಟ್, ಮೊಹಾವಾಕ್ ಹೇರ್ಸ್ಟೈಲ್ ಹಾಗೂ ಫಾಕ್ಸ್ ಹಾಕ್ ಹೇರ್ಸ್ಟೈಲ್ಗೆ ಯುವಜನತೆ ಫಿದಾ ಆಗಿದ್ರು.
ಎಲ್ಲಾ ಅಭಿಮಾನಿಗಳಿಗಾಗಿ.. ಖುಷಿಯ ಬೆನ್ನಲ್ಲೇ ಕಾದಿದ್ಯಾ ಶಾಕ್.?
42 ವರ್ಷದ ಧೋನಿಗೆ ಈ ಬಾರಿ ಐಪಿಎಲ್ ಟೂರ್ನಿಯೇ ಬಹುತೇಕ ಕೊನೆಯದ್ದಾಗಿದೆ. ಅಭಿಮಾನಿಗಳ ಪ್ರೀತಿಗೆ ಮನಸೋತಿರುವ ಧೋನಿ ಇಂಜುರಿ ನೋವನ್ನೂ ಲೆಕ್ಕಿಸಿದೇ ಆಟವಾಡ್ತಿದ್ದಾರೆ. ಎಲ್ಲಿಂದ ಆರಂಭವೋ, ಅಲ್ಲೇ ಅಂತ್ಯ ಅನ್ನೋ ಸಿದ್ಧಾಂತವನ್ನ ಧೋನಿ ಸದ್ದಿಲ್ಲದೇ ಪಾಲಿಸ್ತಿದ್ದಾರೆ. ಲಾಂಗ್ ಹೇರ್ಸ್ಟೈಲ್ನಿಂದ ಕರಿಯರ್ ಆರಂಭಿಸಿದ ಧೋನಿ, ಇದೀಗ ಅದೇ ಲಾಂಗ್ ಹೇರ್ ಸ್ಟೈಲ್ನೊಂದಿಗೆ ಕ್ರಿಕೆಟ್ಗೆ ಫುಲ್ ಸ್ಟಾಫ್ ಇಡೋ ಲೆಕ್ಕಾಚಾರದಲ್ಲಿದ್ದಾರೆ. ಟೂರ್ನಿ ಅಂತ್ಯದೊಳಗೆ ಯಾವತ್ತು ಬೇಕಾದ್ರೂ, ನಿವೃತ್ತಿಯ ಸರ್ಪ್ರೈಸ್ ಶಾಕ್ ಕೊಡೋ ಸಾಧ್ಯತೆ ದಟ್ಟವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ