ಗುಜರಾತ್ ವಿರುದ್ಧ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ಸಿಬಿ
ಆರ್ಸಿಬಿ ಪ್ಲೇ ಆಫ್ಗೆ ಹೋಗುವುದರ ಬಗ್ಗೆ ಕ್ಯಾಪ್ಟನ್ ಫಾಫ್ ಮಾತು
ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ನಾವು ಸುಧಾರಿಸಿದ್ದೇವೆ ಎಂದ ಫಾಫ್
ಇತ್ತೀಚೆಗೆ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ.
ಇನ್ನು, ಈ ಬಗ್ಗೆ ಮಾತಾಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್, ಗುಜರಾತ್ ವಿರುದ್ಧ ಗೆದ್ದಿದ್ದು ಖುಷಿ ಕೊಟ್ಟಿದೆ. ನಾವು ಗೆಲ್ಲುತ್ತೇವೆ, ಈ ರನ್ ಚೇಸ್ ಮಾಡುತ್ತೇವೆ ಎಂದು ಭಾವಿಸಿದ್ದೆ. ಆದ್ರೆ, ಕೇವಲ 16 ಓವರ್ಗಳಲ್ಲಿ ಮ್ಯಾಚ್ ಮುಗಿದು ಹೋಗುತ್ತೆ ಎಂದು ಭಾವಿಸಿರಲಿಲ್ಲ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗದಲ್ಲೂ ಆರ್ಸಿಬಿ ಸುಧಾರಿಸಿದೆ ಎಂದರು.
ಆರಂಭದಲ್ಲಿ ನಾವು ಎಡವಿದ್ದೆವು. ಈಗ ಸಂಪೂರ್ಣ ಸುಧಾರಿಸಿದ್ದೇವೆ. ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲೇ ಆರ್ಸಿಬಿ ಬೌಲಿಂಗ್ ಸುಧಾರಣೆ ಕಂಡಿತ್ತು. ದುರದೃಷ್ಟವಶಾತ್ ನಾವು ಅಂದು 1 ರನ್ನಿಂದ ಸೋತೆವು. ಮುಂದಿನ ಎಲ್ಲಾ ಪಂದ್ಯ ಗೆಲ್ಲುತ್ತೇವೆ, ಪ್ಲೇ ಆಫ್ ಬಗ್ಗೆ ನೋಡೋಣ ಎಂದರು ಫಾಫ್.
ಇದನ್ನೂ ಓದಿ: ಮುಂದಿನ 4 ಪಂದ್ಯ ಗೆದ್ರೆ ಆರ್ಸಿಬಿ ಪ್ಲೇ ಆಫ್ಗೆ ಹೋಗೋದು ಪಕ್ಕಾ! ಹೇಗೆ ಗೊತ್ತಾ? ಸ್ಟೋರಿ ಓದಿ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ