ಕೊಹ್ಲಿ ಟೀಕಿಸೋಕು ಮುನ್ನ ಎಚ್ಚರ, ಎಚ್ಚರ..!
ಕೊಹ್ಲಿ ಆನ್ಸರ್ಗೆ ಕಾಮೆಂಟೇಟರ್ಸ್ ಗಪ್ಚುಪ್
ವಿಶ್ವಕಪ್ಗೆ ಆಯ್ಕೆಗೆ ಆಗೋಕೆ ಇನ್ನೇನು ಬೇಕು..?
ತಿರುಗೇಟು ಕೊಟ್ರೆ ಮುಟ್ಟಿನೋಡಿಕೊಳ್ಳುವಂಗೆ ಕೊಡಬೇಕು. ಅದ್ಹೇಗೆ ಅನ್ನೋದನ್ನ ಕಿಂಗ್ ಕೊಹ್ಲಿ ನೋಡಿ ಕಲಿಬೇಕು. ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಬಗ್ಗೆ ಟೀಕಿಸಿದೋರು ಒಬ್ಬರಾ? ಇಬ್ಬರಾ? ಒಂದು ಪಂದ್ಯದಲ್ಲಿ ಸ್ಟ್ರೈಕ್ರೇಟ್ ಕಮ್ಮಿ ಆಗಿದ್ದಕ್ಕೆ ಮನ ಬಂದಂತೆ ಟೀಕಿಸಿದ್ರು. ಅಂತವರಿಗೆ ರನ್ ಮಷೀನ್ ಖಡಕ್ ಆನ್ಸರ್ ಕೊಟ್ಟಿದ್ದಾರೆ.
ಹಲವರು ನನ್ನ ಸ್ಟ್ರೈಕ್ರೇಟ್ ಬಗ್ಗೆ ಹಾಗೂ ಸ್ಪಿನ್ಗೆ ಚೆನ್ನಾಗಿ ಆಡಲ್ಲ ಅಂತ ಮಾತನಾಡುತ್ತಾರೆ. ಆದ್ರೆ ಮೈದಾನದಲ್ಲಿ ಆಡುವ ನನಗೆ ಪಂದ್ಯದ ಪರಿಸ್ಥಿತಿ ಗೊತ್ತಿರುತ್ತೆ. ಕಾಮೆಂಟೇಟರಿ ಬಾಕ್ಸ್ ಅಲ್ಲಿ ಕುಳಿತಿರುವವರಿಗೆ ಅಲ್ಲ. ಟೀಮ್ ಗೆಲ್ಲಿಸೋದಷ್ಟೇ ನನ್ನ ಜವಾಬ್ದಾರಿ -ವಿರಾಟ್ ಕೊಹ್ಲಿ, RCB ಆಟಗಾರ
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ನಂತರ ಕಿಂಗ್ ಕೊಹ್ಲಿ ಆಡಿದ ಖಡಕ್ ಮಾತುಗಳಿವು. ಸನ್ರೈಸರ್ಸ್ ಹೈದ್ರಾಬಾದ್ ಎದುರು ಸ್ಲೋ ಇನ್ನಿಂಗ್ಸ್ ಆಡಿದ್ದಕ್ಕೆ ಟೀಕಾಕಾರರು ಮುಗಿಬಿದ್ದಿದ್ರು. ಸ್ಪಿನ್ ವಿರುದ್ಧ ಪರದಾಡಿದ್ದಕ್ಕೆ ಹಿಗ್ಗಾಮುಗ್ಗಾ ಟೀಕಿಸಿದ್ರು. ಹೀಗೆ ಟೀಕೆಸಿದವರಿಗೆಲ್ಲಾ ಇದೀಗ ವಿರಾಟ್ ಮುಟ್ಟಿ ನೋಡಿಕೊಳ್ಳುವಂತ ಅನ್ಸರ್ ಕೊಟ್ಟಿದ್ದಾರೆ. ವಿರಾಟ್ ಕೊಟ್ಟ ಈ ಖಡಕ್ ಆನ್ಸರ್ಗೆ ಟೀಕಾಕಾರರು ಗಪ್ಚುಪ್ ಆಗಿದ್ದಾರೆ.
ಇದನ್ನೂ ಓದಿ:ಕೋರ್ಟ್ ಮುಂದೆ ಸತ್ಯ ಒಪ್ಪಿಕೊಂಡ ಕೊರೊನಾ ಲಸಿಕೆ ಕಂಪನಿ.. ಕೋವಿಶೀಲ್ಡ್ ತೆಗೆದುಕೊಂಡವ್ರಿಗೆ ಗಢಗಢ..!
ಇಂಪ್ರೆಸ್ಸಿವ್ ಸ್ಟ್ರೈಕ್ರೇಟ್..!
ನಿಜ ಹೇಳಬೇಕಂದ್ರೆ ಕಿಂಗ್ ಕೊಹ್ಲಿ ಹೈದ್ರಾಬಾದ್ ಎದುರಿನ ಪಂದ್ಯವೊಂದನ್ನ ಹೊರತಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲಿ ಇಂಪ್ರೆಸ್ಸಿವ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೂ ಮಾಜಿ ಕ್ರಿಕೆಟಿಗರು ಹಾಗೂ ಕೆಲ ಎಕ್ಸ್ಪರ್ಟ್ಸ್ ಕೊಹ್ಲಿ ವಿರುದ್ಧ ಮುಗಿಬಿದ್ದಿದ್ರು. ಗುಜರಾತ್ ಟೈಟನ್ಸ್ ಸಿಡಿದೆದ್ದ ಕೊಹ್ಲಿ 159.09 ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ರು. INTERESTING ಸಂಗತಿ ಏನಂದ್ರೆ ಸೆಂಚುರಿ ಸಾಮ್ರಾಟ ಸೀಸನ್ನಿಂದ ಸೀಸನ್ಗೆ ಸ್ಟ್ರೈಕ್ರೇಟ್ ಹೆಚ್ಚಿಸಿಕೊಳ್ತಲೇ ಇದ್ದಾರೆ.
ಕೊಹ್ಲಿ ಸ್ಟ್ರೈಕ್ರೇಟ್
2022ನೇ ಐಪಿಎಲ್ನಲ್ಲಿ 115.09 ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದ ಕಿಂಗ್ ಕೊಹ್ಲಿ 2023 ರಲ್ಲಿ 139.82ಕ್ಕೆ ಸ್ಟ್ರೈಕ್ರೇಟ್ ಹೆಚ್ಚಿಸಿಕೊಂಡ್ರು. ಪ್ರಸಕ್ತ ಐಪಿಎಲ್ನಲ್ಲಿ ಇನ್ನಷ್ಟು ವೈಲೆಂಟ್ ಆಗಿರೋ ವಿರಾಟ್ 147.49 ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ.
ಇದನ್ನೂ ಓದಿ:ಪಾಂಡ್ಯಗೆ ಮತ್ತೊಂದು ಆಘಾತ.. ಸ್ಟಾರ್ ಆಟಗಾರನಿಂದ ಟೀಂ ಇಂಡಿಯಾದ ಉಪನಾಯಕನ ಪಟ್ಟ ಟೇಕ್ ಓವರ್..!
ಯಂಗ್ಸ್ಟರ್ಸ್ ನಾಚುವಂತ ‘ಧಮ್’ದಾರ್ ಪರ್ಫಾಮೆನ್ಸ್
35ರ ಕಿಂಗ್ ಕೊಹ್ಲಿ ಪ್ರಸಕ್ತ ಐಪಿಎಲ್ನಲ್ಲಿ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಧಮ್ದಾರ್ ಪ್ರದರ್ಶನ ನೀಡಿ ಯಂಗ್ಸ್ಟರ್ಸ್ಗೆ ಸಡ್ಡು ಹೊಡೆದಿದ್ದಾರೆ. ಟೂರ್ನಿ ಆರಂಭದಿಂದ ಇಲ್ಲಿ ತನಕ ಆರೆಂಜ್ ಕ್ಯಾಪ್ ಒಡೆಯನಾಗಿದ್ದಾರೆ. ಸೀಸನ್ 17ನೇ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ 10 ಪಂದ್ಯಗಳನ್ನಾಡಿದ್ದು 500 ರನ್ ಬಾರಿಸಿದ್ದಾರೆ. 4 ಅರ್ಧಶತಕ ಹಾಗೂ 1 ಅಮೋಘ ಶತಕ ಸಿಡಿಸಿದ್ದಾರೆ. ಸ್ಪಿನ್ ವಿರುದ್ಧ ವಿರಾಟ್ ಕೊಹ್ಲಿ ತೀರಾ ಕಳಪೆ ಪರ್ಫಾಮೆನ್ಸ್ ಏನು ನೀಡಿಲ್ಲ. ಈ ಐಪಿಎಲ್ನಲ್ಲಿ 135.66ರ ಡಿಸೆಂಟ್ ಸ್ಟ್ರೈಕ್ರೇಟ್ ಹೊಂದಿದ್ದಾರೆ. 157 ಎಸೆತ ಎದುರಿಸಿ 213 ರನ್ಗಳಿಸಿದ್ದು, 11 ಬೌಂಡರಿ, 10 ಸಿಕ್ಸರ್ ಸಿಡಿಸಿದ್ದಾರೆ.
ವಿಶ್ವಕಪ್ಗೆ ಆಯ್ಕೆ ಆಗೋಕೆ ಇನ್ನೇನು ಬೇಕು?
ಒಂದೆಡೆ ಇಂಪ್ರೆಸ್ಸಿವ್ ಸ್ಟ್ರೈಕ್ರೇಟ್. ಇನ್ನೊಂದೆಡೆ ಟೂರ್ನಿಯಲ್ಲಿ ಟಾಪ್ ಸ್ಕೋರರ್. ಟಿ20 ವಿಶ್ವಕಪ್ ಆಯ್ಕೆಗೆ ಇನ್ನೇನ್ ಬೇಕು ನೀವೇ ಹೇಳಿ.? ಅತಿ ಶೀಘ್ರದಲ್ಲೆ ಅಜಿತ್ ಅಗರ್ಕರ್ ಆ್ಯಂಡ್ ಟೀಮ್, ಟಿ20 ವಿಶ್ವಕಪ್ಗೆ ಭಾರತ ತಂಡವನ್ನ ಪ್ರಕಟಿಸಲಿದೆ. ಕಿಂಗ್ ಕೊಹ್ಲಿಗೆ ಸ್ಥಾನ ನೀಡುವ ಕುರಿತು ಗಂಭೀರ್ ಚರ್ಚೆ ನಡೆದಿದೆ. ಕೊಹ್ಲಿಯ ಅಪಾರ ಅನುಭವ ವಿಶ್ವಕಪ್ನಲ್ಲಿ ತಂಡಕ್ಕೆ ವರದಾನವಾಗಲಿದೆ. ಆಟ ಹಾಗೂ ಅನುಭವದ ಲೆಕ್ಕಾಚಾರದಲ್ಲಿ ಅನುಭವಿ ಕೊಹ್ಲಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಬಹುತೇಕ ಕನ್ಫರ್ಮ್ ಆಗಿದೆ. ಅಧಿಕೃತ ಅನೌನ್ಸ್ಮೆಂಟ್ ಮಾತ್ರ ಬಾಕಿಯಿದೆ.
ಇದನ್ನೂ ಓದಿ:ಭಾರೀ ಮಳೆಗೆ 10 ಮನೆಗಳು ಕುಸಿತ.. ನದಿಗಳಂತಾದ ರಸ್ತೆಗಳು, ಪ್ರವಾಹದ ಮುನ್ಸೂಚನೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್