ಲಕ್ನೋ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ರೋಚಕ ಪಂದ್ಯ
ರೋಚಕ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್!
ಕನ್ನಡಿಗ ಕೆ.ಎಲ್ ರಾಹುಲ್ ಲಕ್ನೋ ತಂಡದ ಐಪಿಎಲ್ ಪ್ಲೇ ಆಫ್ ಕನಸು ಜೀವಂತ
ಇಂದು ಲಕ್ನೋ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಗೆದ್ದು ಬೀಗಿದೆ.
ಮುಂಬೈ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಓಪನರ್ ಆಗಿ ಬಂದ ಕೆ.ಎಲ್ ರಾಹುಲ್ 22 ಬಾಲ್ನಲ್ಲಿ 1 ಸಿಕ್ಸರ್, 3 ಫೋರ್ ಸಮೇತ 28 ರನ್ ಸಿಡಿಸಿದ್ರು. ಇವರಿಗೆ ಸಾಥ್ ಕೊಟ್ಟ ಮಾರ್ಕಸ್ ಸ್ಟೊಯ್ನೀಸ್ 45 ಬಾಲ್ನಲ್ಲಿ 2 ಸಿಕ್ಸರ್, 7 ಫೋತರ್ ಸಮೇತ 62 ರನ್ ಚಚ್ಚಿದ್ರು.
ನಿಕೋಲಸ್ ಪೂರನ್ 14, ಆಸ್ಟೋನ್ 5, ಬದೋನಿ 6 ರನ್ ಗಳಿಸಿ ಲಕ್ನೋ ತಂಡವನ್ನು ಗೆಲ್ಲಿಸಿದ್ರು. ಲಕ್ನೋ ಇನ್ನೂ 4 ಬಾಲ್ಗಳ ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಸಾಧಿಸಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಇಶಾನ್ 32, ನೇಹಾಲ್ 46, ಟೀಮ್ ಡೇವಿಡ್ 35 ರನ್ ಗಳಿಸಿದ್ರು. ಇವರ ಸಹಾಯದಿಂದ ಮುಂಬೈ 7 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 144 ರನ್ ಕಲೆ ಹಾಕಿತ್ತು.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯ ಆಯ್ಕೆ; ಟೀಮ್ ಇಂಡಿಯಾದ ಸೆಲೆಕ್ಟರ್ಸ್ ವಿರುದ್ಧ ಭಾರೀ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ