ಟಾಕ್ಸಿಕ್ ಸಿನಿಮಾದಲ್ಲಿ ಯಶ್ಗೆ ಹೀರೋಯಿನ್ ಆಗೋದು ಯಾರು?
ಡೇಟ್ಸ್ ಕಾರಣದಿಂದ ಸಿನಿಮಾ ತಂಡದಿಂದ ದೂರ ಉಳಿದ ಕರೀನಾ
ಯಶ್ ಅವರ ಟಾಕ್ಸಿಕ್ ಚಿತ್ರದಲ್ಲಿ ನಯನಾ ತಾರಾ ಅಭಿನಯಿಸ್ತಾರಾ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಏನು ಎಂಬುವುದು ಅಭಿಮಾನಿಗಳಲ್ಲಿ ಕುತೂಹಲವಿದೆ. KGF ಸಿನಿಮಾದ ಬಳಿಕ 2 ವರ್ಷದ ನಂತರ ಯಶ್ ಮತ್ತೆ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಟಾಕ್ಸಿಕ್ ಸಿನಿಮಾ ಅಪ್ಡೇಟ್ ಏನಾದರೂ ಸಿಗಬಹುದಾ ಎಂದು ಫ್ಯಾನ್ಸ್ ಕಾತುರದಿಂದ ಇದ್ದಾರೆ. ಲೆಟೆಸ್ಟ್ ಅಪ್ಡೇಟ್ವೊಂದು ಸದ್ಯ ಸಿಕ್ಕಿದ್ದು ಸಿಲಿಕಾನ್ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್ ನಡೆಯುತ್ತಿದ್ದು ಬಹುಭಾಷಾ ತಾರೆ, ಲೇಡಿ ಸೂಪರ್ ಸ್ಟಾರ್ ನಯನಾ ತಾರಾ ಯಶ್ ಜೊತೆ ಅಭಿನಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಯಶ್ ಅವರ ಟಾಕ್ಸಿಕ್ ಮೂವಿಗೆ ಲೇಡಿ ಸೂಪರ್ ಸ್ಟಾರ್ ನಯನಾ ತಾರಾ ಎಂಟ್ರಿ ಆಗುವ ಸಾಧ್ಯತೆ ಇದೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಅಭಿನಯ ಮಾಡಿರೋ ನಯನಾ ತಾರಾ ಯಶ್ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಯಶ್ ಅವರ ಅಕ್ಕನ ಪಾತ್ರದಲ್ಲಿ ನಯನಾ ತಾರಾ ಅಭಿನಯ ಮಾಡಿದರೆ ಸೂಪರ್ ಆಗಿರುತ್ತದೆ ಎಂದು ನಿರ್ದೇಶಕಿ ಗೀತು ಮೋಹನ್ ಅವರು ನಯನಾ ತಾರಾ ಹಿಂದೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಯಶ್ ಟಾಕ್ಸಿಕ್ನಿಂದ ಬಾಲಿವುಡ್ ಬ್ಯೂಟಿ ಔಟ್.. ಕರೀನಾ ಹೊರ ಬರಲು ಕಾರಣ?
ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಪ್ರವಾಸಕ್ಕೆ ಬಂದಿದ್ದ ಬಾಲಕಿ ಭದ್ರಾ ನದಿ ನೀರಿನಲ್ಲಿ ಮುಳುಗಿ ಸಾವು
ಟಾಕ್ಸಿಕ್ನಲ್ಲಿ ಯಶ್ ಅಕ್ಕನ ಪಾತ್ರಕ್ಕೆ ನಯನಾ ತಾರಾ ಅವರೇ ಸೂಕ್ತ ಅಂತ ಅವರನ್ನು ಅಪ್ರೋಚ್ ಮಾಡಲಾಗುತ್ತಿದೆ. ಇದಕ್ಕಾಗಿ ಬಹುಭಾಷಾ ತಾರೆ ಜೊತೆ ಮಾತುಕತೆ ನಡೆಯುತ್ತಿದೆ. ಮದುವೆಯಾಗಿ ಮಕ್ಕಳಿದ್ದರೂ ನಯನಾ ತಾರಾ ಈಗಲೂ ಸಿನಿಮಾಗಳಲ್ಲಿ ಲೀಡ್ ರೋಲ್ನಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅಪ್ರೋಚ್ ಮಾಡಿದ್ರೆ ಅವರು ಒಪ್ಪುತ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.
ಇದನ್ನೂ ಓದಿ: HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?
ಯಶ್ ಅವರ ಅಕ್ಕನ ಪಾತ್ರದಲ್ಲಿ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕರೀನಾಗೆ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ಇರುವುದರಿಂದ ಡೇಟ್ಸ್ ಸರಿಯಾಗಿ ಹೊಂದಾಣಿಕೆ ಆಗಿಲ್ವಂತೆ. ಹೀಗಾಗಿ ಟಾಕ್ಸಿಕ್ ಸಿನಿಮಾದಿಂದ ಬಾಲಿವುಡ್ ಬೆಡಗಿ ದೂರ ಉಳಿದುಕೊಂಡಿದ್ದರು. ಹಿನ್ನೆಲೆಯಲ್ಲಿ ನಿರ್ದೇಶಕಿ ಗೀತು ಮೋಹನ್ ಅವರು ನಯನಾ ತಾರಾರನ್ನ ಸಿನಿಮಾಕ್ಕೆ ಕರೆದುಕೊಂಡು ಬರುವ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ