ಇಂದು ಆರ್ಸಿಬಿ, ಗುಜರಾತ್ ಟೈಟನ್ಸ್ ಮಧ್ಯೆ ರೋಚಕ ಪಂದ್ಯ
ಆರ್ಸಿಬಿಗೆ 148 ರನ್ಗಳ ಸಾಧಾರಣ ಗುರಿ ನೀಡಿದ ಗುಜರಾತ್
ಗುಜರಾತ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು!
ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ.
ಗುಜರಾತ್ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್ಸಿಬಿ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 23 ಬಾಲ್ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್, 10 ಫೋರ್ ಸಮೇತ 64 ರನ್ ಸಿಡಿಸಿದ್ರು.
ಫಾಫ್ ಬ್ಯಾಟಿಂಗ್ ಮಾಡುವಾಗ ಸ್ಟ್ರೈಕ್ ರೇಟ್ ಬರೋಬ್ಬರಿ 280 ಇತ್ತು. ಇವರಿಗೆ ಸಾಥ್ ನೀಡಿದ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಕೇವಲ 27 ಬಾಲ್ನಲ್ಲಿ 4 ಸಿಕ್ಸರ್, 2 ಫೋರ್ ಸಮೇತ 42 ರನ್ ಚಚ್ಚಿದ್ರು. ದಿನೇಶ್ ಕಾರ್ತಿಕ್ 12 ಬಾಲ್ನಲ್ಲಿ 3 ಫೋರ್ ಸಮೇತ 21 ರನ್ ಮತ್ತು ಸ್ವಪ್ನಿಲ್ ಸಿಂಗ್ 15 ರನ್ ಗಳಿಸಿದ್ರು. ಆರ್ಸಿಬಿ ಕೇವಲ 13.4 ಓವರ್ನಲ್ಲೇ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಗೆದ್ದಿದೆ.
ಇನ್ನು, ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ಆರ್ಸಿಬಿ ಬೌಲರ್ಗಳ ದಾಳಿಗೆ ತತ್ತರಿಸಿದೆ. ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಕಳೆದುಕೊಂಡು ಗುಜರಾತ್ ಟೈಟನ್ಸ್ ಸಂಕಷ್ಟಕ್ಕೆ ಸಿಲುಕಿತ್ತು. ಸಾಹಾ 1, ಗಿಲ್ 2, ಸಾಯ್ ಸುದರ್ಶನ್ 6 ರನ್ಗಳಿಗೆ ಔಟಾದ್ರು.
ಬಳಿಕ ಬಂದ ಶಾರುಖ್ ಖಾನ್ ಕ್ರೀಸ್ನಲ್ಲೇ ನಿಂತು 1 ಸಿಕ್ಸರ್, 5 ಫೋರ್ ಸಮೇತ 37 ರನ್ ಸಿಡಿಸಿದ್ರು. ಡೇವಿಡ್ ಮಿಲ್ಲರ್ ಕೂಡ ಶಾರುಖ್ಗೆ ಸಾಥ್ ನೀಡಿದ್ದು, 20 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ನೊಂದಿಗೆ 30 ರನ್ ಪೇರಿಸಿದ್ರು. ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಭರ್ಜರಿ ಆಟ ಆಡಿದ್ರು.
ತೆವಾಟಿಯಾ 21 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 35 ರನ್, ರಶೀದ್ ಖಾನ್ 1 ಸಿಕ್ಸ್, 2 ಫೋರ್ನೊಂದಿಗೆ 18 ರನ್ ಚಚ್ಚಿದ್ರು. ವಿಜಯ್ ಶಂಕರ್ 10 ರನ್ಗೆ ವಿಕೆಟ್ ಒಪ್ಪಿಸಿದ್ರು. ಗುಜರಾತ್ 147 ರನ್ಗೆ ಆಲೌಟ್ ಆಗಿತ್ತು. ಆರ್ಸಿಬಿ ಪರ ಸಿರಾಜ್, ಯಶ್ ದಯಾಳ್, ವೈಶಾಕ್ ತಲಾ 2 ವಿಕೆಟ್ ತೆಗೆದ್ರು. ಕ್ಯಾಮೆರಾನ್ ಗ್ರೀನ್ ಮತ್ತು ಕರಣ್ ಶರ್ಮಾ ತಲಾ 1 ವಿಕೆಟ್ ತೆಗೆದ್ರು.
ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಶಾಕಿಂಗ್ ಪ್ರದರ್ಶನ.. ಗುಜರಾತ್ 147 ರನ್ಗೆ ಆಲೌಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್