ಟಿ20 ವಿಶ್ವಕಪ್ಗೆ ಮುನ್ನವೇ ಎದುರಾಳಿಗಳಿಗೆ ಖಡಕ್ ಸಂದೇಶ ರವಾನೆ
ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ ಟೀಮ್ ಇಂಡಿಯಾ ಸ್ಟಾರ್
ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಖಡಕ್ ಎಚ್ಚರಿಕೆ
ಇತ್ತೀಚೆಗೆ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಸಿಎಸ್ಕೆ ಗೆಲ್ಲಲು ಪ್ರಮುಖ ಕಾರಣ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ.
ಹೌದು, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಿಎಸ್ಕೆ ಪರ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ತಾನು ಎದುರಿಸಿದ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 165.38 ರ ಸ್ಟ್ರೈಕ್ ರೇಟ್ನಲ್ಲಿ 43 ರನ್ ಗಳಿಸಿದರು. ಜತೆಗೆ ಬೌಲಿಂಗ್ನಲ್ಲೂ 4 ಓವರ್ಗಳಲ್ಲಿ ಕೇವಲ 20 ರನ್ ಬಿಟ್ಟು ಕೊಟ್ಟು 3 ವಿಕೆಟ್ ತೆಗೆದು ಕಮಾಲ್ ಮಾಡಿದ್ರು. ಈ ಮೂಲಕ ರವೀಂದ್ರ ಜಡೇಜಾ ಟಿ20 ವಿಶ್ವಕಪ್ನಲ್ಲಿ ಎದುರಾಳಿಗಳಿಗೆ ಯಾವುದೇ ಸಂದರ್ಭದಲ್ಲಾದ್ರೂ ಮಾರಕ ಆಗಬಹುದು ಅನ್ನೋ ಸಂದೇಶ ರವಾನಿಸಿದ್ದಾರೆ.
ಜಡೇಜಾ ಈಗಾಗಲೇ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಡೇಜಾ ಹಲವು ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲೂ ಭಾರತವನ್ನು ಪ್ರತಿನಿಧಿಸಿದ್ದು, ಈ ಬಾರಿ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪರ ಆಡಲಿದ್ದಾರೆ. ಟೀಮ್ ಇಂಡಿಯಾ ಗೆಲುವಿಗಾಗಿ ತಮ್ಮ ಸಾಮರ್ಥ್ಯ ಮೀರಿ ಆಟವಾಡಲಿದ್ದಾರೆ ಜಡೇಜಾ. ಈ ಆಟಗಾರ ಫಾರ್ಮ್ನಲ್ಲಿರುವುದು ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವಂತಿದೆ.
ಇದನ್ನೂ ಓದಿ: VIDEO: ನಿನ್ನೆ ಡ್ರೆಸ್ಸಿಂಗ್ ರೂಂಗೆ ಹೋಗಿ ಅತ್ತು ಬಿಟ್ಟ ರೋಹಿತ್ ಶರ್ಮಾ..ಅಷ್ಟಕ್ಕೂ ಕಾರಣ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ