ಇಂಟರ್ನೆಟ್ ಸ್ಥಗಿತವಾದರೆ ದೇಶವೇ ತಲೆಕೆಳಗಾದಂತೆ
ಅಮೆರಿಕಾಗಿಂತ ಹೆಚ್ಚಿನ ವೇಗದ ಇಂಟರ್ನೆಟ್ ಈ ದೇಶದಲ್ಲಿದೆ
ಒಂದು ಸೆಕೆಂಡ್ನಲ್ಲಿ 150 ಬಾರಿ ಹೆಚ್ಡಿ ಸಿನಿಮಾ ಡೌನ್ಲೋಡ್ ಮಾಡಬಹುದು
ಇಂಟರ್ನೆಟ್. ಪ್ರಸ್ತುತ ಜಗತ್ತಿಗೆ ಇದರ ಅವಶ್ಯಕತೆ ತುಂಬಾನೆ ಇದೆ. ಒಂದು ಬಾರಿ ಇಂಟರ್ನೆಟ್ ಸ್ಥಗಿತವಾದರೆ ದೇಶವೇ ತಲೆಕೆಳಗಾದಂತೆ. ಕಾರಣ ಇಂಟರ್ನೆಟ್ ಅವಲಂಬಿಸಿ ಕೆಲಸ ಮಾಡುತ್ತಿರುವ ಅದೆಷ್ಟೋ ದೇಶಗಳಿವೆ. ಇದನ್ನು ನಂಬಿ ಬ್ಯಾಂಕಿಂಗ್, ಸರ್ಕಾರಿ ಕಛೇರಿ, ಐಟಿ ಕಂಪನಿ ಕೆಲಸ ಮಾಡುತ್ತಿವೆ.
ಸದ್ಯ ಭಾರತ 5ಜಿಯಲ್ಲಿ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಮುಂಬರುವ 6ಜಿಗಾಗಿ ದೇಶ ಕಾಯುತ್ತಿದೆ. ಆದರೆ ವಿಚಾರ ಅದಲ್ಲ. ನೆರೆಯ ದೇಶವನ್ನು ಜಗತ್ತಿನಲ್ಲೇ ಅತಿ ವೇಗದ ಇಂಟರ್ನೆಟ್ ಅನ್ನು ಹೊಂದಿರುವ ವಿಚಾರ ಗೊತ್ತಿದ್ಯಾ?. ಅಚ್ಚರಿ ವಿಚಾರವೆಂದರೆ, ಇದರ ವೇಗಕ್ಕೆ ಜಸ್ಟ್ ಒಂದು ಸೆಕೆಂಡ್ನಲ್ಲಿ ಬಾಲಿವುಡ್ ‘KGF2’ ಸಿನಿಮಾವನ್ನು 150 ಬಾರಿ ಡೌನ್ಲೋಡ್ ಮಾಡಬಹುದಾಗಿದಂತೆ.
ಚೀನಾ ಈಗ ಜಗತ್ತಿನಲ್ಲೇ ಅತ್ಯಂತ ವೇಗದ ಇಂಟರ್ನೆಟ್ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಇದರ ವೇಗ ಯುಎಸ್ನ ವೇಗದ ಇಂಟರ್ನೆಟ್ ಸಂಪರ್ಕಕ್ಕಿಂತ 10 ಪಟ್ಟು ಹೆಚ್ಚಿದೆ. ಸೌತ್ ಚೀನಾ ಮರ್ನಿಂಗ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ನೆಟ್ವರ್ಕ್ 1.2 ಟಿಬಿಪಿಎಸ್ ಅನ್ನು ನೀಡುತ್ತದೆ. ಅಂದರೆ 1200ಜಿಬಿಪಿಎಸ್ಗೆ ಸಮಾನವಾಗಿದೆ.
ಚೀನಾ 400ಜಿಬಿಪಿಎಸ್ 5ಜಿ ಇಂಟರ್ನೆಟ್ ಅನ್ನು ನೀಡುವುದರಿಂದ ಇದು ಯುನೈಟೆಡ್ ಸ್ಟೇಟ್ಗಿಂತ ವೇಗದ ವೇಗದ ಇಂಟರ್ನೆಟ್ ಅನ್ನು ನೀಡುತ್ತಿದೆ. ತ್ಸಿಂಗ್ವಾ ವಿಶ್ವವಿದ್ಯಾಲಯ, ಚೀನಾ ಮೊಬೈಲ್ ಹುವಾಯಿ ಮತ್ತು CERNET.com ಕಾರ್ಪೊರೇಷನ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದೆ.
ಇದನ್ನೂ ಓದಿ: AIR INDIA: ಸಾಮೂಹಿಕ ರಜೆ ಹಾಕಿದ ಉದ್ಯೋಗಿಗಳು.. 70 ವಿಮಾನಗಳು ರದ್ದು! ಪರದಾಡಿದ ಪ್ರಯಾಣಿಕರು
ಮೊದಲ ಹೇಳಿದಂತೆ 400ಜಿಬಿಪಿಎಸ್ ವೇಗದಲ್ಲಿ ಬರೀ ಒಂದು ಸೆಕೆಂಡ್ಗೆ 150 ಹೈ-ಡೆಫಿನಿಷನ್ ಫಿಲ್ಮ್ ಡೌನ್ಲೋಡ್ ಮಾಡಬಹುದಾಗಿದೆ. ಸದ್ಯ ಆಪ್ಟಿಕಲ್ ಫೈಬರ್ ಕೇಬಳಿಕೊಂಡು ಬೀಜಿಂಗ್, ವುಹಾನ್, ಗುವಾಂಗ್ಝೌಗಳಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತಿದೆ. 3 ಸಾವಿರ ಕಿಮೀ ಇದರ ಸಂಪರ್ಕ ಹರಡಿದೆ.
ಚೀನಾ ಈ ಹಿಂದೆ ರೂಟರ್, ಇಂಟರ್ನೆಟ್ಗಳಿಗಾಗಿ ಜಪಾನ್, ಅಮೆರಿಕಾದಂತ ದೇಶವನ್ನು ಅವಲಂಬಿಸಿತ್ತು. ಆದರೀಗ ವೇಗದ ಇಂಟರ್ನೆಟ್ ಕಂಡುಹಿಡಿಯುವ ಮೂಲಕ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ