ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ನೀಡುತ್ತಾ? ಇಲ್ವಾ?
ಈ ಸೀಸನ್ ಐಪಿಎಲ್ನಲ್ಲೂ DK ಬೊಂಬಾಟ್ ಆಟ
ಡಿಕೆ ಬಾಸ್ಗೆ ಗಿಫ್ಟ್ ಕೊಡಲು ಹೊರಟಿರೋದ್ಯಾಕೆ..?
ಆರ್ಸಿಬಿ ಪ್ಲೇ ಆಫ್ಗೆ ಎಂಟ್ರಿ ನೀಡುತ್ತಾ? ಇಲ್ವಾ? ಈ ಪ್ರಶ್ನೆ ಇಡೀ ಕ್ರಿಕೆಟ್ ಲೋಕವನ್ನ ಕಾಡ್ತಿದೆ. ಪ್ಲೇ ಆಫ್ ಎಂಟ್ರಿಗೆ ಸರ್ಕಸ್ ನಡೆಸ್ತಿರೋದ್ರ ನಡುವೆಯೇ ಆರ್ಸಿಬಿ ಆಟಗಾರರು ಮತ್ತೊಂದು ಶಪಥಗೈದಿದ್ದಾರೆ. ತಂಡದ ಅಪ್ರತಿಮ ಹೋರಾಟಗಾರ ದಿನೇಶ್ ಕಾರ್ತಿಕ್ಗೆ ಸ್ಪೆಷಲ್ ಗಿಫ್ಟ್ ಕೊಡಲು ಪ್ಲಾನ್ ನಡೆದಿದೆ. ಡಿಕೆ ಬಾಸ್ಗೆ ಆರ್ಸಿಬಿ ಗಿಫ್ಟ್ ಕೊಡಲು ಹೊರಟಿರೋದ್ಯಾಕೆ?
ಸತತ ಸೋಲುಗಳನ್ನ ಕಂಡು ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ಮಿ ರಣರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದೆ. ಅತ್ಯಾದ್ಭುತ ಬ್ಯಾಟಿಂಗ್.. ಬಿರುಗಾಳಿಯಂತ ಬೌಲಿಂಗ್. ಫೀಲ್ಡಿಂಗ್ ಅಂತೂ ಫಸ್ಟ್ ಕ್ಲಾಸ್ ಬಿಡಿ. ಗುಜರಾತ್ ವಿರುದ್ಧದ ಪಂದ್ಯ ನೋಡಿದ ಫ್ಯಾನ್ಸ್ಗೆ ಇದೇ ನಮ್ಮ ಆರ್ಸಿಬಿ ಅನ್ನೋ ಪ್ರಶ್ನೆ ಕಾಡ್ತಿದೆ. ಅಷ್ಟರ ಮಟ್ಟಿಗೆ ಆರ್ಸಿಬಿ ಟೀಮ್ ಸಂಪೂರ್ಣ ಬದಲಾಗಿ ಕಮ್ಬ್ಯಾಕ್ ಮಾಡಿದೆ.
ಇದನ್ನೂ ಓದಿ:Breaking: ಮಹಿಳೆ ಅಪಹರಣ ಕೇಸ್ಗೆ ಮತ್ತೊಂದು ಟ್ವಿಸ್ಟ್ ಕೊಟ್ಟ ಎಸ್ಐಟಿ ಅಧಿಕಾರಿಗಳು..!
ಎಲ್ಲಾ ಅಭಿಮಾನಿಗಳಿಗಾಗಿ.. RCB ತಂಡದ ಶಪಥ..!
ಸದ್ಯ 8 ಪಾಯಿಂಟ್ಸ್ಗಳನ್ನ ಕಲೆ ಹಾಕಿರೋ ಆರ್ಸಿಬಿಗೆ ಈಗಲೂ ಪ್ಲೇ ಆಫ್ ಎಂಟ್ರಿಗೆ ಚಾನ್ಸ್ ಇದೆ. ಮುಂದಿನ ಮೂರೂ ಪಂದ್ಯಗಳನ್ನ ಗೆಲ್ಲಬೇಕು, ಅದೃಷ್ಟ ಕೈ ಹಿಡಿದು 4ನೇ ಸ್ಥಾನಕ್ಕೆ ಪೈಪೋಟಿ ನಡೆಸ್ತಿರೋ ತಂಡಗಳು ಸೋಲು ಕಾಣಬೇಕು.. ಪ್ಲೇ ಆಫ್ಗೆ ಆರ್ಸಿಬಿ ಎಂಟ್ರಿ ಕೊಡಲಿದೆ. ಇದು ಸಾಧ್ಯಾನಾ? ಅನ್ನೋದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹೀಗಾಗಿ ಆರ್ಸಿಬಿ ಆಟಗಾರರು ಬೇಸರಗೊಂಡಿದ್ದ ಲಾಯಲ್ ಫ್ಯಾನ್ಸ್ಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡೋದನ್ನೇ ಮುಖ್ಯ ಉದ್ದೇಶವನ್ನಾಗಿಸಿಕೊಂಡಿದ್ದಾರೆ.
ಡಿಕೆ ಬಾಸ್ಗೆ ಸ್ಪೆಷಲ್ ಗಿಫ್ಟ್ ಕೊಡಲು RCB ಪ್ಲಾನ್
ಆರ್ಸಿಬಿ ಕಳೆದ 3 ಪಂದ್ಯದಲ್ಲಿ ಅಭಿಮಾನಿಗಳಿಗಾಗಿ ಭರ್ಜರಿ ಪ್ರದರ್ಶನ ನೀಡಿದೆ. ಪರ್ಫಾಮೆನ್ಸ್ ಕಂಡು ಫ್ಯಾನ್ಸ್ ಕೂಡ ಖುಷ್ ಆಗಿದ್ದಾರೆ. ಸದ್ಯ ಎಲ್ಲಾ ಅಭಿಮಾನಿಗಳಿಗಾಗಿ ಎಂದು ಆಡ್ತಿರುವ ಆರ್ಸಿಬಿ ಆಟಗಾರರಲ್ಲಿ ಇನ್ನೊಂದು ಕನಸು ಕೂಡ ಇದೆ. ಅದೇ ಆರ್ಸಿಬಿ ಪಡೆಯ ಅಪ್ರತಿಮ ಹೋರಾಟಗಾರ. ಅಭಿಮಾನಿಗಳ ನೆಚ್ಚಿನ ಡಿಕೆ ಬಾಸ್ಗೆ ಗೆಲುವಿನ ಗಿಫ್ಟ್ ನೀಡಿ ಗ್ರ್ಯಾಂಡ್ ವಿದಾಯ ಹೇಳೋದು.
ಇದನ್ನೂ ಓದಿ:ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ
ಈ ಸೀಸನ್ ಐಪಿಎಲ್ನಲ್ಲೂ ಬೊಂಬಾಟ್ ಆಟ.!
ಛಲದಂಕ ಮಲ್ಲ ದಿನೇಶ್ ಕಾರ್ತಿಕ್ ಕಮ್ಬ್ಯಾಕ್ ಕಥೆ ಎಂತವರಿಗೂ ಸ್ಫೂರ್ತಿ. 2015ರಲ್ಲಿ ಮೊದಲು ಆರ್ಸಿಬಿ ಪರ ಆಡಿದ್ದ ದಿನೇಶ್ ಕಾರ್ತಿಕ್ರನ್ನು 2022ರಲ್ಲಿ ಮತ್ತೆ ಕಮ್ಬ್ಯಾಕ್ ಮಾಡಿದ್ರು. ಹರಾಜಿನಲ್ಲಿ ಡಿಕೆಯನ್ನು ಖರೀದಿಸಿದಾಗ ಎಲ್ರೂ ಟೀಕಿಸಿದ್ರು. ಆ ಟೀಕೆಗಳಿಗೆಲ್ಲಾ ಕಾರ್ತಿಕ್, ತಮ್ಮ ಬ್ಯಾಟ್ನಿಂದಲೇ ಉತ್ತರ ಕೊಟ್ರು. ಫಿನಿಷರ್ ಆಗಿ ಮಿಂಚು ಹರಿಸಿದ ಡಿಕೆ ಬಾಸ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಎಬಿಡಿ ಅಲಭ್ಯತೆಯ ಕೊರತೆ ಕಾಡದಂತೆ ತಮ್ಮ ರೋಲ್ನ ಸ್ಪಷ್ಟವಾಗಿ ನಿಭಾಯಿಸಿದ್ರು. ಈ ಸೀಸನ್ನಲ್ಲೂ ಅಷ್ಟೇ ಡಿಕೆ ಬೊಂಬಾಟ್ ಆಟದ ಮನರಂಜನೆ ನೀಡ್ತಿದ್ದಾರೆ.
ಐಪಿಎಲ್ ಬಳಿಕ ಕ್ರಿಕೆಟ್ಗೆ ಕಾರ್ತಿಕ್ ಗುಡ್ ಬೈ?
38 ವರ್ಷದ ದಿನೇಶ್ ಕಾರ್ತಿಕ್ಗೆ ಇದೇ ಕೊನೆಯ ಐಪಿಎಲ್ ಟೂರ್ನಿ. ಈ ಸೀಸನ್ ಆರಂಭಕ್ಕೂ ಮುನ್ನವೇ ವಿದಾಯದ ಸುಳಿವನ್ನ ದಿನೇಶ್ ಕಾರ್ತಿಕ್ ನೀಡಿದ್ದಾರೆ. ದುರಾದೃಷ್ಟವಶಾತ್ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸದಿದ್ರೆ, ಮುಂದಿರೋ 3 ಲೀಗ್ ಹಂತದ ಪಂದ್ಯಗಳೇ ಡಿಕೆ ಪಾಲಿನ ಕೊನೆಯ ಪಂದ್ಯಗಳಾಗಲಿವೆ. ಈ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ, ಡಿಕೆಗೆ ಗೆಲುವಿನ ಗಿಫ್ಟ್ ನೀಡೋ ಲೆಕ್ಕಾಚಾರ ಆರ್ಸಿಬಿ ತಂಡದಲ್ಲಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು.. ಅನ್ನೋ ಮಾತಿದ್ಯಲ್ಲ.. ಹಂಗಿತ್ತು ನೋಡಿ ಫಸ್ಟ್ ಹಾಫ್ನಲ್ಲಿ ಆರ್ಸಿಬಿ. ಬ್ಯಾಟರ್ಸ್ ಸಕ್ಸಸ್ ಕಂಡ್ರೆ, ಬೌಲರ್ಸ್ ಫೇಲ್, ಬೌಲರ್ಸ್ ಭರ್ಜರಿಯಾಗಿ ಆಡಿದ್ರೆ, ಬ್ಯಾಟರ್ಸ್ ಪ್ಲಾಫ್.. ಪರಿಣಾಮ ಸೋಲಿನ ಸುಳಿಗೆ ಸಿಲುಕಿತ್ತು. ಇಂತಾ ಆರ್ಸಿಬಿ ಇದೀಗ ನಿರೀಕ್ಷೆಯೂ ಮಾಡದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದೆ. ಹ್ಯಾಟ್ರಿಕ್ ಗೆಲುವನ್ನ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿರೋ ಆರ್ಸಿಬಿ, ಉಳಿದ ತಂಡಗಳಲ್ಲಿ ನಡುಕ ಹುಟ್ಟಿಸಿದೆ. ಇದೇ ಆಟ ಮುಂದುವರೆಸಿದ್ರೆ, ಡಿಕೆಗೆ ಗೆಲುವಿನ ವಿದಾಯ ನೀಡೋದ್ರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್ ಟೇಕ್ ಮಾಡಿದ ವಿರಾಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ