ಬಿಗ್ಬಾಸ್ ಸೀಸನ್ 16 ಮೂಲಕ ವಿಶ್ವದಾದ್ಯಂತ ಫ್ಯಾನ್ಸ್ಗಳ ಹೃದಯ ಗೆದ್ದಿದ್ದ ಅಬ್ದು
ವಿಡಿಯೋವನ್ನು ಶೇರ್ ಮಾಡಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಬಿಗ್ಬಾಸ್ ಸ್ಪರ್ಧಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಅಬ್ದು ರೋಝಿಕ್ ಮಾತಿನ ವಿಡಿಯೋ
ಹಿಂದಿ ಬಿಗ್ಬಾಸ್ ಸೀಸನ್ 16 ಸ್ಪರ್ಧಿಸಿದ್ದ ಅಬ್ದು ರೋಝಿಕ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 20 ವರ್ಷದ
ಅಬ್ದು ರೋಝಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋಗಿದ್ದ.. ವಾಪಸ್ ಬಂದು ಕತ್ತೇ ಕತ್ತರಿಸಿದ; ಅಷ್ಟಕ್ಕೂ ಗುಡ್ಡದಲ್ಲಿ ನಡೆದಿದ್ದೇನು?
ಸದ್ಯ ಪ್ರೀತಿಸಿದ ಹುಡುಗಿಗೆ ಉಂಗುರ ಹಾಕಿ ಅಬ್ದು ರೋಝಿಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಂಗುರ ಬದಲಾಯಿಸಿಕೊಳ್ಳುವ ಫೋಟೋ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋವನ್ನು ಶೇರ್ ಮಾಡಿಕೊಂಡ ಅಬ್ದು ರೋಝಿಕ್ ತಾನೀಗ ಪ್ರೀತಿಯಲ್ಲಿದ್ದು, ಜುಲೈ 7ರಂದು ದುಬೈನಲ್ಲಿ ಮನಮೆಚ್ಚಿದ ಹುಡುಗಿ ಜತೆ ಮದುವೆಯಾಗುತ್ತಿದ್ದೇನೆ ಅಂತಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇನ್ನು, ಅಬ್ದು ರೋಝಿಕ್ ಅವರು ಶಾರ್ಜಾ ಮೂಲಕದ ಅಮೀರಾ ಎಂಬ ಹುಡುಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಏನಿದೆ?
ಸ್ನೇಹಿತರೆ ನನಗೆ ಈಗ 20 ವರ್ಷ ಎಂದು ನಿಮಗೆ ತಿಳಿದಿದೆ. ನನ್ನನ್ನು ಗೌರವದಿಂದ ಕಾಣುವ, ನನ್ನನ್ನು ತುಂಬಾ ಪ್ರೀತಿಸುವ ಹುಡುಗಿಯನ್ನು ಪ್ರೀತಿಸಬೇಕೆಂದು ಕನಸು ಕಂಡಿದ್ದೆ. ನಾನು ಅಮೀರಾನನ್ನು ದುಬೈನ ಒಂದು ಉಪಾಹಾರ ಗೃಹದಲ್ಲಿ ಭೇಟಿಯಾದೆ. ನಾನು ಅವಳನ್ನು ತಕ್ಷಣವೇ ಇಷ್ಟಪಟ್ಟೆ. ಅವಳು ಸುಂದರವಾಗಿದ್ದಾಳೆ. ಉದ್ದ ಕೂದಲು ಮತ್ತು ಸುಂದರವಾದ ಕಣ್ಣುಗಳನ್ನು ಹೊಂದಿದ್ದಾಳೆ. ನಾನು ನನ್ನನ್ನು ಪರಿಚಯಿಸಿಕೊಂಡೆ. ಜೊತೆಗೆ ಆಕೆಯ ಫೋನ್ ನಂಬರ್ ಕೂಡ ಎಕ್ಸ್ಚೇಂಜ್ ಮಾಡಿಕೊಂಡೆ. ಕಳೆದ ನಾಲ್ಕು ತಿಂಗಳಿಂದ ನಮಗೆ ಪರಿಚಯವಿದೆ. ಅವಳು ಶಾರ್ಜಾದಲ್ಲಿ ಟ್ರೇಡ್ ಅಡ್ಮಿನಿಸ್ಟ್ರೇಷನ್ ಬಗ್ಗೆ ಓದುತ್ತಿದ್ದಾಳೆ. ಇದೀಗ ಆ ಹುಡುಗಿ ನನಗೆ ಸಿಕ್ಕಿದ್ದಾಳೆ. ಆಕೆ ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ನನಗೆ ತುಂಬಾ ಖುಷಿಯಾಗಿದೆ. ಈ ವಿಡಿಯೋ ಜೊತೆಗೆ ನನ್ನ ಜೀವನದಲ್ಲಿ ಇಂತಹ ಸುಂದರವಾದ ದಿನ ಇಷ್ಟು ಬೇಗ ಬರುತ್ತದೆ ಎಂದು ಭಾವಿಸಿರಲಿಲ್ಲ. ಜುಲೈ 7ರಂದು ನನ್ನ ಮದುವೆ, ಈ ದಿನ ನೆನಪಿಟ್ಟುಕೊಳ್ಳಿ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ