ಗೆಲುವಿನ ಮಂತ್ರ ಜಪಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪ್ಲೇ ಆಫ್ ಸೇರಲು ಕಠಿಣ ಸವಾಲು ದಾಟಬೇಕಿದ ಆರ್ಸಿಬಿ ತಂಡ
ಆರ್ಸಿಬಿ ಹೀಗೆ ಮಾಡಿದ್ರೆ ಮಾತ್ರ ‘ಈ ಸಲ ಕಪ್ ನಮ್ದೇ’ ಆಗುತ್ತೆ
ಇತ್ತೀಚೆಗೆ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ 60 ರನ್ಗಳ ವಿಜಯ ತನ್ನದಾಗಿಸಿಕೊಂಡಿದೆ. ಆ ಮೂಲಕ ಪ್ಲೇ ಆಫ್ಗೆ ಹೋಗುವ ಬೆಟ್ಟದಷ್ಟು ಕನಸನ್ನು ಇಟ್ಟುಕೊಂಡಿದೆ. ಆದರೆ ಬೆಟ್ಟ ಏರುವ ಮುನ್ನ ಆರ್ಸಿಬಿಗೆ ಕೆಲವೊಂದು ಸವಾಲುಗಳಿಗೆ. ಆ ಸವಾಲುಗಳನ್ನು ದಾಟಿದರೆ ಆರ್ಸಿಬಿಗೆ ಕನಸು ಜೀವಂತವಾಗಲಿದೆ.
ಸವಾಲು 1:
ಫಾಫ್ ಡು ಪ್ಲೇಸಿಸ್ ನಾಯಕತ್ವದ ಆರ್ಸಿಬಿ ತಂಡ ಮುಂದಿನ ಎಲ್ಲಾ ಪಂದ್ಯಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ಕಾರಣ ಒಂದು ಪಂದ್ಯ ಸೋತರು ಆರ್ಸಿಬಿ ರೇಸ್ನಿಂದ ಹಿಂದೆ ಉಳಿಯಲಿದೆ. ಸದ್ಯ ಬೆಂಗಳೂರು ತಂಡ ಸಿಎಸ್ಕೆ, ಎಸ್ಆರ್ಹೆಚ್, ಡೆಲ್ಲಿ ಕ್ಯಾಪಿಟಲ್, ಲಕ್ನೋ ತಂಡವನ್ನು ಬೆನ್ನಟ್ಟಿ ಗೆಲುವು ತನ್ನದಾಗಿಸಿಕೊಳ್ಳಬೇಕು.
ಸವಾಲು 2:
ಮತ್ತೊಂದೆಡೆ ನಿನ್ನೆ ಗುಜರಾತ್ ತಂಡದ ವಿರುದ್ಧ ಸೋತ ಸಿಎಸ್ಕೆ ತಂಡ ಕನಿಷ್ಟ ಒಂದು ಸೋಲನ್ನಾದರು ಅನುಭವಿಸಬೇಕು. ಬೆಂಗಳೂರು ತಂಡಕ್ಕೂ ಮೊದಲು ಸಿಎಸ್ಕೆ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ. ಸದ್ಯ ಸಿಎಸ್ಕೆ ನೆಟ್ ರನ್ ರೇಟ್ +0.491 ಇದ್ದು, ಆರ್ಸಿಬಿ ರನ್ ರೇಟ್ +0.217 ಇದೆ.
ಸವಾಲು 3:
ಅತ್ತ ಪ್ಲೇ ಆಫ್ ರೇಸ್ನಲ್ಲಿ ಲಕ್ನೋ ತಂಡವು ಇದೆ. 12 ಪಂದ್ಯಗಳಲ್ಲಿ 6 ಗೆಲುವು ತನ್ನದಾಗಿಸಿಕೊಂಡಿದೆ. ಹಾಗಾಗಿ 12 ಅಂಕಗಳನ್ನು ಈ ತಂಡ ಪಡೆದುಕೊಂಡಿದೆ. ಇನ್ನು 2 ಲೀಗ್ ಪಂದ್ಯ ಬಾಕಿಯಿದ್ದು, ಒಂದು ಪಂದ್ಯದಲ್ಲಿ ಸೋತರು ಆರ್ಸಿಬಿ ದಾರಿ ಕೊಂಚ ಸುಲಭವಾಗಲಿದೆ. ಒಂದು ವೇಳೆ ಲಕ್ನೋ ಮುಂದಿನ 2 ಪಂದ್ಯ ಗೆದ್ದರೆ ಆರ್ಸಿಬಿ ಪ್ರಯಾಣ ಸುಖಾಂತ್ಯ ಕಾಣಲಿದೆ.
ಇದನ್ನೂ ಓದಿ: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್.. ಅಸಲಿ ಕತೆ ಏನು?
ಸವಾಲು 4:
ಡೆಲ್ಲಿ ಕ್ಯಾಪಿಟಲ್ ತಂಡ 12 ಪಂದ್ಯಗಳಲ್ಲಿ 6 ಗೆಲುವು ಪಡೆದು 4ನೇ ಅಗ್ರಸ್ಥಾನದಲ್ಲಿದೆ. ಈ ತಂಡ ಕೂಡ ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಳ್ಳಬೇಕಿದೆ. ಡೆಲ್ಲಿ ತಂಡ ಲಕ್ನೋ ಮತ್ತು ಆರ್ಸಿಬಿ ವಿರುದ್ಧ ಆಡಲಿದ್ದು, ಈ ಸಮಯದಲ್ಲಿ ಲಕ್ನೋವನ್ನು ಸೋಲಿಸಿದರೆ ಆರ್ಸಿಬಿಗೆ ಲಾಭವಾಗಿಲಿದೆ.
ಸವಾಲು 5:
ಆರ್ಸಿಬಿ ಮನಸ್ಸು ಮಾಡಿದರೆ ಹೈದರಾಬಾದ್ ತಂಡವನ್ನು 4 ಅಥವಾ 5ನೇ ಸ್ಥಾನದಲ್ಲೇ ಉಳಿಸುವಂತೆ ಮಾಡಬಹುದು. ಆದರೆ ಕಾವ್ಯ ಮಾರನ್ ಮಾಲಿಕತ್ವದ ತಂಡ ಎಲ್ಲಾ ಉಳಿದ ಎಲ್ಲಾ ಪಂದ್ಯ ಸೋತರೆ ಆರ್ಸಿಬಿಗೆ ಇದರಿಂದ ಲಾಭವಿದೆ. ಸದ್ಯ ಹೈದರಾಬಾದ್ ಬಲಶಾಲಿಯಾಗಿರುವ ತಂಡವಾಗಿದ್ದು, ಸಮಯ, ಸಂದರ್ಭಗಳೇ ಇವೆಲ್ಲವನ್ನು ನಿರ್ಣಯಿಸಬೇಕಿದೆ.
ಇದನ್ನೂ ಓದಿ: ಕೊಡಗು: ಆತ್ಮಹತ್ಯೆ ಸುಳ್ಳು.. ಬಾಲಕಿಯ ರುಂಡ ಕಡಿದವನು ಕೊನೆಗೂ ಜೀವಂತ ಸಿಕ್ಕಿದ.. ‘ಇವನೇ ಅವನು’
ಆರ್ಸಿಬಿ ಪ್ಲೇ ಆಫ್ಗೆ ಬರಲು ಕಠಿಣ ಸವಾಲುಗಳು ಮುಂದಿವೆ. ಇವೆಲ್ಲವನ್ನು ದಾಟಿ ಮುಂದೆ ಬರಲು ಫ್ಯಾನ್ಸ್ ಕಾದು ಕುಳಿತ್ತಿದ್ದಾರೆ. ಆದರೆ ಆಟಗಾರರ ಕ್ಷಮತೆಯ ಮೇಲೆ ಪಂದ್ಯದ ಸೋಲು, ಗೆಲುವು ನಿರ್ಣಯವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ