ಇಂದು ಕೊಲ್ಕತ್ತಾ ಮತ್ತು ಮುಂಬೈ ತಂಡ ನಡುವೆ ಜಿದ್ದಾಜಿದ್ದಿ
ರೋಹಿತ್ ಮತ್ತು ಕೋಲ್ಕತ್ತಾ ತಂಡದ ಸಹಾಯಕ ಕೋಚ್ ನಡುವಿನ ಸಂಭಾಷಣೆ ವೈರಲ್
ಡ್ರೆಸ್ಸಿಂಗ್ ರೂಂನ ವಿಚಾರಗಳನ್ನು ಅಭಿಷೇಕ್ ನಾಯರ್ ಜೊತೆ ಹಂಚಿಕೊಂಡ ಹಿಟ್ ಮ್ಯಾನ್
KKRvsMI: ಇಂದು ಕೊಲ್ಕತ್ತಾ ಮತ್ತು ಮುಂಬೈ ತಂಡ ಎದುರು ಬದುರಾಗುತ್ತಿವೆ. ಈಡನ್ ಗಾರ್ಡನ್ ಮೈದಾನದಲ್ಲಿ ಇತ್ತಂಡಗಳು ಜಯಕ್ಕಾಗಿ ಹೋರಾಡಲಿವೆ. ಆದರೆ ಅದಕ್ಕೂ ಮುನ್ನ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಕೋಲ್ಕತ್ತಾ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2024ರ ಐಪಿಎಲ್ನಲ್ಲಿ ಕೊಲ್ಕತ್ತಾ ತಂಡ ಮೊದಲ ಸ್ಥಾನದಲ್ಲಿದ್ದರೆ, ಅತ್ತ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡ 9ನೇ ಸ್ಥಾನದಲ್ಲಿದೆ. ಇಂದು ಎರಡು ತಂಡಗಳ ನಡುವೆ ಪಂದ್ಯ ನಡೆಯಲಿಕ್ಕಿದೆ. ಆದರೆ ಪಂದ್ಯಕ್ಕೂ ಮುನ್ನ ರೋಹಿತ್ ಮತ್ತು ಅಭಿಷೇಕ್ ನಾಯರ್ ಮಾತನಾಡುವ ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಿಟ್ ಮ್ಯಾನ್ ಡ್ರೆಸ್ಸಿಂಗ್ ರೂಂನ ವಿಚಾರಗಳನ್ನು ಅಭಿಷೇಕ್ ನಾಯರ್ ಜೊತೆ ಹಂಚಿಕೊಂಡಿದ್ದಾರೆ.
ರೋಹಿತ್ ಎನಂದ್ರು?
ಮುಂಬೈ ತಂಡದಲ್ಲಿ ಒಂದೊಂದು ಬದಲಾವಣೆಯಾಗುತ್ತಿದೆ. ಇದು ತಂಡದ ನಿರ್ವಹಣೆಯ ಮೇಲೆ ಅವಲಂಬಿಸಿರೋದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪರಿಸ್ಥಿತಿ ಏನೇ ಇರಲಿ. ಇದು ನನ್ನ ಮನೆ ಮತ್ತು ನಾನು ನಿರ್ಮಿಸಿದ ದೇವಸ್ಥಾನ ಎಂದಿದ್ದಾರೆ. ವಿಡಿಯೋದ ಕೊನೆಯಲ್ಲಿ ಇದು ಕೊನೆಯ ವರ್ಷದ ಐಪಿಎಲ್ ಎಂದಿದ್ದಾರೆ.
Rohit Sharma ” Mera Ghar hai , maine banaya hai” MI ke liye bol rha hai kya? pic.twitter.com/n7ol0NLwEh
— MOHIT SHUKLA (@MohitShukla1030) May 10, 2024
ಇದನ್ನೂ ಓದಿ: RCB: ಪ್ಲೇ ಆಫ್ಗೆ ಹೋಗಲು ಆರ್ಸಿಬಿಗಿರುವ ಕಠಿಣ ಸವಾಲುಗಳಿವು! ಇದರಲ್ಲಿ ಪಾಸ್ ಆದ್ರೆ ‘ಕಪ್ ನಮ್ದೇ’
ರೋಹಿತ್ ಶರ್ಮಾ ಮತ್ತು ಅಭಿಷೇಕ್ ನಾಯರ್ ನಡುವಿನ ಸಂಭಾಷಣೆಯ ವಿಡಿಯೋವನ್ನು ಕೊಲ್ಕತ್ತಾ ತಂಡ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ ಕೆಲವು ಸಮಯದ ಬಳಿಕ ವಿಡಿಯೋವನ್ನು ಡಿಲೀಟ್ ಮಾಡಿದೆ.
ಇದನ್ನೂ ಓದಿ: ಶಾಲೆಯ ಮುಂಭಾಗವೇ ಯುವಕನ ಕತ್ತು ಕೊಯ್ದು ಕೊಲೆ.. ಇಷ್ಟಕ್ಕೆಲ್ಲಾ ಕಾರಣ ಅದೊಂದೇ..?
ಇನ್ನು ಈ ಬಾರಿಯ ಐಪಿಎಲ್ನಲ್ಲಿ ರೋಹಿತ್ ಶರ್ಮಾ 12 ಪಂದ್ಯಗಳಲ್ಲಿ 152.78 ಸ್ಟ್ರೈಕ್ ರೇಟ್ನಲ್ಲಿದ್ದಾರೆ. ಒಂದು ಶತಕ ಸೇರಿ 330 ರನ್ಗಳನ್ನು ಒಟ್ಟುಗೂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ