ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಘಟನೆ
ಬಾಲ್ ಕದ್ದು ಸಿಕ್ಕಿಬಿದ್ದ ವಿಡಿಯೋ ಭಾರೀ ವೈರಲ್
GT vs KKR ನಡುವೆ ಪಂದ್ಯ ಆಯೋಜನೆಗೊಂಡಿತ್ತು
ಐಪಿಎಲ್ನ 63ನೇ ಪಂದ್ಯವು ನಿನ್ನೆ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿತ್ತು. ಆದರೆ ಮಳೆಯ ಕಾರಣ, ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿ ಆಗಬೇಕಿತ್ತು. ಎರಡು ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಿ ಪಂದ್ಯವನ್ನು ರದ್ದು ಮಾಡಲಾಯಿತು.
ಇದೇ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಯೊಬ್ಬ ಪಂದ್ಯದ ಬಾಲ್ ಕದಿಯಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಅಭಿಮಾನಿಯಾಗಿರುವ ಯುವಕ, ಸ್ಟಾರ್ ಬ್ಯಾಟ್ಸ್ಮನ್ ರಿಂಕು ಸಿಂಗ್ ಜರ್ಸಿ ಹಾಕೊಂಡು ಸ್ಟೇಡಿಯಂಗೆ ಬಂದಿದ್ದ.
ಇದನ್ನೂ ಓದಿ:ಪ್ಲೇ ಆಫ್ಗೆ ಹೋಗಲು ಸುವರ್ಣ ಅವಕಾಶ.. CSK ವಿರುದ್ಧ ಆರ್ಸಿಬಿ ಎಷ್ಟು ರನ್ಗಳಿಂದ ಗೆಲ್ಲಬೇಕು?
ಈ ವೇಳೆ ಯುವಕ ಮ್ಯಾಚ್ನಲ್ಲಿ ಬಳಸಲಾಗುವ ಬಾಲ್ ಕದಿಯಲು ಪ್ರಯತ್ನಿಸಿದ್ದಾನೆ. ಇದು ಭದ್ರತಾ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ವಿಚಾರಿಸಿದಾಗ ಬಚ್ಚಿಟ್ಟಿದ್ದ ಬಾಲ್ ನೀಡಿದ್ದಾನೆ. ನಂತರ ಅಧಿಕಾರಿಗಳು ಆತನನ್ನು ಹಿಡಿದು ಎಳೆದಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್.. ಟೀಂ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾನೇ ಕಂಟಕ..!
A fan tried to steal the match ball, but got caught. 😂pic.twitter.com/99bmVET9tM
— Mufaddal Vohra (@mufaddal_vohra) May 14, 2024
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್