ಆರ್ಸಿಬಿ ಹಿಂದಿಕ್ಕಿ ಮೇಲೇರಿದ ಡೆಲ್ಲಿ ಕ್ಯಾಪಿಟಲ್ಸ್..!
ನಿನ್ನೆ LSG ತಂಡವನ್ನು ಬಗ್ಗು ಬಡಿದಿರುವ ಪಂತ್ ಪಡೆ
ಶನಿವಾರ ಆರ್ಸಿಬಿ-ಸಿಎಸ್ಕೆ ಮಧ್ಯೆ ಮೆಗಾ ಫೈಟ್
ಐಪಿಎಲ್ 2024ರ ಪ್ಲೇ ಆಫ್ ರೇಸ್ ರೋಚಕವಾಗಿದೆ. ದಿನದಿಂದ ದಿನಕ್ಕೆ ತಂಡಗಳ ವರಸೆ ಬದಲಾಗುತ್ತಿದ್ದು, ಮಾಡು ಇಲ್ಲವೇ ಮಡಿ ಅಂತಾ ಹೊರಾಟ ಮಾಡುತ್ತಿವೆ. ಅಂತೆಯೇ ನಿನ್ನೆ ನಡೆದ ಪಂದ್ಯದಲ್ಲಿ ಎಲ್ಎಸ್ಜಿ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಬಗ್ಗು ಬಡಿದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸುತ್ತಿದ್ದಂತೆಯೇ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿಯನ್ನು ಬೀಟ್ ಮಾಡಿ ಮೇಲೆ ಹೋಗಿದೆ. ಈ ಮೂಲಕ ಪ್ಲೇ ಆಫ್ ಕನಸು ಕಾಣುತ್ತಿರುವ ಆರ್ಸಿಬಿ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ.
ಆರ್ಸಿಬಿ ಹೋರಾಟಕ್ಕೆ ಅಡ್ಡಿಯಾಗುತ್ತಾ..?
ಖಂಡಿತ ಇಲ್ಲ! ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ತನ್ನ ಕೋಟಾದ 14 ಪಂದ್ಯಗಳನ್ನೂ ಆಡಿ ಪೂರ್ಣಗೊಳಿಸಿದೆ. -0.377 ನೆಟ್ ರನ್ ರೇಟ್ನೊಂದಿಗೆ 7 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್ಗೆ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ಮುಂದೆ ಯಾವುದೇ ಲೀಗ್ ಪಂದ್ಯಗಳು ಉಳಿದಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ಗೆ ಪ್ಲೇ ಆಫ್ ಕನಸು ಕಾಣಲು ಯಾವುದೇ ಆಯ್ಕೆಗಳಿಲ್ಲ.
ಇದನ್ನೂ ಓದಿ:ಮೋದಿ ಸರ್ಕಾರದ ಬಗ್ಗೆ ಪರೋಕ್ಷವಾಗಿ ಬ್ಯಾಟ್ ಬೀಸಿದ್ರಾ ರಶ್ಮಿಕಾ ಮಂದಣ್ಣ? ಯುವಕರಿಗೆ ಸ್ಪೆಷಲ್ ಮನವಿ..!
ಆದರೆ ನೆಟ್ ರನ್ ರೇಟ್ನಲ್ಲಿ ಮುಂದೆ ಇರುವ ಆರ್ಸಿಬಿಗೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ಸಿಬಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಆರ್ಸಿಬಿ ಸಿಎಸ್ಕೆ ವಿರುದ್ಧ 18 ರನ್ಗಳ ಅಂತರದಲ್ಲಿ ಅಥವಾ 18.1 ಓವರ್ ಒಳಗೆ ಗೆಲುವು ಸಾಧಿಸಿದರೆ ಆರ್ಸಿಬಿ ಪ್ಲೇ-ಆಫ್ ಪ್ರವೇಶ ಮಾಡಲಿದೆ.
ಇದನ್ನೂ ಓದಿ:ಹೀಗಾದರೆ.. ಆರ್ಸಿಬಿ, ಸಿಎಸ್ಕೆ ಎರಡೂ ತಂಡಗಳು ಪ್ಲೇ ಆಫ್ಗೆ ಹೋಗುತ್ತವೆ..! ಅಚ್ಚರಿ ಪಡಬೇಕಾಗಿಲ್ಲ..!
ಇನ್ನು ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಪ್ಲೇ-ಆಫ್ ಪ್ರವೇಶ ಮಾಡಿವೆ. ಮೂರನೇ ಸ್ಥಾನದ ಮೇಲೆ ಸನ್ ರೈಸರ್ಸ್ ಹೈದರಾಬಾದ್ ಕಣ್ಣಿಟ್ಟಿದೆ. ಹೈದರಾಬಾದ್ ಬಳಿ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಯಾವುದಾದರೂ ಒಂದು ಪಂದ್ಯ ಗೆದ್ದರೆ ಪ್ಲೇ-ಪ್ರವೇಶ ಖಚಿತವಾಗಲಿದೆ. ಇತ್ತ ನಾಲ್ಕನೇ ಪ್ಲೇಸ್ಗೆ ಸಿಎಸ್ಕೆ ಮತ್ತು ಆರ್ಸಿಬಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್