ಕುತೂಹಲಕ್ಕೆ ಕಾರಣವಾಗ್ತಿದೆ ಐಪಿಎಲ್ ಪ್ಲೇ-ಆಫ್ ಹೋರಾಟ
ಇವತ್ತು SRH ಗೆದ್ದರೆ ಅಧಿಕೃತವಾಗಿ ಪ್ಲೇ-ಆಫ್ಗೆ ಎಂಟ್ರಿ
ಹೈದರಾಬಾದ್ ಸೋಲೋದ್ರಿಂದ ಆರ್ಸಿಬಿಗೆ ಹೇಗೆಲ್ಲ ಲಾಭ..?
ಇಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್ 2024ರ 66ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆದ್ದರೆ ಸನ್ರೈಸರ್ಸ್ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲಿದೆ. ಸನ್ರೈಸರ್ಸ್ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಪಡೆದುಕೊಂಡಿದೆ. ಇತ್ತ ಎರಡು ಪಂದ್ಯಗಳಲ್ಲಿ ಸೋತರೆ ಪ್ಲೇ-ಆಫ್ ರೇಸ್ನಿಂದಹೊರಬೀಳುವ ಸಾಧ್ಯತೆಯೂ ಇದೆ. ಅತ್ತ ಗುಜರಾತ್ ಈಗಾಗಲೇ ಪ್ಲೇ-ಆಫ್ನಿಂದ ಹೊರಗುಳಿದಿದ್ದು, ಈ ಪಂದ್ಯದ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯ್ತಿದೆ.
ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ
ಆರ್ಸಿಬಿ ಏನು ಲಾಭ..?
ಇವತ್ತಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋತರೆ ಆರ್ಸಿಬಿಗೆ ಒಳ್ಳೆಯದು. ಈಗಾಗಲೇ 12 ಪಂದ್ಯಗಳನ್ನು ಆಡಿರುವ ಹೈದರಾಬಾದ್ 7 ರಲ್ಲಿ ಗೆದ್ದು, +0.406 ನೆಟ್ ರನ್ರೇಟ್ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಮೇ 16 ರಂದು ಗುಜರಾತ್ ಟೈಟನ್ಸ್ ಹಾಗೂ ಮೇ 19 ರಂದು ಪಂಜಾಬ್ ವಿರುದ್ಧ ಸೆಣಸಾಟ ನಡೆಸಲಿದೆ. ಒಂದು ವೇಳೆ ಈ ಎರಡೂ ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ಸೋತರೆ ಪ್ಲೇ-ಆಫ್ ಪ್ರವೇಶ ಮಾಡೋದು ಕಷ್ಟವಾಗಬಹುದು.
ಇದನ್ನೂ ಓದಿ: CSK vs RCB ನಡುವಿನ ಮ್ಯಾಚ್ಗೆ ಮಳೆ ಬಂದರೆ ಏನಾಗುತ್ತದೆ..?
ಶನಿವಾರ ನಡೆಯುವ ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ, ಹೈದರಾಬಾದ್ ಮನೆಗೆ ಹೋಗಲಿದೆ. ಆರ್ಸಿಬಿ ಸಿಎಸ್ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ, ಸಹಜವಾಗಿಯೇ ನೆಟ್ ರನ್ ರೇಟ್ ಹೆಚ್ಚಾಗಲಿದೆ. ಈಗಾಗಲೇ + 0.387 ನೆಟ್ ರನ್ ರೇಟ್ ಹೊಂದಿದೆ. ಇತ್ತ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಿಎಸ್ಕೆ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಆದರೂ ಸಿಎಸ್ಕೆ ಪ್ಲೇ-ಆಫ್ರ ಪ್ರವೇಶ ಮಾಡಲಿದೆ. ಭಾರೀ ಅಂತರದಲ್ಲಿ ಗೆಲ್ಲದಿದ್ದರೆ ಆರ್ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶ ಮಾಡಲಿದೆ.
ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್ಸಿಬಿಗೆ ವರದಾನ ಆಗುತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್