ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ
ಫೈನಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದ ಕೆಕೆಆರ್ ಟೀಮ್
ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 3ನೇ ಬಾರಿ ಚಾಂಪಿಯನ್ ಪಟ್ಟ
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಮುಕ್ತಾಯವಾಗಿದೆ. ಇಂದು ಚೆನ್ನೈನ ಎಂ.ಎ ಚಿದಂಬರಂ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2024ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ 3ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 18.3 ಓವರ್ನಲ್ಲಿ ಕೇವಲ 113 ರನ್ಗಳಿಗೆ ಆಲೌಟ್ ಆಗಿತ್ತು. ಏಡನ್ ಮರ್ಕ್ರಮ್ 20, ಪ್ಯಾಟ್ ಕಮಿನ್ಸ್ 24, ಬಿಟ್ಟರೆ ಮತೆಲ್ಲರೂ ಸಿಂಗಲ್ ಡಿಜಿಟ್ ನಂಬರ್ಗೆ ಔಟಾಗಿದ್ರು.
ಇನ್ನು, ಹೈದರಾಬಾದ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಕೆಕೆಆರ್ ಕೇವಲ 10.3 ಓವರ್ನಲ್ಲಿ 114 ರನ್ ಗಳಿಸೋ ಮೂಲಕ ಗೆದ್ದು ಬೀಗಿದೆ. ರಹ್ಮಾನುಲ್ಲಾ ಗುರ್ಬಾಜ್ 39 ರನ್ ಗಳಿಸಿದ್ರು. ವೆಂಕಟೇಶ್ ಅಯ್ಯರ್ 26 ಬಾಲ್ನಲ್ಲಿ 3 ಸಿಕ್ಸರ್, 4 ಫೋರ್ ಸಮೇತ 52 ರನ್ ಚಚ್ಚಿದ್ರು. ಶ್ರೇಯಸ್ ಅಯ್ಯರ್ 6 ರನ್ ಗಳಿಸಿ ಕೆಕೆಆರ್ ತಂಡವನ್ನು ಗೆಲ್ಲಿಸಿದ್ರು.
ಕೆಕೆಆರ್ ತಂಡದ ಪರ ಸ್ಟಾರ್ಕ್ 2, ಹರ್ಷಿತ್ ರಾಣಾ 2, ರಸ್ಸೆಲ್ 3, ವೈಭವ್, ಚಕ್ರವರ್ತಿ ಮತ್ತು ಸುನೀಲ್ ನರೈನ್ ತಲಾ 1 ವಿಕೆಟ್ ತೆಗೆದರು.
ಇದನ್ನೂ ಓದಿ: ಅಬ್ಬಬ್ಬಾ! IPL ಫೈನಲ್ ಗೆದ್ದವ್ರಿಗೆ ಇಷ್ಟು ಕೋಟಿನಾ? ಮತ್ತೆ ಆರ್ಸಿಬಿಗೆ ಸಿಗೋ ದುಡ್ಡೆಷ್ಟು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್