ಟಿ20 ವಿಶ್ವಕಪ್ ಟೂರ್ನಿಗೆ ಕೌಂಟ್ಡೌನ್ ಸ್ಟಾರ್ಟ್
ದ್ರಾವಿಡ್ ಅಂಡ್ ರೋಹಿತ್ಗೆ ಹೊಸ ಟೆನ್ಶನ್ ಟೆನ್ಶನ್
5 ದಿನ ಮಾತ್ರ ಬಾಕಿ.. ಪ್ರಿಪರೇಷನ್ ಶುರುವೇ ಆಗಿಲ್ಲ
ಟಿ20 ವಿಶ್ವಕಪ್ ಟೂರ್ನಿಗಾಗಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ನ್ಯೂಯಾರ್ಕ್ ತಲುಪಿದೆ. ಈ ಸಲನಾದರೂ ಕಪ್ ಗೆಲ್ಲಬೇಕು ಅನ್ನೋ ಮಹಾದಾಸೆಯಿಂದಲೇ ಅಮೆರಿಕಾಗೆ ಕಾಲಿಟ್ಟಿದೆ. ಟಿ20 ವಿಶ್ವಕಪ್ನ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದಲ್ಲಿ ಹೊಸ ಟೆನ್ಶನ್ ಶುರುವಾಗಿದೆ.

ವಿಶ್ವಕಪ್ ಅಂದಾಗಲೇ ನೆನಪಾಗೋದು ರೋಚಕ ಕ್ಷಣಗಳು. ವಿಶ್ವ ಕಿರೀಟ ಮುಡಿಗೇರಿಸಿಕೊಂಡ ತಂಡಗಳು, ಚಂಚಲೆಯನ್ನ ಒಲಿಸಿಕೊಳ್ಳಲು ನಡೆಸುವ ಆ ತಂಡಗಳ ಕಸರತ್ತು.. ಇಂಥ ವಿಶ್ವ ಸಮರಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಬರೋಬ್ಬರಿ 20 ತಂಡಗಳು ಪೂಪೋಟಿಗೆ ಇಳಿಯುತ್ತಿವೆ. ಕಪ್ ಗೆಲ್ಲೋ ನಿಟ್ಟಿನಲ್ಲಿ ದ್ವೀಪಕ್ಷೀಯ ಸರಣಿಗಳನ್ನಾಡುವುದರಲ್ಲಿ ಬ್ಯುಸಿಯಾಗಿವೆ. ಟೀಮ್ ಇಂಡಿಯಾ ಮಾತ್ರ, ಈಗಷ್ಟೇ ಐಪಿಎಲ್ ಮುಗಿಸಿ ಅಮೆರಿಕಾಗೆ ಕಾಲಿಟ್ಟಿದೆ.
ಇದನ್ನೂ ಓದಿ:ಕೊಡಲಿಯಿಂದ ಕೊಚ್ಚಿ ಅಪ್ಪ-ಅಮ್ಮ, ಹೆಂಡತಿ, ಮಗು ಸೇರಿ ಒಂದೇ ಕುಟುಂಬ 8 ಮಂದಿಯ ಬರ್ಬರ ಹತ್ಯೆ
2 ತಿಂಗಳ ಕಾಲ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಟೀಮ್ ಇಂಡಿಯಾ ಆಟಗಾರರು, ಟಿ20 ವಿಶ್ವಕಪ್ ಗೆಲುವಿನ ಕನವರಿಕೆಯಲ್ಲಿ ಅಮೆರಿಕಾದಲ್ಲಿ ತಲುಪಿದ್ದಾರೆ. ನ್ಯೂಯಾರ್ಕ್ಗೆ ಬಂದಿಳಿದಿರುವ ದ್ರಾವಿಡ್ ಆ್ಯಂಡ್ ರೋಹಿತ್ಗೆ ಹೊಸ ಟೆನ್ಶನ್ ಶುರುವಾಗಿದೆ.
5 ದಿನ ಮಾತ್ರ ಬಾಕಿ.. ಶುರುವಾಗಿಲ್ಲ ಪ್ರಿಪರೇಷನ್
ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಅಮೆರಿಕಾಗೆ ಕಾಲಿಟ್ಟಿದೆ. ಟಿ20 ವಿಶ್ವಕಪ್ ಆರಂಭಕ್ಕೆ ಜಸ್ಟ್ 5 ದಿನಗಳಷ್ಟೇ ಬಾಕಿ ಇದೆ. ಉಳಿದೆಲ್ಲಾ ಟೀಮ್ಸ್, ಟಿ20 ವಿಶ್ವಕಪ್ಗೆ ಅಂತಾನೇ ಬ್ಲೂಪ್ರಿಂಟ್ ರೆಡಿ ಮಾಡಿಕೊಂಡಿವೆ. ಬೇಟೆಗೆ ಹೊಂಚು ಹಾಕಿ ಕುಳಿತಿವೆ. ಆದ್ರೆ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಇಂಡಿಯಾ, ಇನ್ನು ಪ್ರಿಪರೇಷನ್ ಶುರುಮಾಡಿಲ್ಲ. ಕೆಲ ಆಟಗಾರರು ಇನ್ನು ಟೀಮ್ ಸೇರಿಕೊಂಡಿಲ್ಲ. ಇದು ಹಲವು ಗೊಂದಲಗಳ ಹುಟ್ಟಿಗೆ ಕಾರಣವಾಗ್ತಿದೆ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?
ಒಂದೇ ಅಭ್ಯಾಸ ಪಂದ್ಯ.. ಕಂಡೀಷನ್ಸ್ಗೆ ಒಗ್ಗಿಕೊಳ್ಳಬೇಕು..!
ಜೂನ್ 5ರಂದು ಟೀಮ್ ಇಂಡಿಯಾದ ಅಭಿಯಾನ ಶುರುವಾಗುತ್ತೆ. ಇದಕ್ಕೂ ಮುನ್ನ ಜೂನ್1 ರಂದು ಬಾಂಗ್ಲಾ ಎದುರು ಒಂದೇ ಒಂದು ಅಭ್ಯಾಸ ಪಂದ್ಯವನ್ನಷ್ಟೇ ಆಡಲಿದೆ. ಸದ್ಯ ತಂಡದಲ್ಲಿರುವ ಹಲವು ಆಟಗಾರರಿಗೆ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಕಂಡೀಷನ್ಸ್ನಲ್ಲಿ ಆಡಿದ ಅನುಭವವೇ ಇಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಕಂಡೀಷನ್ಸ್ ಭಾರತೀಯ ಹವಾಮಾನಕ್ಕೆ ತದ್ವಿರುದ್ಧ. ಹೀಗಾಗಿ ಈ ವಾತಾವರಣಕ್ಕೆ ಒಗ್ಗಿಕೊಳ್ಳುವ ಚಾಲೆಂಜ್. ಟೀಮ್ ಇಂಡಿಯಾ ಆಟಗಾರರಿಗೆ ಇದೆ. 8 ದಿನ ಮುಂಚೆ ಅಮೆರಿಕಾಗೆ ಕಾಲಿಟ್ಟಿರುವ ಆಟಗಾರರು ಈ ವಾತವಾರಣಕ್ಕೆ ಎಷ್ಟರ ಮಟ್ಟಿಗೆ ಒಗ್ಗಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕಾಡ್ತಿದೆ.
ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ಫಾರ್ಮ್ನಲ್ಲಿಲ್ಲ ತಂಡದಲ್ಲಿರುವ ಹಲವು ಆಟಗಾರರು
ಕೆಲ ಆಟಗಾರರು ಇನ್ನು ನ್ಯೂಯಾರ್ಕ್ ಫ್ಲೈಟ್ ಹತ್ತಿಲ್ಲ ಅನ್ನೋ ಚಿಂತೆಯಾದ್ರೆ. ಮತ್ತೊಂದೆಡೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಹಲವರ ಪ್ರದರ್ಶನ ಕುಸಿದಿದೆ. ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ, ಆರ್ಶ್ದೀಪ್, ಕುಲ್ದೀಪ್ ಯಾದವ್ ಬಿಟ್ಟರೆ, ಉಳಿದೆಲ್ಲ ಆಟಗಾರರು ಪರದಾಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಫಾರ್ಮ್ನಲ್ಲಿ ಇಲ್ಲ. ಸಂಜು ಫಾರ್ಮ್ನಲ್ಲಿದ್ದರೂ, ಚಾಲೆಂಜಿಂಗ್ ಕಂಡೀಷನ್ಸ್ನಲ್ಲಿ ಕೈಕೊಟ್ಟಿದ್ದಾರೆ. ಈಗ ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿದೆ.
ಆಟಗಾರರ ಸ್ಲಾಟ್ ಬಗ್ಗೆಯೂ ಇಲ್ಲ ಕ್ಲಾರಿಟಿ..!
ವಿಶ್ವಕಪ್ ಬರುತ್ತೆ ಅಂದ್ರೆ ವರ್ಷಕ್ಕೂ ಮಂಚೇನೆ ಟೀಮ್ ಸಿದ್ಧವಾಗಿರುತ್ತೆ.. ಯಾವ್ ಸ್ಲಾಟ್ಗೆ ಯಾರನ್ನ ಫಿಕ್ಸ್ ಮಾಡಬೇಕು? ಮಿಡಲ್ ಆರ್ಡರ್, ಆಲ್ರೌಂಡರ್ಸ್, ಸ್ಪಿನ್ನರ್, ಫಾಸ್ಟ್ ಬೌಲರ್ಸ್ ಹೀಗೆ ಎಲ್ಲಾ ಸ್ಲಾಟ್ಗಳಲ್ಲಿ ಇಂತಹ ಆಟಗಾರರೇ ಫಿಕ್ಸ್ ಅಂತ ರೆಡಿಯಾಗಿರಬೇಕು. ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಸ್ಲಾಟ್ವೊಂದು ಬಿಟ್ಟರೆ, ಉಳಿದ್ಯಾವ ಸ್ಲಾಟ್ಗೂ ಯಾವೊಬ್ಬ ಫಿಕ್ಸ್ ಆಗಿಲ್ಲ. ಹೀಗಾಗಿ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಆಯ್ಕೆ ನಿಜಕ್ಕೂ ಕೋಚ್ ಆ್ಯಂಡ್ ಕ್ಯಾಪ್ಟನ್ಗೆ ಸವಾಲಾಗಿದೆ.
ಕೋರ್ ಟೀಮ್ ಇಲ್ಲ.. ಇದು ಸೆಟ್ ಬ್ಯಾಕ್ ಆಗುತ್ತಾ?
ಟಿ20 ವಿಶ್ವಕಪ್ಗೆ ಪ್ರಕಟವಾಗಿರುವ ಟೀಮ್ ಇಂಡಿಯಾದಲ್ಲಿ ಕೋರ್ ಗ್ರೂಪ್ ಇಲ್ಲ. ಯಾಕಂದ್ರೆ ಅರ್ಧ ಮಂದಿ ಏಕದಿನ ಫಾರ್ಮೆಟ್ನಲ್ಲಿ ಬ್ಯುಸಿಯಾಗಿದ್ದ ಆಟಗಾರರು ಆಗಿದ್ರೆ ಕೆಲ ಆಟಗಾರರು ಟಿ20ಗೆ ಮಾತ್ರವೇ ಸೀಮಿತವಾಗಿದ್ರು. ಈ ಪೈಕಿ ರೋಹಿತ್, ವಿರಾಟ್ ಕೊಹ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಟಿ20ಗೆ ವಾಪಾಸ್ ಆಗಿದ್ರು. ಬೂಮ್ರಾ ಕೂಡ ಐರ್ಲೆಂಡ್ ಸರಣಿಯೇ ಲಾಸ್ಟ್. ಇಂಜುರಿಯಿಂದ ದೂರವಾಗಿದ್ದ ಹಾರ್ದಿಕ್, ಐಪಿಎಲ್ ಬಳಿಕ ಆಡ್ತಿರೋ ಫಸ್ಟ್ ಟಿ20 ಮ್ಯಾಚ್. ಪಂತ್ ಕೂಡ ಇದೇ ಲಿಸ್ಟ್ನಲ್ಲಿದ್ದಾರೆ.
ಇದನ್ನೂ ಓದಿ:ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!
ವಿಶ್ವಕಪ್ ತಂಡದಲ್ಲಿರೋ ಆಟಗಾರರು ಮಹತ್ವದ ಟೂರ್ನಿಗೂ ಮುನ್ನ ಒಟ್ಟಾಗಿ ಒಂದೇ ಒಂದು ಟಿ20 ಸರಣಿಯನ್ನೂ ಆಡಿಲ್ಲ. ಇದ್ರಿಂದ ತಂಡದಲ್ಲಿ ಸಮನ್ವಯತೆಯ ಕೊರತೆ ಕಾಡುವ ಪ್ರಶ್ನೆಯೂ ಇದೆ. ಒಟ್ಟಿನಲ್ಲಿ, ಟಿ20 ವಿಶ್ವಕಪ್ ಗೆಲ್ಲಲು ಹೊರಟಿರುವ ದ್ರಾವಿಡ್ ಆ್ಯಂಡ್ ರೋಹಿತ್ ಮುಂದೆ, ಸಾಲು ಸಾಲು ಸವಾಲುಗಳಿದ್ದು, ಇವಕ್ಕೆಲ್ಲಾ ಹೇಗೆ ಪರಿಹಾರ ಕಂಡುಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್