ಟೀಮ್ ಇಂಡಿಯಾದ ಆಟಗಾರರಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಬಿಸಿಸಿಐ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್?
ಗಂಭೀರ್ಗೆ ಪೈಪೋಟಿ ನೀಡ್ತಾರಾ ಆರ್ಸಿಬಿ ಮಾಜಿ ಕ್ರಿಕೆಟರ್..?
ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಗೂ ಮುಗಿದಿದೆ. ಈ ವರ್ಷ ಮೆಂಟರ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ತಂಡವು 3ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದೆ. ಸದ್ಯ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ತಂಡದ ಆಟಗಾರರು ತಯಾರಿಯಲ್ಲಿ ತೊಡಗಿದ್ದು, ಬಿಸಿಸಿಐ ಬಿಗ್ ಸರ್ಪ್ರೈಸ್ ಕೊಟ್ಟಿದೆ.
ಹೌದು, ರಾಹುಲ್ ದ್ರಾವಿಡ್ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಖಚಿತ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಕ್ರಿಕ್ಬಜ್ ವರದಿ ಪ್ರಕಾರ ಬಿಸಿಸಿಐ ಪ್ರಧಾನಿ ಕಾರ್ಯದರ್ಶಿ ಜಯ್ ಶಾ ಅವರು ಗೌತಮ್ ಗಂಭೀರ್ ಅವರೊಂದಿಗೆ ಮಾತಾಡಿದ್ದು ದೇಶಕ್ಕಾಗಿ ನಾವು ಈ ಕೆಲಸ ಮಾಡಲೇಬೇಕು ಎಂದು ನಿರ್ಧಾರ ಬಂದಿದ್ದಾರಂತೆ. ಹಾಗಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಸದ್ಯದಲ್ಲೇ ಗೌತಮ್ ಗಂಭೀರ್ ಹೆಸರು ಅನೌನ್ಸ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಇನ್ನು, ಹೀಗಿರುವಾಗಲೇ ಆರ್ಸಿಬಿ ಮಾಜಿ ಪ್ಲೇಯರ್ ಎಬಿ ಡಿವಿಲಿಯರ್ಸ್ ಕೂಡ ಟೀಮ್ ಇಂಡಿಯಾದ ಹೆಡ್ ಕೋಚ್ ಆಗ್ತಾರಾ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎಬಿಡಿ, ನನಗೆ ಟೀಮ್ ಇಂಡಿಯಾಗೆ ಕೋಚಿಂಗ್ ಮಾಡೋಕೆ ಇಷ್ಟಾನೆ. ಆದ್ರೆ, ನಾನು ಇನ್ನೂ ಒಂದಷ್ಟು ಕಲಿಯಬೇಕು. ಎಲ್ಲವೂ ಸಂಪೂರ್ಣವಾಗಿ ಕಲಿತ ಮೇಲೆ ನಾನು ಒಂದು ತಂಡದ ಕೋಚ್ ಆಗುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಬಿಸಿಸಿಐನಿಂದ ಬಿಗ್ ಸರ್ಪ್ರೈಸ್.. ಟೀಂ ಇಂಡಿಯಾ ಹೊಸ ಕೋಚ್ ಆಗಿ ಗೌತಮ್ ಗಂಭೀರ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ