2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಆರ್ಸಿಬಿ ಮಾಜಿ ಕ್ಯಾಪ್ಟನ್ ಕೊಹ್ಲಿ
ಮತ್ತೆ ಆರ್ಸಿಬಿ ಮತ್ತು ಕೊಹ್ಲಿ ಕಾಲೆಳೆದ ಮಾಜಿ ಕ್ರಿಕೆಟರ್ ರಾಯುಡು
ವಿರಾಟ್ ಬಗ್ಗೆ ಮಾತಾಡಿದ ಅಂಬಾಟಿ ರಾಯುಡುಗೆ ಫುಲ್ ಕ್ಲಾಸ್!
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಕೆಣಕಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಅವರನ್ನು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈದರಾಬಾದ್ ವಿರುದ್ಧ ಕೆಕೆಆರ್ ಫೈನಲ್ ಪಂದ್ಯದಲ್ಲಿ ಗೆದ್ದ ಕೂಡಲೇ ಮಾತಾಡಿದ್ದ ಅಂಬಾಟಿ ರಾಯುಡು, ಶ್ರೇಯಸ್ ಅಯ್ಯರ್ಗೆ ಅಭಿನಂದನೆಗಳು. ಆರೆಂಜ್ ಕ್ಯಾಪ್ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೀಯಾಳಿಸಿದ್ದರು. ಈ ಬಗ್ಗೆ ಮಾತಾಡಿರೋ ಅಂಬಾಟಿ ರಾಯುಡು ವಿರುದ್ಧ ಕಿಡಿಕಾರಿದ್ದಾರೆ.
ಕೊಹ್ಲಿ ಬಾರಿಸಿರೋ ಶತಕದಷ್ಟು ನೀನು ಅಂತರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ನೀನು ಕೊಹ್ಲಿ ಬಗ್ಗೆ ಮಾತಾಡ್ತೀಯ. ಕ್ರಿಕೆಟ್ನಲ್ಲಿ ನೀನು ಬಚ್ಚಾ ಎಂದು ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಇನ್ನು, 2024ರ ಐಪಿಎಲ್ ಸೀಸನ್ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ.
ಇದನ್ನೂ ಓದಿ: ‘ನೀನೊಬ್ಬ ಜೋಕರ್’- ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಕೆವಿನ್ ಪೀಟರ್ಸನ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ