ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಪ್ರೀ ವೆಡ್ಡಿಂಗ್ ಬಲು ಜೋರು
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್ ಸಮಾರಂಭ
ಇಟಲಿಯ ಕ್ರೂಸ್ನಲ್ಲಿ ನಡೆಯುತ್ತಿರುವ ಪ್ರೀ ವೆಡ್ಡಿಂಗ್ಗೆ ಸ್ಟಾರ್ ಗಣ್ಯರ ದೌಡು
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ 2ನೇ ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಇಟಲಿಯಲ್ಲಿ ನಡೆಯುತ್ತಿದೆ. ಈಗಾಗಲೇ ಬಾಲಿವುಡ್ ಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಅಂಬಾನಿ ಕುಟುಂಬದ ಆತ್ಮೀಯರು ಕ್ರೂಸ್ನಲ್ಲಿ ನಡೆಯುತ್ತಿರುವ ಅದ್ಧೂರಿ ಪ್ರೀ ವೆಡ್ಡಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಎಣ್ಣೆ ಹೊಡೆದು ಸ್ಟಾರ್ ಹೀರೋಯಿನ್ ಜತೆ ಬಾಲಯ್ಯ ಅಸಭ್ಯ ವರ್ತನೆ.. ಈ ಬಗ್ಗೆ ನಟಿ ಅಂಜಲಿ ಏನಂದ್ರು?
ಇದೀಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ 2ನೇ ಪ್ರೀ-ವೆಡ್ಡಿಂಗ್ ನಡೆಯುತ್ತಿದೆ. ಅತ್ತ ಬೃಹತ್ ಮದುವೆಗೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿರುವಾಗಲೇ, ಇತ್ತ ಪ್ರೀ ವೆಡ್ಡಿಂಗ್ನಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳಿಗೆ ಎಷ್ಟೇಷ್ಟು ಹಣ ಕೊಡಲಾಗಿದೆ ಅಂತ ಸಾಕಷ್ಟು ಜನರಲ್ಲಿ ಕುತೂಹಲ ಮನೆ ಮಾಡಿದೆ.
View this post on Instagram
ಇದನ್ನೂ ಓದಿ: ಅನಂತ್ ಅಂಬಾನಿ, ರಾಧಿಕಾ ಮದ್ವೆ ಆಮಂತ್ರಣ ಪತ್ರಿಕೆ ರಿಲೀಸ್; ಅತಿಥಿಗಳಿಗೆ ಸ್ಪೆಷಲ್ ಡ್ರೆಸ್ ಕೋಡ್ ಕಡ್ಡಾಯ
ಇದರ ಮಧ್ಯೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ 2ನೇ ಪ್ರಿ-ವೆಡ್ಡಿಂಗ್ಗೆ ಜನಪ್ರಿಯ ಅಮೇರಿಕನ್ ಬ್ಯಾಂಡ್ ಬ್ಯಾಕ್ಸ್ಟ್ರೀಟ್ ಬಾಯ್ಸ್ ಕ್ರೂಸ್ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಇಟಲಿಯಲ್ಲಿ ಕ್ರೂಸ್ನಲ್ಲಿ ಅತಿಥಿಗಳಿಗಾಗಿ ಅವರು ಪ್ರದರ್ಶನ ನೀಡಿದ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಿಕ್ ಕಾರ್ಟರ್, ಹೋವಿ ಡೊರೊ, ಬ್ರಿಯಾನ್ ಲಿಟ್ರೆಲ್, ಎಜೆ ಮೆಕ್ಲೀನ್ ಮತ್ತು ಕೆವಿನ್ ರಿಚರ್ಡ್ಸನ್ರನ್ನು ಒಳಗೊಂಡ ಬ್ಯಾಂಡ್, ಬಿಳಿ ಬಟ್ಟೆಗಳನ್ನು ಧರಿಸಿ ಸಾಕಷ್ಟು ಗಣ್ಯರ ನಡುವೆ ಜನಪ್ರಿಯ ಟ್ರ್ಯಾಕ್ ‘ಐ ವಾಂಟ್ ಇಟ್ ದಟ್ ವೇ’ ಅನ್ನು ಪ್ರದರ್ಶನ ನೀಡಿದ್ದಾರೆ. ಸದ್ಯ 2 ಪ್ರೀ ವೆಡ್ಡಿಂಗ್ನಲ್ಲಿ ಕಾರ್ಯಕ್ರಮ ಪ್ರದರ್ಶನ ನೀಡಿದ್ದಕ್ಕೆ ಅಮೇರಿಕನ್ ಬ್ಯಾಂಡ್ ಬ್ಯಾಕ್ಸ್ಟ್ರೀಟ್ ಬಾಯ್ಸ್ಗೆ ಬರೋಬ್ಬರಿ 5 ರಿಂದ 7 ಕೋಟಿಯವರೆಗೆ ಹಣ ಸುರಿದಿದ್ದಾರೆ ಎಂದು ಹೇಳಲಾಗಿದೆ. ಜುಲೈ 12ರಂದು ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ