ಯುಎಸ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್
ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಸೆಣಸಾಟ
ಭಾರತ, ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯದ ಮೇಲೆ ಎಲ್ಲರ ಕಣ್ಣು..!
ಯುಎಸ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಈಗಾಗಲೇ ಶುರುವಾಗಿದೆ. ಭಾರತ ತಂಡ ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ 2024ರ ಟಿ20 ವಿಶ್ವಕಪ್ ಅಭಿಯಾನ ಶುರು ಮಾಡಲಿದೆ. ನಂತರ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಉಭಯ ತಂಡಗಳು ಭಾರೀ ತಯಾರಿ ನಡೆಸಿಕೊಂಡಿವೆ. ಅದರಲ್ಲೂ ಪಾಕ್ ವಿರುದ್ಧ ಗೆಲ್ಲಲು ಟೀಮ್ ಇಂಡಿಯಾದ ದೊಡ್ಡ ಬ್ರಹ್ಮಾಸ್ತ್ರ ಕೊಹ್ಲಿ ಆಗಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತಾಡಿದ ಪಾಕ್ ಕ್ಯಾಪ್ಟನ್ ಬಾಬರ್ ಅಜಂ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಮಾತಾಡಲು ಹೆಚ್ಚು ವಿಷಯಗಳಿವೆ. ಜಗತ್ತಿನಲ್ಲಿ ಎಲ್ಲಿಗೆ ಹೋದ್ರೂ ಈ ಬಗ್ಗೆ ಚರ್ಚೆ ಮಾಡುತ್ತಾರೆ. ಎಲ್ಲರೂ ಈ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಸ್ವಾಭಾವಿಕವಾಗಿ ಎರಡು ತಂಡಗಳಿಗೂ ಒತ್ತಡಗಳು ಇರುತ್ತವೆ. ನಾವು ಗಮನದಲ್ಲಿ ಇಡಬೇಕಾದ ವಿಷಯ ಕ್ರಿಕೆಟ್ ಆಡಬೇಕು ಎಂಬುದು. ಇದು ಯಾವಾಗಲೂ ಒತ್ತಡದ ಪಂದ್ಯ. ಕೊಹ್ಲಿ ಕ್ರೀಸ್ನಲ್ಲಿ ಇರೋವರೆಗೂ ನಮಗೆ ಭಯ ಇದ್ದೇ ಇರುತ್ತೆ. ಅವರನ್ನು ಹೇಗೆ ಔಟ್ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: VIDEO: ಕೊಹ್ಲಿಗಾಗಿ ಕಾದು ಕಾದು ಸೆಲ್ಫಿ ತೆಗೆಸಿಕೊಂಡ ಯುಎಸ್ ಪೊಲೀಸ್ ಅಧಿಕಾರಿ.. ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್