ನೀಟ್ ಎಕ್ಸಾಂಗೆ ಎಷ್ಟು ಸಾವಿರ ವಿದ್ಯಾರ್ಥಿಗಳು ಹಾಜರಾಗಿಲ್ಲ..?
ಟಾಪ್ 100 ವಿದ್ಯಾರ್ಥಿಗಳ ಪೈಕಿ ರಾಜ್ಯದ 6 ಜನ ಮೊದಲ ಸ್ಥಾನ
ಈ ಬಾರಿ ಎಷ್ಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ರು?
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ನೀಟ್ 2024 ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದ್ದು ಕರ್ನಾಟಕದ 6 ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನ ಪಡೆದುಕೊಂಡಿದ್ದಾರೆ. ದೇಶದಲ್ಲಿ ಟಾಪ್ 100 ವಿದ್ಯಾರ್ಥಿಗಳ ಲಿಸ್ಟ್ನಲ್ಲಿ ರಾಜ್ಯದ 6 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.
ನೀಟ್ ಬರೆದ ವಿದ್ಯಾರ್ಥಿಗಳ ಪೈಕಿ ಆಲ್ ಇಂಡಿಯಾ ರ್ಯಾಂಕ್- 1ಅನ್ನು 720 ಅಂಕಗಳಿಗೆ 720 ಅಂಕ ಪಡೆಯುವ ಮೂಲಕ ಅರ್ಜುನ್ ಕಿಶೋರ್ ಎನ್ನುವ ವಿದ್ಯಾರ್ಥಿ ಸಾಧನೆ ಮಾಡಿದ್ದಾರೆ. ಇಡೀ ದೇಶಕ್ಕೆ ಅರ್ಜುನ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳಾದ ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್, ಅರ್ಜುನ್ ಕಿಶೋರ್, ಪದ್ಮನಾಭ್ ಮೆನನ್, ಪ್ರಜ್ಞಾ ಪಿ.ಶೆಟ್ಟಿ, ಖುಷಿ ಮಗನೂರ್ ಎಂಬ ವಿದ್ಯಾರ್ಥಿಗಳು ಟಾಪ್ 100ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಶೇ.99.98 ಅಂಕಗಳನ್ನು ಗಳಿಸುವ ಮೂಲಕ ಟಾಪರ್ ಎನಿಸಿಕೊಂಡಿದ್ದಾರೆ. ಇನ್ನು ನೀಟ್ ರಿಸಲ್ಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಬಿಡುಗಡೆ ಮಾಡಿದ್ದು ಪರೀಕ್ಷೆ ಬರೆದ 24 ಲಕ್ಷ ಅಭ್ಯರ್ಥಿಗಳು ಎನ್ಟಿಎ ನೀಟ್ ಪೋರ್ಟಲ್ನಲ್ಲಿ ಲಾಗಿನ್ ಆಗುವ ಮೂಲಕ ಚೆಕ್ ತಮ್ಮ ರಿಸಲ್ಟ್ ಪರಿಶೀಲನೆ ಮಾಡಬಹುದಾಗಿದೆ.
ದೇಶದಾದ್ಯಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆಯನ್ನು ಮೇ 05 ರಂದು 13 ಭಾಷೆಗಳಲ್ಲಿ ನಡೆಸಲಾಗಿತ್ತು. ದೇಶದ 571 ನಗರಗಳು ಹಾಗೂ ಹೊರಗಿನ 14 ನಗರಗಳು ಸೇರಿದಂತೆ ಒಟ್ಟು 4,750 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ಬರೆಯಲು ಒಟ್ಟು 24,06,079 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
ಇದನ್ನೂ ಓದಿ: ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?
ಇದರಲ್ಲಿ 23,33,297 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 72,782 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇದರಲ್ಲಿ 10,29,154 ವಿದ್ಯಾರ್ಥಿಗಳು, 13,76,831 ವಿದ್ಯಾರ್ಥಿನಿಯರು ಹಾಗೂ 18 ಮಂದಿ ತೃತೀಯ ಲಿಂಗಿಗಳು ಪರೀಕ್ಷೆಯನ್ನು ಬರೆದಿದ್ದರು. ಸದ್ಯ ರಿಸಲ್ಟ್ ಬಿಡುಗಡೆ ಮಾಡಲಾಗಿದ್ದು ಎಕ್ಸಾಂ ಬರೆದು ವಿದ್ಯಾರ್ಥಿಗಳು ವೆಬ್ಸೈಟ್ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಣೆ ಮಾಡಬಹುದು. ಇನ್ನೂ ಉತ್ತರ ಪತ್ರಿಕೆಗಳ ಮರುಪರಿಶೀಲನೆ ಅಥವಾ ಮರು ಮೌಲ್ಯಮಾಪನಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ