ವಿರಾಟ್ ಪಾಲಿಗೆ ಶಾಹೀನ್ ಆಫ್ರಿದಿ ಕೂಡ ಅಪಾಯ ಆಗುತ್ತಾರಾ?
ಕೊಹ್ಲಿಯ ವಿಕೆಟ್ ಬೇಟೆಗೆ ಟೊಂಕ ಕಟ್ಟಿ ನಿಂತ ಪಾಕ್ ಬೌಲರ್ಸ್
ಮೋಸ್ಟ್ ಡೇಂಜರಸ್ ಬೌಲರ್ ಆಗಿರುವ ಮೊಹಮ್ಮದ್ ಅಮಿರ್
ಇಂಡೋ-ಪಾಕ್ ತಂಡಗಳಲ್ಲಿ ಗೆಲ್ಲೋ ಕುದುರೆ ಯಾವುದು ಅನ್ನೋ ಚರ್ಚೆಗಳೂ ಜೋರಾಗಿವೆ. ಶತಯ ಗತಾಯ ಗೆಲ್ಲೋಕೆ ಪಣ ತೊಟ್ಟಿವೆ. ಆದ್ರೆ, ಇದೆಲ್ಲದರ ನಡುವೆ ಕಿಂಗ್ ಕೊಹ್ಲಿ ವರ್ಸಸ್ ಪಾಕ್ ಬೌಲರ್ಗಳ ಬ್ಯಾಟಲ್ನಿಂದ ಪಂದ್ಯದ ಕಾವು ಮತ್ತಷ್ಟು ಹೆಚ್ಚಾಗಿದೆ.
ಇಂಡೋ-ಪಾಕ್ ಪಂದ್ಯ ಅಂದ್ರೆ, ಒಂದು ಮಹಾಯುದ್ಧ, ಕ್ರಿಕೆಟ್ ದುನಿಯಾದ ಅತಿ ದೊಡ್ಡ ಕಾಳಗ. ಉಭಯ ದೇಶಗಳ ಈ ಪ್ರತಿಷ್ಠೆಯ ಕದನಕ್ಕೆ ಇಡೀ ಜಗತ್ತೇ ಕಾದು ಕುಳಿತಿರುತ್ತೆ.. ಪ್ರತಿಷ್ಠೆಯ ಪಂದ್ಯ ಗೆಲ್ಲಲು ಇನ್ನಿಲ್ಲದ ಕಸರತ್ತೇ ನಡೆಯುತ್ತೆ. ಬ್ಯಾಟ್ ಹಾಗೂ ಬಾಲ್ ನಡುವಿನ ಬ್ಯಾಟಲ್ ಜೊತೆಗೆ ಜಿದ್ದಾಜಿದ್ದಿನ ಹೋರಾಟ ಫ್ಯಾನ್ಸ್ಗೆ ಭರಪೂರ ಮನರಂಜನೆಯನ್ನೇ ನೀಡುತ್ತೆ. ಅಂಥಹ ರೋಚಕ ಬ್ಯಾಟಲ್, ಈ ಬಾರಿಯ ಟಿ20 ವಿಶ್ವಕಪ್ನಲ್ಲೂ ನಡೆಯಲಿದೆ. ಅದು ಕೂಡ ಕಿಂಗ್ ಕೊಹ್ಲಿ ವರ್ಸಸ್ ಪಾಕ್ನ ಪೇಸರ್ಗಳ ನಡುವೆ ಅನ್ನೋದು ವಿಶೇಷ.
ಇದನ್ನೂ ಓದಿ: ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?
ಕೊಹ್ಲಿ ಮೇಲೆ ಪಾಕ್ ಪೇಸರ್ಗಳ ಕಣ್ಣು..!
ಟಿ20 ವಿಶ್ವಕಪ್ ಅಖಾಡದಲ್ಲಿ ವಿರಾಟ್, ವೀರಾವೇಶ ನಡೆಸಲು ಸನ್ನದ್ಧರಾಗಿದ್ದಾರೆ. ಟೀಮ್ ಇಂಡಿಯಾಗೆ ಗೆಲುವಿನ ವಿಜಯದ ಮಾಲೆ ತೊಡಿಸುವ ಲೆಕ್ಕಚಾರದಲ್ಲಿದ್ದಾರೆ. ಆದ್ರೆ, ವಿರಾಟ್ ವೀರಾವೇಶಕ್ಕೆ ಬ್ರೇಕ್ ಹಾಕಲು ಪಾಕ್ ಪೇಸರ್ಗಳು ತೊಡೆತಟ್ಟಿ ನಿಂತಿದ್ದಾರೆ. ವಿರಾಟ್ ರನ್ ಓಟಕ್ಕೆ ಕಡಿವಾಣ ಹಾಕಲು ಶಪಥ ಗೈದಿದ್ದಾರೆ. ಅಂದ್ಹಾಗೆ ಆ ಪೇಸರ್ಗಳು ಬೇರ್ಯಾರು ಅಲ್ಲ, ಮೊಹಮ್ಮದ್ ಅಮಿರ್ ಆ್ಯಂಡ್ ಶಾಹೀನ್ ಶಾ ಆಫ್ರಿದಿ.
ಟಿ20 ವಿಶ್ವಕಪ್ ಅಂದ್ರೆ, ವೀರ ಸೈನಿಕನಂತೆ ವಿರಾಟ್ ಹೋರಾಡ್ತಾರೆ. ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸ್ತಾರೆ. ಪಾಕ್ ಎದುರಿನ ಹೈಪ್ರಷರ್ ಗೇಮ್ ಅಂದ್ರೆ, ಮುಗೀತು ವಿರಾಟ್ ಆರ್ಭಟ ಮತ್ತಷ್ಟು ಜೋರಾಗಿರುತ್ತೆ. ಇಂಥಹ ವೀರ ಸೇನಾನಿಗೆ ಈಗ ಟಕ್ಕರ್ ನೀಡಲು ಪಾಕ್, ಎಡಗೈ ವೇಗಿಗಳಾದ ಮೊಹಮ್ಮದ್ ಅಮಿರ್, ಶಾಹೀನ್ ಶಾ ಆಫ್ರಿದಿ ಮೊರೆ ಹೋಗಿದೆ.
ಶಾಹೀನ್-ಅಮಿರ್ಗೆ ವಿರಾಟ್ ಕೊಹ್ಲಿಯೇ ಟಾರ್ಗೆಟ್
ವಿರಾಟ್ ಕೊಹ್ಲಿ ಅಪ್ರತಿಮ ಬ್ಯಾಟರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಬ್ಯಾಟರ್ಗೆ ಎಡಗೈ ಬೌಲರ್ಗಳ ಎದುರು ಕೊಹ್ಲಿ ಪರದಾಡಿದ್ದೇ ಹೆಚ್ಚು. ಇಂಟ್ರೆಸ್ಟಿಂಗ್ ಅಂದ್ರೆ, 3 ಫಾರ್ಮೆಟ್ನಿಂದ 102 ಬಾರಿ ಲೆಫ್ಟಿ ಪೇಸರ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇದೇ ಕಾರಣಕ್ಕೆ ಎಡಗೈ ಪೇಸರ್ಗಳಾದ ಶಾಹೀನ್ ಶಾ, ಮೊಹಮ್ಮದ್ ಅಮಿರ್, ವಿರಾಟ್ ಕೊಹ್ಲಿಯ ವಿಕೆಟ್ ಬೇಟೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಮೋಸ್ಟ್ ಡೇಂಜರಸ್ ಬೌಲರ್ ಆಗಿರುವ ಮೊಹಮ್ಮದ್ ಅಮಿರ್, ಪೇಸ್ ಜೊತೆಗೆ ಸ್ವಿಂಗ್ ಮಾಡುವಲ್ಲೂ ನಿಸ್ಸೀಮ. 145ರ ವೇಗದಲ್ಲಿ ಚೆಂಡನ್ನ ಎಸೆಯೋ ಅಮಿರ್, ಕೊಹ್ಲಿಗೆ ಕಂಟಕವಾದರು ಅಚ್ಚರಿ ಇಲ್ಲ. ಇವ್ರೇ ಅಲ್ಲ, ಪಾಕ್ನ ಡೆಡ್ಲಿ ಬೌಲರ್ ಶಾಹೀನ್ ಆಫ್ರಿದಿ ಕೂಡ ವಿರಾಟ್ ಪಾಲಿಗೆ ಅಪಾಯವಾಗಬಲ್ಲರು ಅನ್ನೋದನ್ನ ಮರೆಯುವಂತಿಲ್ಲ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಪ್ರಯಾಣಿಸ್ತಿದ್ದ ಕಾರು ಅಪಘಾತ.. ಕಲಬುರಗಿಯಲ್ಲಿ ಕಾಲುವೆಗೆ ಪಲ್ಟಿ ಹೊಡೆದ ವಾಹನ
ಪಾಕ್ ಎದುರು ಅಬ್ಬರಿಸುವುದೊಂದೇ ಕೊಹ್ಲಿ ಗುರಿ!
ಪಾಕ್ನ ಶಾಹೀನ್ ಆಫ್ರಿದಿ, ಮೊಹಮ್ಮದ್ ಅಮಿರ್ ಡೇಂಜರಸ್ ಬೌಲರ್ಗಳು ನಿಜ. ಇವರಿಬ್ಬರ ಡೆಡ್ಲಿ ದಾಳಿಗೆ ಸಿಲುಕಿದ್ರೆ, ಎಂಥಹವರೇ ಆಗಲಿ ಪಲ್ಟಿ ಹೊಡೆಯಬೇಕಾಗತ್ತೆ. ಆದ್ರೆ, ವಿರಾಟ್ ಕೊಹ್ಲಿ ಪಾಲಿಗೆ ಇವರಿಬ್ಬರು ಲೆಕ್ಕಕ್ಕಿಲ್ಲ. ಇನ್ಫ್ಯಾಕ್ಟ್_ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬೆರೆದಿರುವ ವಿರಾಟ್, ಇವರಿಬ್ಬರ ಮೇಲೆ ದಂಡಯಾತ್ರೆ ನಡೆಸೋದು ಪಕ್ಕಾ.
ವಿರಾಟ್ ವೀರಾವೇಶಕ್ಕೆ ಕಡಿವಾಣ ಹಾಕಲು ಎಡಗೈ ಮಿಸೈಲ್ಗಳನ್ನ ಪಾಕ್, ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿದೆ. ಆದ್ರೆ, ಕೊಹ್ಲಿಯ ವಿಶ್ವರೂಪದ ಮುಂದೆ ಶಾಹೀನ್ ಆಫ್ರಿದಿ, ಮೊಹಮ್ಮದ್ ಅಮಿರ್ ಆಟ ನಡೆಯೋದು ಸುಲಭದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ