newsfirstkannada.com

×

PHOTO: ರಾಕಿಂಗ್​ ಸ್ಟಾರ್​ ಯಶ್​ ಮಕ್ಕಳಿಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟ ಡಾರ್ಲಿಂಗ್​ ಪ್ರಭಾಸ್​​.. ಏನದು?

Share :

Published June 5, 2024 at 6:39pm

    ಯಶ್​ ಮಕ್ಕಳ ಜೊತೆಗೆ ಯಾವಾಗಲೂ ಇರಲಿದ್ದೇನೆ ಎಂದ ಪ್ರಭಾಸ್​

    ಕಲ್ಕಿ 2898 ಎಡಿ ಸಿನಿಮಾದ ಬಗ್ಗೆ ನಟಿ ರಾಧಿಕಾ ಪಂಡಿತ್ ಏನಂದ್ರು?

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ಫೋಟೋ

ಸ್ಯಾಂಡಲ್​ವುಡ್​ ನಟ ರಾಕಿಂಗ್​ ಸ್ಟಾರ್​ ಯಶ್​ ಸದ್ಯ ಟಾಕ್ಸಿಕ್ ಸಿನಿಮಾ ಶೂಟಿಂಗ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ರಾಕಿಂಗ್​ ಸ್ಟಾರ್​ ಯಶ್ ಅವರ ಮುದ್ದಾದ ಮಕ್ಕಳಿಗೆ ಪ್ಯಾನ್ ಇಂಡಿಯಾ ಸ್ಟಾರ್ ಡಾರ್ಲಿಂಗ್​​ ಪ್ರಭಾಸ್‌ ಅವರು ಒಂದು ಪುಟಾಣಿ ಸರ್ಪ್ರೈಸ್ ನೀಡಿದ್ದಾರೆ.

ಹೌದು, ನಟ ಡಾರ್ಲಿಂಗ್​ ಪ್ರಭಾಸ್​ ಅವರು ರಾಕಿಂಗ್​ ಸ್ಟಾರ್​ ಯಶ್ ಹಾಗೂ ರಾಧಿಕಾ ಪಂಡಿತ್​ ಅವರ ಮಕ್ಕಳಾದ ಆಯ್ರಾ ಮತ್ತು ಯಥರ್ವ್‌ಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಅದು ಕೂಡ ಹೈದರಾಬಾದ್‌ನಿಂದ ಆ ಗಿಫ್ಟ್​ ಅನ್ನು ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ನಡು ರಸ್ತೆಯಲ್ಲೇ ರೌಡಿಶೀಟರ್ ಮೇಲೆ ಡೆಡ್ಲಿ ಅಟ್ಯಾಕ್; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇನ್ನು, ಇಬ್ಬರು ಮಕ್ಕಳಿಗೆ ಸಿಕ್ಕ ಉಡುಗೊರೆಯ ಬಗ್ಗೆ ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಶೇರ್ ಮಾಡಿಕೊಂಡ ಪೋಸ್ಟ್​ನಲ್ಲಿ ಥ್ಯಾಂಕ್ ಯೂ ಬುಜ್ಜಿ ಎಂದು ಬರೆದಿದ್ದಾರೆ ಯಶ್ ಮಕ್ಕಳಾದ ಆಯ್ರಾ ಮತ್ತು ಯಥರ್ವ್. ಜೊತೆಗೆ ಕಲ್ಕಿ 2989 ಎಡಿ ಸಿನಿಮಾಗೆ ಶುಭವಾಗಲಿ ಅಂತ ಬರೆದುಕೊಂಡಿದ್ದಾರೆ. ಆ ಗಿಫ್ಟ್​ನಲ್ಲಿ ಹಾಯ್ ಆಯ್ರಾ ಮತ್ತು ಯಥರ್ವ್. ನಾನು ಬುಜ್ಜಿ. ನಾನು ಭೈರವನ (ಪ್ರಭಾಸ್) ಬೆಸ್ಟ್ ಫ್ರೆಂಡ್. ಈಗ ನಿಮ್ಮ ಜೊತೆಗೂ ಇರಲಿದ್ದೇನೆ. ಬುಜ್ಜಿ ಎಂದರೆ ಚಿಕ್ಕವರು ಎಂದರ್ಥ. ಆದರೆ ನಾನು ಸಿನಿಮಾದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜೂನ್ 27ರಂದು ನಿಮ್ಮನ್ನೆಲ್ಲಾ ಥಿಯೇಟರ್‌ನಲ್ಲಿ ಮೀಟ್ ಮಾಡಲು ನಾನು ಕಾಯುತ್ತಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ನಟ ಪ್ರಭಾಸ್ ಅವರ ಮುಂದಿನ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕಾರು ಇದೆ. ಅದನ್ನು ಬುಜ್ಜಿ ಅಂತ ಕರೆಯಲಾಗಿದೆ. ಈ ಕಾರನ್ನು ಕಲ್ಕಿ ಸಿನಿಮಾಕ್ಕಾಗಿಯೇ ವಿಶೇಷವಾಗಿ ತಯಾರಿಸಲಾಗಿದೆ. ಅದಕ್ಕಾಗಿಯೇ ಸುಮಾರು 1 ಕೋಟಿ ರೂಪಾಯಿ ಕೂಡ ಖರ್ಚು ಮಾಡಲಾಗಿದೆಯಂತೆ. ಸಿನಿಮಾದಲ್ಲಿ ಹೀರೋ ಜೊತೆಗೆ ಈ ಕಾರು ಯಾವಾಗಲೂ ಇರಲಿದೆ. ಇದೀಗ ಈ ಬುಜ್ಜಿ ಮಾದರಿಯ ಗೊಂಬೆಯನ್ನು ಯಶ್‌ ಮಕ್ಕಳಿಗೆ ಗಿಫ್ಟ್ ನಟ ಪ್ರಭಾಸ್​ ಗಿಫ್ಟ್ ನೀಡಿದ್ದಾರೆ.

ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ನಟ ಪ್ರಭಾಸ್ ಅವರು ಸದ್ಯ ಕಲ್ಕಿ 2898 ಎಡಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಇನ್ನೇನೂ ಇದೇ ಜೂನ್ 27ರಂದು ಬಹುಭಾಷೆಯಲ್ಲಿ ಕಲ್ಕಿ 2898 ಎಡಿ ಸಿನಿಮಾ ತೆರೆಗೆ ಬರಲಿದೆ. ನಾಗ್ ಅಶ್ವಿನ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಅಶ್ವಿನಿದತ್ ಅವರು ಸುಮಾರು 600 ಕೋಟಿ ರೂ. ಬಂಡವಾಳ ಹೂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ರಾಕಿಂಗ್​ ಸ್ಟಾರ್​ ಯಶ್​ ಮಕ್ಕಳಿಗೆ ಸರ್ಪ್ರೈಸ್​ ಗಿಫ್ಟ್​ ಕೊಟ್ಟ ಡಾರ್ಲಿಂಗ್​ ಪ್ರಭಾಸ್​​.. ಏನದು?

https://newsfirstlive.com/wp-content/uploads/2024/06/yash.jpg

Load More