ಇಂದು ಟೀಮ್ ಇಂಡಿಯಾ, ಐರ್ಲೆಂಡ್ ತಂಡದ ಮಧ್ಯೆ ರೋಚಕ ಪಂದ್ಯ
ಐರ್ಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್..!
ಇಂದು ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ.
ಐರ್ಲೆಂಡ್ ನೀಡಿದ ಸಾಧಾರಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಓಪನಿಂಗ್ ಮಾಡಿತು. ವಿರಾಟ್ ಕೊಹ್ಲಿ 1 ರನ್ಗೆ ವಿಕೆಟ್ ಒಪ್ಪಿಸಿ ಕೈಕೊಟ್ಟರು.
ಬಳಿಕ ಕ್ರೀಸ್ನಲ್ಲೇ ನಿಂತು ಆಡಿದ ರೋಹಿತ್ ಶರ್ಮಾ ತಾನು ಆಡಿದ 37 ಬಾಲ್ನಲ್ಲಿ ಅರ್ಧಶತಕ ದಾಖಲಿಸಿದ್ರು. ಬರೋಬ್ಬರಿ 3 ಭರ್ಜರಿ ಸಿಕ್ಸರ್, 4 ಫೋರ್ ಸಿಡಿಸಿದ್ರು. ರಿಷಭ್ ಪಂತ್ ಕೊನೆವರೆಗೂ ಬ್ಯಾಟ್ ಬೀಸಿ 2 ಸಿಕ್ಸರ್, 3 ಫೋರ್ನೊಂದಿಗೆ 36 ರನ್ ಚಚ್ಚಿದ್ರು.
ಟೀಮ್ ಇಂಡಿಯಾ 12.2 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಮೊದಲ ಗೆಲುವು ಸಾಧಿಸಿದೆ. ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಐರ್ಲೆಂಡ್ 16 ಓವರ್ನಲ್ಲಿ ಕೇವಲ 96 ರನ್ಗೆ ಆಲೌಟ್ ಆಗಿತ್ತು.
ಇದನ್ನೂ ಓದಿ: ಐರ್ಲೆಂಡ್ ಫಸ್ಟ್ ಬ್ಯಾಟಿಂಗ್.. ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರರೇ ಔಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ